ಬಿಜೆಪಿ ಯುವಮೋರ್ಚಾ ವತಿಯಿಂದ ಪ್ರಧಾನ ಮಂತ್ರಿ ಮೋದಿ ಅವರ “ಮನ್ ಕೀ ಬಾತ್” ವೀಕ್ಷಣೆ

ಯಾದಗಿರಿ: ಭವ್ಯ ಭಾರತದ ನೆಚ್ಚಿನ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀಯವರು ದೇಶದ ಕುರಿತು ಜನತೆಯನ್ನುದ್ದೇಶಿಸಿ ಮಾತನಾಡಲು, ಆಕಾಶವಾಣಿಯಲ್ಲಿ ನಡೆಸಿಕೊಡುವ “ಮನ್ ಕೀ ಬಾತ್” 122ನೇ ಕಾರ್ಯಕ್ರಮದ ನೇರಪ್ರಸಾರವನ್ನು ಇಂದು (ಬೆಳಗೇರಾ ಗ್ರಾಮದ ಬೂತ್ ಸಂಖ್ಯೆ 77ರಲ್ಲಿ) ವೀಕ್ಷಿಸಲಾಯಿತು.

ಮೋದಿಜಿ ಅವರು “ಮನ್ ಕೀ ಬಾತ್” ಕಾರ್ಯಕ್ರಮದಲ್ಲಿ ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟಕ್ಕೆ ಆಪರೇಷನ್ ಸಿಂಧೂರ್ ಹೊಸ ಶಕ್ತಿಯನ್ನು ನೀಡಿದೆ. ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯು ಭಾರತದ ಸಂಕಲ್ಪ, ಧೈರ್ಯ ಮತ್ತು ಬದಲಾಗುತ್ತಿರುವ ಭಾರತದ ಪ್ರತೀಕ.

ಕಾರ್ಯಾಚರಣೆ ಸಮಯದಲ್ಲಿ ನಮ್ಮ ಸೈನಿಕರು ತೋರಿಸಿದ ಧೈರ್ಯವು ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆ ತಂದಿದೆ. ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ದೇಶದ ವಿವಿಧ ಭಾಗಗಳಲ್ಲಿ ತಿರಂಗಾ ಯಾತ್ರೆಗಳನ್ನು ಆಯೋಜಿಸಲಾಯಿತು. ಸಾವಿರಾರು ಜನರು ತ್ರಿವರ್ಣ ಧ್ವಜವನ್ನು ಹಿಡಿದು ಸೈನಿಕರಿಗೆ ಗೌರವ ಸಲ್ಲಿಸಿದರು.

ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ್ ಸಾಹುಕಾರ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹೋನಾಗೇರಾ, ಯುವಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಮೌನೇಶ್ ಬೆಳಗೇರ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಲ್ಲು ಕೋಲಿವಾಡ, ಮಂಜುನಾಥ್ ಗುತ್ತೇದಾರ, ಕಾಶೀನಾಥ್ ದವನ್, ಶರಣು ಬಳಿಚಕ್ರ, ಬಸ್ಸು ಚಟರ್, ಅಯ್ಯಪ್ಪ ಪೂಜಾರಿ, ಜಗದೇವ್, ಮರ್ಲಿಂಗ, ಭೀಮರಾಯ, ಸಾಬಣ್ಣ, ಮಾಳಪ್ಪ ಪೂಜಾರಿ, ಸುನಿಲ್, ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!