ಮುಧೋಳ ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದಿಂದ 16 ಸಾಮೂಹಿಕ ಉಪನಯನ ಕಾರ್ಯಕ್ರಮ | ಐಎಎಸ್, ಐಪಿಎಸ್ ಗೆ ಮಕ್ಕಳನ್ನು ಸಿದ್ಧಗೊಳಿಸಿ
ಸೇಡಂ (ಕಲಬುರಗಿ) : ಉಪನಯನ ಕಾರ್ಯಕ್ರಮ ಧರ್ಮ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಎಸ್ ಎಸ್ ಕೆ ಸಮಾಜದ ರಾಜ್ಯಾಧ್ಯಕ್ಷ ಡಾ. ಶಶಿಕಾಂತ ಮೆಹರವಡೆ ಅಭಿಪ್ರಾಯಪಟ್ಟರು.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳನಲ್ಲಿ ಎಸ್ ಎಸ್ ಕೆ ಸಮಾಜದಿಂದ ಆಯೋಜಿಸಿದ್ದ 16 ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದ ಪದಾಧಿಕಾರಿಗಳು ನಮ್ಮ ಸಂಸ್ಕಾರಕ್ಕೆ ಪ್ರೇರಣಾದಾಯಕ ಕಾರ್ಯಕ್ರಮ ಆಯೋಜನೆ ಶ್ಲಾಘನೀಯ. ಈ ಕಾರ್ಯಕ್ರಮ ವಟುಗಳ ಹೊಸ ಜೀವನಕ್ಕೆ ನಾಂದಿ ಹಾಡಲಿದೆ. ಈ ಭಾಗದ ಬಂದಿರುವುದು ಸಂತಸ ತಂದಿದೆ.
ಸಮಾಜದ ಸಂಘಟನೆಗೆ ಸಾಕಷ್ಟು ಕಾರ್ಯ ಯೋಜನೆ ರೂಪಿಸಲಾಗುತ್ತಿದೆ. ಎಲ್ಲಾ ರಂಗದಲ್ಲೂ ಮುಂದುವರೆಯುತ್ತಿರುವುದು ಶ್ಲಾಘನೀಯ. ಶೈಕ್ಷಣಿಕವಾಗಿ ಇನ್ನಷ್ಟು ಪ್ರಗತಿ ಹೊಂದಲು ಐಎಎಸ್, ಐಪಿಎಸ್, ಕೆಎಎಸ್ ವ್ಯಾಸಾಂಗಕ್ಕೆ ಪ್ರೋತ್ಸಾಹಿಸಲು ಸಲಹೆ ನೀಡಿದರು. ಇದಕ್ಕೆ ಸಮಾಜದ ಸಹಕಾರವು ಇದೆ ಎಂದು ಭರವಸೆ ನೀಡಿದರು.
ರಾಜ್ಯ ಉಪಾಧ್ಯಕ್ಷ ಮಾರುತಿ ರಾವ್ ಪವಾರ್ ಮಾತನಾಡಿ, ಇದೊಂದು ಪವಿತ್ರ ಸಂಸ್ಕಾರವಾಗಿದೆ. ಆಧುನಿಕತೆ ಭರಾಟೆಯಲ್ಲಿ ಧರ್ಮ, ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಈ ಕ್ರಮ ಶ್ಲಾಘನೀಯ ಎಂದು ವರ್ಣಿಸಿದರು. ಸಮಾಜದ ಅಭಿವೃದ್ಧಿ ದಿಸೆಯಲ್ಲಿ ಸಾಗಲಿ ಎಂದು ಹಾರೈಸಿದರು.
ಎಬಿಎಸ ಕೆ. ಕಾರ್ಯದರ್ಶಿ ರಾಮಚಂದ್ರ ಕಬಾಡೆ, ಗುರುಮಠಕಲ್, ಮುಧೋಳ ಭಾಗದ ಸಮಾಜಗಳು ಆದರ್ಶವಾಗಿದೆ. ಶೈಕ್ಷಣಿಕ ಪ್ರಗತಿಗೆ ಸಾಧನೆ ಮಾಡುತ್ತಿದ್ದಾರೆ. ಹಿರಿಯರ ಶ್ರಮಕ್ಕೆ ಫಲ ಸಿಕ್ಕಿದೆ. ಇತರರಿಗೆ ನೌಕರಿ ಕೊಡುವ ಮಟ್ಟಕ್ಕೆ ಬೆಳೆಯಬೇಕು ಎಂದು ಸಲಹೆ ನೀಡಿದರು. ಪ್ರತಿ ಸಮಾಜಗಳಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮ ನಡೆಯಬೇಕು ಎಂದರು.
ನಂದಕಿಶೋರ್ ಚೌದ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜ ನಡೆದು ಬಂದ ಅಭಿವೃದ್ಧಿ ಪಥದ ಕುರಿತು ವಿವರಿಸಿದರು. ಈ ಭಾಗದ ಸಮಾಜದ ಜನರ ಆರ್ಥಿಕ ಜೀವನ, ಶೈಕ್ಷಣಿಕ ಜೀವನದ ಕುರಿತು ತಿಳಿಸಿದರು. ಸಮಾಜದ ಯುವ ಪೀಳಿಗೆ 9 ಜನ ವೈದ್ಯ, 4 ವೈದ್ಯಕೀಯ ಶಿಕ್ಷಣ 17 ಇಂಜಿನಿಯರ್, ಶಿಕ್ಷಕರು ಹಲವು ವೃತ್ತಿಗಳಲ್ಲಿರುವುದು ಹೆಮ್ಮೆಯ ವಿಷಯ ಎಂದರು.
ಮುಧೋಳ ಸಮಾಜದ ಅಧ್ಯಕ್ಷ ಕೇಶವ ಬಿ. ಗಾಂಜಿ ಮಾತನಾಡಿ, ಕಾರ್ಯಯಕ್ರಮ ಶಸ್ವಿಗೊಳಿಸಿದ್ದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಡಾ. ಯಶವಂತರಾವ ಮೇಂಗಜಿ, ಚಂದುಲಾಲ ಚೌಧರಿ, ರಾಜಕುಮಾರ ಚವ್ಹಾಣ, ರಾಜೇಂದ್ರ ಹಬೀಬ, ಬಾಲಾಜಿ ಬುರಬುರೆ, ನಾಗೇಶ ಅರಸಿದ, ನಾರಾಯಣರಾವ್ ಹಬೀಬ, ಹೀರಾಲಾಲ ಶ್ರೀ ಗಿರಿ, ಮೋಹನ್ ಕುಮಾರ ಖೇವಜಿ, ರಘುವೀರ್ ಹೌಜಿ, ಶಂಕರರಾವ ಮೈಲವಾರ, ವೆಂಕಟರಾವ್ ಖೇವಜಿ, ಕೇಶವ ಬಲರಾಮ ಗಾಂಜಿ ಮುಧೋಳ ಅಧ್ಯಕ್ಷ, ಸಂಜಯ ಗುಜರಾತಿ, ವಿಜಯ ಕುಮಾರ ಖೇವಜಿ, ವಿಠ್ಠಲರಾವ ಖೇವಜಿ, ರಾಮರಾವ ತಿರುಮಲ, ಬಲರಾಮ ಹಬೀಬ, ಡಾ. ಶ್ರೀನಿವಾಸ ಮಿಸ್ಕಿನ್, ನರೇಂದ್ರ ಮಿಸ್ಕಿನ್, ಸುನೀಲ್ ತಿರುಮಲ, ಪಂಡರಿ ಬಸೂದೆ, ಶಶಿ ಹೌದಿ, ನಾಗೇಶ ಬಸೂದೆ, ರಮೇಶ ಗಾಂಜಿ, ಶಿವು ಬಸೂದೆ, ರಾಕೇಶ್ ತಗಡಘರ, ತುಳಸಿರಾಮ ಬಸೂದೆ, ಮಾಣಿಕರಾವ ತಿರುಮಲ, ಅನೀಲ ತಿರುಮಲ, ಅನೀಲ ಖೇವಜಿ, ಬಾ. ಸಂತೋಷ್ ದಾದಾಪುರೆ ಸೇರಿದಂತೆ ಮಹಿಳಾ ಮಂಡಳದ ಪ್ರಮುಖರಾದ ಸುನಿತಾ ಆರ್. ತಗಡಘರ, ಶಾಂತಾಬಾಯಿ ಬಸೂದೆ, ಶುಭಾಂಘಿ ತಿರುಮಲ, ಅಶ್ವಿನಿ ವಿ. ಖೇವಜಿ, ಮಹೇಶ್ವರಿ ಮಿಸ್ಕಿನ್, ಸ್ವಾತಿ ಖೇವಜಿ ಇತರರು ಇದ್ದರು.
ವಿಶ್ವನಾಥ ತಗಡಘರ ಧನ್ಯವಾದ ಅರ್ಪಿಸಿದರು. ಡಾ.ರೂಪಾ ದಾದಾಪುರೆ ನಿರೂಪಿಸಿದರು.
