ರೈತರಿಗೆ ಸಕಾಲದಲ್ಲಿ ರಸಗೊಬ್ಬರ ಪೂರೈಸಲು ಜಯ ಕರ್ನಾಟಕ ಆಗ್ರಹ | ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ
ಗುರುಮಠಕಲ್: ತಾಲೂಕಿನ ರೈತರಿಗೆ ಡಿಎಪಿ, ಸ್ಪಿಕ್ ರಸಗೊಬ್ಬರಗಳು ಸಿಗದೇ ದಿನನಿತ್ಯ ಅಂಗಡಿಗಳ ಸುತ್ತಲೂ ಅಲೆದಾಡುತ್ತಿದ್ದಾರೆ ಈ ಕೂಡಲೇ ರೈತರ ಬೇಡಿಕೆಗೆ ಅನುಗುಣವಾಗಿ ಸ್ಪಿಕ್, ಡಿಎಪಿ ರಸಗೊಬ್ಬರಗಳನ್ನು ಒದಗಿಸುವಂತೆ ಜಯ ಕರ್ನಾಟಕ ಸಂಘಟನೆಯ ತಾಲೂಕ ಘಟಕ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಬಳಿಕ ಜಯ ಕರ್ನಾಟಕ ಸಂಘಟನೆಯ ತಾಲೂಕ ಅಧ್ಯಕ್ಷ ನಾಗೇಶ್ ಗದ್ದಿಗಿ ಮಾತನಾಡಿ, ನಮ್ಮ ತಾಲ್ಲೂಕಿನ ರೈತರಿಗೆ ಪ್ರತಿ ಬಾರಿಯೂ ಯಾವುದೇ ಒಂದು ರೀತಿಯ ಸಮಸ್ಯೆ ಉಂಟಾಗುತ್ತಿದ್ದು ಅದರಂತೆಯೇ ಈ ಬಾರಿಯೂ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಸಿಗದೇ ರೈತರು ಬೇರೆ ರಾಜ್ಯಗಳತ್ತ ಮುಖ ಮಾಡಿದ್ದಾರೆ.
ಇಲ್ಲಿನ ರಸಗೊಬ್ಬರ ಅಂಗಡಿಗಳ ಮಾಲೀಕರು ಮೇಲಿಂದನೆ ನಮಗೆ ದಾಸ್ತಾನು ಬರ್ತಾ ಇಲ್ಲ ಎಂದು ಸಬೂಬು ಹೇಳುತ್ತಿದ್ದು, ಕೂಡಲೇ ರೈತರಿಗೆ ಬೇಡಿಕೆಗೆ ಅನುಗುಣವಾಗಿ ಗೊಬ್ಬರವನ್ನು ಪೂರೈಕೆ ಮಾಡಬೇಕು ದಾಸ್ತಾನು ಇದ್ದರೂ ಸಹ ರೈತರಿಗೆ ಪೂರೈಕೆ ಮಾಡದೆ ನಿಗದಿತ ದರಕ್ಕಿಂತ ಹೆಚ್ಚುವರಿ ಪಡೆದು ನೀಡುತ್ತಿರುವ ಅಂಗಡಿಗಳ ಮೇಲೆ ನಿಗಾವಹಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕ ಉಪಾಧ್ಯಕ್ಷ ಕಾಶಪ್ಪ ಬೋಯಾ, ಗೋಪಾಲಕೃಷ್ಣ ಮೇಧಾ, ರಾಮುಲು ಕೊಡಗಂಟಿ, ರವಿ ವಾರದ್, ರವಿ ಬೆಟ್ಟದಲ್ಲಿ, ಧಾನಿಯಲ್ ಚಿಂತನಹಳ್ಳಿ, ಜಗಪ್ಪ ಸೇರಿದಂತೆ ಇನ್ನೂ ಹಲವಾರು ರೈತ ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.
