ಲಿಂಗತ್ವ ಅಲ್ಪಸಂಖ್ಯತರ ನಿಂದನೆ ಮಾಡಿದ ಮಾಜಿ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷ | ಪೊಲೀಸರಿಗೆ ದೂರು

ಯಾದಗಿರಿ: ಲಿಂಗತ್ವ ಅಲ್ಪಸಂಖ್ಯತರ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಲ್ಲದೇ ಲಿಂಗತ್ವ ಅಲ್ಪಸಂಖ್ಯಾತರ ಸಲಿಂಗ ವಿವಾಹ ಬಗ್ಗೆ ಮಾತನಾಡಿ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷರ ವಿರುದ್ಧ ದೂರು ದಾಖಲಿಸಿ ಸಮುದಾಯಕ್ಕೆ ಹಾಗೂ ತಮಗೆ ನ್ಯಾಯ ಒದಗಿಸಬೇಕೆಂದು ಚೇಂಜ್ ಫೌಂಡೇಷನ್ ಅಧ್ಯಕ್ಷೆ ಮಾಯಾ ಎಸ್.ಆರ್. ನಾಯಕ ಆಗ್ರಹಿಸಿದ್ದಾರೆ.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಕುರಿತು ಗೃಹ ಸಚಿವರು, ಹಾಗೂ ಕರ್ನಾಟಕ ಪೊಲಿಸ್ ಮಹಾನಿರೀಕ್ಷಕರು ಸೇರಿದಂತೆ ಯಾದಗಿರಿ ಡಿಸಿ, ಎಸ್.ಪಿ. ಅವರಿಗೆ ಲಿಖಿತ ದೂರು ಸಲ್ಲಿಸಲಾಗಿದೆ ಎಂದಿದ್ದಾರೆ.

ಸಮುದಾಯದ ಬಗ್ಗೆ ಅತ್ಯಂತ ಹಗುವರವಾಗಿ ಮಾತನಾಡಿದ್ದಲ್ಲದೇ ತನಗೆ ರಾಜಕೀಯ ಬೆಂಬಲ ಇದೆ, ನೆಟವರ್ಕ ಇದೆ ಎಂದು ಹೇಳಿ ಹೀಗಳೆದಿದ್ದು, ವೈಯಕ್ತಿಕವಾಗಿ ನಿಂದಿಸಿ, ತನ್ನ ಪರವಾಗಿ ಸಾಕ್ಷಿ ಹೇಳಿದವರ ವಿರುದ್ಧ ಅಲ್ಲದೇ ನನ್ನ ವಿರುದ್ದವೂ ಪ್ರತಿದೂರು ಸಲ್ಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಟಿಜಿ ಯಾಕ್ಟ್ 2019 ರ ಪ್ರಕಾರ ದೂರು ದಾಖಲಿಸಿಕೊಳ್ಳಬಹುದು. ಆದರೆ ಲಿಖಿತ ದೂರು ಸಲ್ಲಿಸಿದರೂ ಇದುವರೆಗೆ 11 ದಿನವಾದರೂ ದೂರು ದಾಖಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ಮನವಿಗೆ ಸ್ಪಂದನೆ ಸಿಗದೇ ಇದ್ದಲ್ಲಿ ಮುಂಬುರವ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!