ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ | ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ

ಯಾದಗಿರಿ: ಸದನದಲ್ಲಿ ನಾಡಿನ ಸಾಮಾಜಿಕ, ಶೈಕ್ಷಣಿಕ, ಉದ್ಯೋಗ, ಆರ್ಥಿಕ, ಸಮುದಾಯಿಕ ವಿಷಯಗಳನ್ನು ಚರ್ಚೆ ಮಾಡುವುದನ್ನು ಬಿಟ್ಟು ಅಸಂವಿಧಾನಿಕವಾಗಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವೈಯಕ್ತಿಕವಾಗಿ ಸಚಿವ ಪ್ರಿಯಾಂಕ ಖರ್ಗೆ ಕುರಿತು ಮಾತನಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಾ.ಡಿ.ಜಿ. ಸಾಗರ ಬಾಣ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಎದುರು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಎನ್. ರವಿಕುಮಾರ್ ಅವರ ಸದಸ್ಯತ್ವ ರದ್ದು ಪಡಿಸಲು ಒತ್ತಾಯಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಚಿವ ಖರ್ಗೆ ಅವರನ್ನು ಟೀಕಿಸುವ ಭರದಲ್ಲಿ ಸಾರ್ವಜನಿಕವಾಗಿ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಮಾತುಗಳ ವಿರುದ್ಧ ಸಮುದಾಯವರು ತೀವ್ರ ಅಸಮಾಧಾನ ಗೊಂಡಿದ್ದಾರೆ ಎಂದರು.

ಎನ್ ರವಿಕುಮಾರ್ ಅವರು ಜವಾಬ್ದಾರಿ ಸ್ಥಾನದಲ್ಲಿದ್ದು ಅವಹೇಳನಕಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ರಾಜ್ಯಪಾಲರಿಗೆ ಬರೆದ ಮನವಿಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಚಂದಪ್ಪ ಮುನಿಯಪ್ಪನೋರ, ಶಿವಲಿಂಗ ಹಸನಾಪುರ, ಭೀಮಣ್ಣ ಹುಣಸಗಿ, ಮಲ್ಲಿಕಾರ್ಜುನ ಹುರಸಗುಂಡಗಿ, ಬಲಭೀಮ ಬೇವಿನಹಳ್ಳಿ, ಅಲ್ಲಾ ಪಟೇಲ್ ಮಕ್ತಾಪುರ, ಮರೆಪ್ಪ ಕ್ರಾಂತಿ, ತಿಪ್ಪಣ್ಣ ಶೆಳ್ಳಿಗಿ, ವಾಸು ಕೋಗಿಲ್ಕರ, ಶರಬಣ್ಣ ದೊರನಹಳ್ಳಿ, ರಂಗಸ್ವಾಮಿ ಕೊಂಕಲ್, ನಾಗರಾಜ್ ಕೊಡಮನಹಳ್ಳಿ, ಸಿದ್ದಪ್ಪ ಕೊಡಮನಹಳ್ಳಿ, ಖಾಜಾ ಅಜ್ಮೀರ್ ಎಂ ಪಟೇಲ್, ವೆಂಕಟೇಶ ದೇವಾಪುರ, ಚೆನ್ನಪ್ಪ ದೇವಾಪುರ, ಜೈಭೀಮ್ ಸಿಂಗನಹಳ್ಳಿ, ಪರಶುರಾಮ ಸಿಂಗನಹಳ್ಳಿ, ಪಾರಪ್ಪ ತಳವಾರಗೇರ, ಮಲ್ಲು ಕೋಳಿ, ಭೀಮಾಶಂಕರ ಗುಂಡಳ್ಳಿ,  ಪುರುಷೋತ್ತಮ ಬಬಲಾದ, ಶ್ರೀಮಂತ ಹೊಸಮನಿ, ಅಶೋಕ್ ಸಿಂಗನಹಳ್ಳಿ, ಸಂತೋಷ್ ಹಾದಿಮನಿ, ರಾಜು ಹಬ್ಬಳ್ಳಿ ಇತರರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!