ಅಗ್ನಿ ತುಳಿಯುವ ವೇಳೆ ಬಂದೋಬಸ್ತ್ ಹೆಚ್ಚಿಸಿ | ದಫನ್ ದಿನ ಮದ್ಯ ಬಂದ್ ಮಾಡಿ
ಯಾದಗಿರಿ: ಜಿಲ್ಲೆಯ್ಯಾದ್ಯಂತಹ ಮೊಹರಂ ಹಬ್ಬ ಆಚರಿಸುತ್ತಿದ್ದು, ಸದರಿ ಉತ್ಸವಗಳಲ್ಲಿ ಬೆಂಕಿ ಅನಾಹುತದಿಂದ ಈ ಹಿಂದೆ ಪ್ರಾಣ ಕಳೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಅಗ್ನಿ ತುಳಿಯುವ ಸಂಧರ್ಭದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ ಹಾಗೂ ದಫನ್ ದಿನ ಮಧ್ಯದ ಅಂಗಡಿ ಬಂದ್ ಮಾಡಿಸಿ ಯಾವುದೇ ಅವಘಡ ಸಂಭವಿಸದಂತೆ ಕ್ರಮ ವಹಿಸಲು ಜಿಲ್ಲಾಡಳಿತಕ್ಕೆ ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಪ್ರದೀಪ್ ಅಣಬಿ ಮನವಿ ಸಲ್ಲಿಸಿದ್ದಾರೆ.

ಶಹಾಪುರ, ಯಾದಗಿರಿ, ಸುರಪುರ, ವಡಗೇರಾ, ಹುಣಸಗಿ, ಗುರಮಿಠಕಲ್ಯಲ್ಲಿ ಭಾವಕ್ಯತೆ ಹಬ್ಬವಾದ ಮೊಹರಂ ಹಬ್ಬ ತುಂಬಾ ಶ್ರದ್ಧಾಭಾವದಿಂದ ಆಚರಿಸುತ್ತಿದ್ದು, ಹಿಂದೂ-ಮುಸ್ಲಿಮರು ಸೇರಿ ಈ ಹಬ್ಬವನ್ನು ಆಚರಿಸುತ್ತಾರೆ. ಇಂತಹ ಉತ್ಸವಗಳಲ್ಲಿ ಬೆಂಕಿ ಅನಾಹುತವಾಗಿ ಈ ಹಿಂದೆ ಪ್ರಾಣ ಕಳೆದುಕೊಂಡಿದ್ದು ಇರುತ್ತದೆ.
ಈ ಹಿನ್ನಲೆಯಲ್ಲಿ ಮೊಹರಂ ಆಚರಿಸುವ ದೇವರುಗಳು ಕೂಡಿಸುವ ಸ್ಥಳದಲ್ಲಿ ನಡೆಯುವ ಬೆಂಕಿ ತುಳಿಯುವ (ಅಗ್ಗಿ ತುಳಿಯುವುದು) ಸಂಧರ್ಭದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ ಒದಗಿಸುವ ಯಾವುಧೆ ಅವಘಡ ಸಂಭವಿಸದಂತೆ ಕ್ರಮ ಕೈಗೊಳ್ಳಬೇಕು.
ಸದರಿ ಉತ್ಸವದ ಕೊನೆಯ ದಿನ ಧಫನ್ ದಿನದಂದು ಜಿಲ್ಲೆಯ ಎಲ್ಲಾ ಬಾರ್ಗಳನ್ನು ಬಂದ್ ಮಾಡಿಸಿ ಶಾಂತಿ ಸುವ್ಯವಸ್ಥೆ ಕೈಗೊಳ್ಳಲು ಅನುಕೂಲ ಮಾಡಿಕೊಡಲಕ ಮನವಿ ಮಾಡಿದ್ದಾರೆ.
