ಸಾಮಾಜಿಕ ಭದ್ರತೆ ಯೋಜನೆಗಳ ಪರಿಪೂರ್ಣತೆ ಜಾಗೃತಿ ಅಭಿಯಾನ | ರಾಮಸಮುದ್ರಕ್ಕೆ ಭೇಟಿ ಕಾಮಗಾರಿ ಪರಿಶೀಲನೆ
ಯಾದಗಿರಿ : ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಕುಟುಂಬದ ಆರ್ಥಿಕ ಭದ್ರತೆಯ ಹಾಗೂ ರಕ್ಷಣೆ ನೀಡುವಲ್ಲಿ ಜೀವ ವಿಮಾ ಪಾಲಿಸಿಗಳ ಪಾತ್ರ ಮಹತ್ವದ್ದು, ಆದ್ದರಿಂದ ಎಲ್ಲಾ ಕೂಲಿಕಾರ್ಮಿಕರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆ ವಿಮೆ ಮಾಡಿಸಿಕೋಳ್ಳಲು ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರ ಜನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನರೇಗಾ ಯೋಜನೆಯಡಿಯಲ್ಲಿ ಕೂಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಈ ಯೋಜನೆ ಕಡ್ಡಾಯವಾಗಿ ವಿಮೆ ಮಾಡಿಸುವಂತೆ ತಿಳಿಸಿದರು.
ರಾಮಸಮುದ್ರ ಗ್ರಾಮ ಪಂಚಾಯತಿಯ ನರೇಗಾ ಯೋಜನೆಯಡಿಯಲ್ಲಿ ಕಂದಕ ಬಧು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಾಗಾರಿ ಪರಿವೀಕ್ಷಣೆ ಮಾಡಿ ಮಾತನಾಡಿದರು.
ಮಳೆಗಾಲ ಪ್ರಾರಂಭವಾಗಿದ್ದು ಮಳೆ ನೀರು ಸರಾಗವಾಗಿ ಹರಿಯದಂತೆ ತಡೆಯಲು ಹಾಗೂ ಭೂಮಿಯ ಅಂತರ್ಜಲ ಮಟ್ಟ ಹೆಚ್ಚಿಸಲು ಇಂತಹ ಕಾಮಗಾರಿ ಗಳನ್ನು ಹಮ್ಮಿಕೊಳ್ಳುವುದು ಅತಿ ಅವಶ್ಯಕವಿದೆ ಎಂದು ತಿಳಿಸಿದರು.
ಪ್ರತಿಯೊಬ್ಬ ಕೂಲಿ ಕಾರ್ಮಿಕರು ಸಾಮಾಜಿಕ ಭದ್ರತೆ ದೃಷ್ಠಿಯಿಂದ ಕಡ್ಡಾಯವಾಗಿ ವಿಮೆ ಮಾಡಿಸಿ ಅದರ ಪ್ರಯೋಜನಾ ಪಡೆದುಕೋಳ್ಳುವಂತೆ ಕೂಲಿಕಾರ್ಮಿಕರಿಗೆ ತಿಳಿಸಿದರು.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆಯ 18 ರಿಂದ 50 ವರ್ಷ ಒಳಪಟ್ಟ ವ್ಯಕ್ತಿಗೆ ವಾರ್ಷಿಕವಾಗಿ ₹436 ರೂಪಾಯಿ ಪಾವತಿಸಿದರೆ ಯಾವುದೇ ರೀತಿಯ ಸಾವು ಸಂಬಂವಿಸಿದರೆ ಕುಟುಂಬ ಸದಸ್ಯರಿಗೆ 2 ಲಕ್ಷ ಪರಿಹಾರ ಸಿಗುತ್ತದೆ. ಅದೇ ರೀತಿ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ 18 ರಿಂದ 70 ವರ್ಷ ಒಳಪಟ್ಟ ವ್ಯಕ್ತಿಗೆ ವಾರ್ಷಿಕಾವಾಗಿ ₹20 ರೂಪಾಯಿಗಳು ಪಾವತಿಸಿದರೆ, ಮೃತರ ಕುಟುಂಬದ ಸದಸ್ಯರಿಗೆ 2 ಲಕ್ಷ ಪರಿಹಾರ ಇದೆ.
ಅಟಲ್ ಪಿಂಚಣಿ ವಿಮೆ ಯೋಜನೆ 18 ರಿಂದ 40 ವರ್ಷದವರಿಗೆ ವಯೋಮಿತಿ ಆಧಾರದ ಮೇಲೆ ಇರುವ ಕೂಲಿಕಾರ್ಮಿಕರು ಈ ಯೋಜನೆಯಲ್ಲಿ ಹಣ ಉಳಿತಾಯ ಮಾಡಿದರೆ 60 ವರ್ಷ ವಯಸ್ಸಾದ ವೃದ್ದರು ವಯಸ್ಕರಿಗೆ ಪಿಂಚಣಿ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದರು.
ನಾವು ಬ್ಯಾಂಕ್ ಸಿಬ್ಬಂದಿ ಎಂಬ ಹೆಸರಿನಿಂದ , ಯಾರಾದರೂ ತಮ್ಮ ಪೋನ್ಗೆ ಕರೆ ಮಾಡಿ ಓ.ಟಿ.ಪಿ ಕೇಳಿ ವಂಚಿಸುವ ಜನರಿದ್ದಾರೆ ಇಂತಹ ವಂಚನೆಗಳಿಗೆ ತುತ್ತಾಗಬಾರದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ ಚಟ್ನಳ್ಳಿ, ಯೋಜನಾ ನಿರ್ದೇಶಕ ಸಿ.ಬಿ ದೇವರಮನಿ, ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಬಾಬಳಗಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಭೀಮರಾವ ಪಾಂಚಾಳ, ಗ್ರಾ.ಪಂ.ಅಧ್ಯಕ್ಷೆ ಆನಂದಮ್ಮ ಜಲ್ಲಪನೋರ, ಸಂಜಯ ಕುಮಾರ ವ್ಯವಸ್ಥಾಪಕ ಎಸ್.ಬಿ.ಐ, ಜಿ.ಎಸ್.ಕೋಡ್ಲಿ ವ್ಯವಸ್ಥಾಪಕರು ಪಿ.ಕೆ.ಜಿ.ಬಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಗ್ರಾ.ಪಂ.ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
