ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರಣೇಶ ನೇತೃತ್ವ | ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೂಟ್ ಮಾರ್ಚ್

ಗುರುಮಠಕಲ್ : ಮೊಹರಂ ಹಿನ್ನೆಲೆ ಶನಿವಾರ ರಾತ್ರಿ ಪ್ರಸಿದ್ಧ ನಬಿಸಾಬ ಸವಾರಿ ನಡೆಯಲಿದ್ದು, ರವಿವಾರ ಹಗಲು ಸವಾರಿ ನಡೆಯಲಿದ್ದು, ಗುರುಮಠಕಲ್ ಪೊಲೀಸರು ಪಥ ಸಂಚಲನ ನಡೆಸಿದರು.

ಪೊಲೀಸ್ ಠಾಣೆಯಿಂದ ಹೊರಟು ಗಂಗಾಪರಮೇಶ್ವರಿ ವೃತ್ತ, ನಿಜಶರಣ ಅಂಬಿಗರ ಚೌಡಯ್ಯ ವೃತ್ತ, ಮಲ್ಲಯ್ಯ ಕಟ್ಟ ಮಾರ್ಗವಾಗಿ ಪಥ ಸಂಚಲನ ನಡೆಯಿತು.

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರಣೇಶ ನೇವಹಿಸಿದ್ದರು, ಸೈಬರ್ ಅಪರಾಧ ಹಾಗೂ ಪ್ರಭಾರಿ ಡಿವೈಎಸ್ಪಿ ನಾಗರಾಜ, ಡಿಆರ್ ಡಿವೈಎಸ್ಪಿ ಭರತ ತಳವಾರ, ಪಿಐ ವೀರಣ್ಣ ದೊಡ್ಡಮನಿ, ಪಿಎಸ್ಐ ದಿನೇಶ್ ಸೇರಿದಂತೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಈ ಹಿಂದೆಯೇ ಗುರುಮಠಕಲ್ ಠಾಣೆಯಲ್ಲಿ ಶಾಂತಿ ಸಭೆ ನಡೆಸಿ, ಶಾಂತಿಯಿಂದ ಮೊಹರಂ ಆಚರಣೆಗೆ ಸೂಚಿಸಲಾಗಿತ್ತು. ಅಶಾಂತಿಗೆ ಕಾರಣವಾದವರ ಹೆಡೆಮುರಿ ಕಟ್ಟಲು ಪೊಲೀಸರು ಸಿದ್ಧರಾಗಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!