ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ವೇದಿಕೆ ಅಧ್ಯಕ್ಷರಿಂದ ಮನವಿ

ಯಾದಗಿರಿ: ಕಲ್ಯಾಣ ಕರ್ನಾಟಕದ ವ್ಯಾಪ್ತಿಯಲ್ಲಿ ಬರುವ ಯಾದಗಿರಿ ಜಿಲ್ಲೆಯಲ್ಲಿ ಮಂಜೂರು ಆಗಿರುವ ವಿವಿಧ ಇಲಾಖೆಗಳ ಅನುದಾನವು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯಿದೆ ಅನುಸಾರ ಟೆಂಡರ್‌ಗಳನ್ನು ಪಾರದರ್ಶಕವಾಗಿ ಅನುಷ್ಠಾನವಾಗಲು ಕ್ರಮವಹಿಸಿಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನರಸರೆಡ್ಡಿ ಪೊಲೀಸ್ ಪಾಟೀಲ್ ಮನವಿ ಮಾಡಿದ್ದಾರೆ.

ಯಾವುದೇ ತಾಲ್ಲೂಕ, ಗ್ರಾಮ ಪಂಚಾಯಿತಿ, ವಿಧಾನ ಸಭೆ ಹಾಗೂ ಲೋಕ ಸಭೆಯ ವ್ಯಾಪ್ತಿಯಲ್ಲಿ ಬರುವ ಕೆಟಿಪಿಪಿ (ಇ- ಟೆಂಡರ್ ಪ್ರಕಟಣೆ) ಕಾಮಗಾರಿಗಳು ಯಾವುದೇ ಸಾರ್ವಜನಿಕರಗ ಗಮನಕ್ಕೆ ಬರುವ ರೀತಿಯಲ್ಲಿ ನಾಮಫಲಕಗಳು ಇರುವುದಿಲ್ಲ.

ಎಲ್ಲಾ ಕಾಮಗಾರಿಗಳ ಮತ್ತು ಏಜೆನ್ಸಿ ಹೆಸರು, ಮಾಹಿತಿಗಳು ಸಹ ಸಾರ್ವಜನಿಕರಿಗೆ ಗೊತ್ತಾಗುವುದಿಲ್ಲ. ಅನೇಕ ಕಾಮಗಾರಿಗಳು ಕೆಆರ್ ಐಡಿಎಲ್ ಮತ್ತು ನಿರ್ಮಿತ ಕೇಂದ್ರಗಳು, ಕಾಮಗಾರಿಗಳು ನಿರ್ವಹಿಸುತ್ತಿದ್ದು ಎಲ್ಲಾ ಕಡೆ ಕೆಟಿಪಿಪಿ (ಇ- ಟೆಂಡರ್ ಪ್ರಕಟಣೆ ) ನಿಯಮಗಳನ್ನು ಪಾಲಿಸದೆ ಎಲ್ಲಾ ಕಡೆ ಕಳಪೆ ಕಾಮಗಾರಿಗಳು ಮಾಡಲಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಕೆಲವು ಕಾಮಗಾರಿಗಳನ್ನು ಮಾಡದೇ ಅನುದಾನಗಳನ್ನು ಬಿಡುಗಡೆ ಮಾಡಿಸಲಾಗಿರುವ ವರದಿಯಾಗಿದೆ. ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಬರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನವನ್ನು ಖುದ್ದು ಭೇಟಿ ನೀಡಿ ಕಾಮಗಾರಿಗಳ ಅನುಷ್ಠಾನದ ಬಗ್ಗೆ, ಮಾಹಿತಿ ಪಡೆದು ಕಳಪೆ ಕಾಮಗಾರಿ ಮತ್ತು ಕೆಟಿಪಿಪಿ (ಇ- ಟೆಂಡರ್ ಪ್ರಕಟಣೆ)ನಿಯಮದಂತೆ ಅನುಷ್ಠಾನ ಮಾಡಲು ಒತ್ತಾಯಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!