ಕಳೆದ ಮೇ ಮೊದಲ ವಾರ ಮಕ್ಕಳ ಸಹಾಯವಾಣಿ ಗೆ ಬಂದಿದ್ದ ಕರೆ | ಅಧಿಕಾರಿಗಳ ತಂಡ ಭೇಟಿ ನೀಡಿದಾಗ ಮನೆಯಲ್ಲಿ ಬೀಗರು ಮಾತ್ರ ಇದ್ದರು | ಮಧ್ಯಾಹ್ನ ವರೆಗೆ ಕಾದು ಸುಸ್ತಾಗಿದ್ದ ಅಧಿಕಾರಿಗಳು | ಪುನಃ ಮಾಹಿತಿ, ಮದುಮಗ ಸೇರಿ ಇಬ್ಬರ ಪಾಲಕರ ಮೇಲೆ ದೂರು

ಗುರುಮಠಕಲ್‌: ತಾಲೂಕಿನ ಯಂಪಾಡ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ದೂರು ಆಧರಿಸಿ ಗುರುಮಠಕಲ್ ಪೊಲೀಸರು ಮದುಮಗ ಸೇರಿದೆಂತೆ 5 ಜನರ ವಿರುದ್ಧ ಪ್ರಕರಣ ದಾಖಲಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

14 ವರ್ಷದ ಬಾಲಕಿಯನ್ನು ಅದೇ ಗ್ರಾಮದ ಆನಂದ ನೊಂದಿಗೆ 2025ರ ಮೇ. 02 ರಂದು ಅಂಜನೇಯ ದೇವಸ್ಥಾನ ಹಿಂದುಗಡೆ ಮನೆ ಮುಂದೆ ಬಾಲ್ಯವಿವಾಹ ಮಾಡುತ್ತಿರುವುದಾಗಿ ಮಕ್ಕಳ ಸಹಾಯವಾಣಿ 1098ಗೆ  ಕರೆ ಬಂದಿರುತ್ತದೆ. ದೂರಿನನ್ವಯ ಅಧಿಕಾರಿಗಳ ತಂಡ  ಭೇಟಿ ನೀಡಿದಾಗ ಸ್ಥಳೀಯರೊಂದಿಗೆ ವಿಚಾರಿಸಿದಾಗ ಮನೆಯಲ್ಲಿ ಕುಟುಂಬದ ಸಂಬಂಧಿಕರು ಸಹ ಮದುವೆ ಆಗಿರುವ ಬಗ್ಗೆ, ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ತಿಳಿದು ಬಂದಿದೆ.

ಬಾಲ್ಯ ವಿವಾಹ ಕಾನೂನು ರೀತಿ ಅಪರಾಧ, 18 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ, ಅದು ಅವರ ಹಕ್ಕು

ಮದುಮಗ, ಆತನ ಪಾಲಕರು ಮನೆಯಲ್ಲಿ ಇಲ್ಲದಿದ್ದರಿಂದ ಬಾಲ್ಯವಿವಾಹ ತಡೆಯಲು ಹೋದವರು ಬೆಳಗ್ಗೆ 10.00 ಗಂಟೆಯಿಂದ 3.00 ಗಂಟೆ ವರೆಗೆ ಇದ್ದರು, ಪ್ರಕರಣ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಬಾಲಕಿ ಜತೆ ಪೋಷಕರಿಗೆ ಜಿಲ್ಲಾ ಮಕ್ಕಳ ಸಮಿತಿ ಹಾಜರಾಗುವಂತೆ ಕುಟುಂಬದ ಸಂಬಂಧಿಕರಿಗೆ ತಿಳಿಸಲಾಗಿತ್ತು. ಆದರೇ ಇದನ್ನು ಪೋಷಕರು ನಿರ್ಲಕ್ಷಿಸಿದ್ದರು ಎನ್ನುವ ಅಂಶ ಬೆಳಕಿಗೆ ಬಂದಿದೆ.

ನಂತರ 2025ರ ಆ.1 ರಂದು ಮಕ್ಕಳ ಸಹಾಯವಾಣಿಗೆ ಅದೇ ಮಗುವಿಗೆ ಬಾಲ್ಯ ವಿವಾಹ ಆಗಿರುವ ಕುರಿತು ಫೋಟೋ, ಸಹಿತ ಪುನ:ದೂರು ಬಂದಿದು. 2025ರ  ಮೇ.2ರಿಂದ ಆಗಸ್ಟ್ 1ರೊಳಗೆ ವಿವಾಹ ಹುಡುಗನ ಮನೆಯ ಮುಂದೆ ನಡೆದಿರುವುದಾಗಿ 1098ಗೆ ಮಾಹಿತಿ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ದೂರಿನಂತೆ ಆನಂದ ದೊಡ್ಡ ಭೀಮಣ್ಣ. ದೊಡ್ಡ ಭೀಮಣ್ಣ, ಕಮಲಮ್ಮ. ಹುಸೇನಪ್ಪ, ಮಾಳಮ್ಮ ಇವರ ವಿರುದ್ಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಕಲಂ: 9,10. 11 ಬಾಲ್ಯ ವಿವಾಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!