125 ದಂಪತಿ ಸಾಮೂಹಿಕ ಪೂಜೆಯಲ್ಲಿ ಭಾಗಿ ನಿರೀಕ್ಷೆ, ಆಸಕ್ತರು ನೋಂದಣಿಗೆ ಮನವಿ | ಎರಡನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ | 12ನೇ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಗುರುಮಠಕಲ್: ಧರ್ಮ, ಸಂಸ್ಕ್ಕತಿ ಉಳಿಸುವ ಪ್ರಯತ್ನ ಹಾಗೂ ಲೋಕ ಕಲ್ಯಾಣಕ್ಕಾಗಿ ದಂಪತಿಗಳಿಂದ ಸಾಮೂಹಿಕ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವ್ಯವಸ್ಥಾಪಕ ನರೇಂದ್ರ ರಾಠೋಡ ತಿಳಿಸಿದರು. ಎಸ್ ಎಲ್ ಟಿ ಪಬ್ಲಿಕ್ ಸ್ಕೂಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರಾವಣ ಮಾಸದ ಶುಕ್ರವಾರ ಆ. 15 ದಂಪತಿಗಳಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ವಿವರಿಸಿದರು.

ಅಂದು ಬೆಳಗ್ಗೆ 5:30ಕ್ಕೆ ಸುಪ್ರಭಾತ ಸೇವಾ, 6:30ಗೆ ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವರಿಗೆ ಪಂಚಾಮೃತ ಅಭಿಷೇಕ ಅಲಂಕಾರ ಸೇವಾ ಮಹಾಪೂಜೆ 9:30ಕ್ಕೆ ಶ್ರೀ ವರಮಹಾಲಕ್ಷ್ಮಿ ಪೂಜೆ ಪ್ರಾರಂಭವಾಗುತ್ತದೆ 11:00 ರಥೋತ್ಸವ ನಂತರ ಮಹಾನೈವೇದ್ಯ, ಮಹಾ ಮಂಗಳಾರತಿ, ತದನಂತರದಲ್ಲಿ ತೀರ್ಥಪ್ರಸಾದ ವಿತರಣೆ ಮಾಡಲಾಗುತ್ತದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ವರಮಹಾಲಕ್ಷ್ಮಿ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿದ್ದಾರೆ.ಶ್ರೀ ವರಮಹಾಲಕ್ಷ್ಮಿ, ಪೂಟೆಯಲ್ಲಿ ಭಾಗವಹಿಸುವವರು ಮುಂಚಿತವಾಗಿ 8885011111, 7021261844 ದೂರವಾಣಿ ಸಂಖ್ಯೆಗೆ ಕರೆಮಾಡಿ ಹೆಸರನ್ನು ನೊಂದಾಯಿಸಿಕೊಳ್ಳಬಹುದು.(ಸಾಂಪ್ರದಾಯಕ ವಸ್ತ್ರದಾರಣೆಯೊಂದಿಗೆ ಪೂಜೆಯಲ್ಲಿ ಪಾಲ್ಗೊಳ್ಳಬೇಕು).

12ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ : ಆ.16ರಂದು ಶನಿವಾರ 16 ರಾತ್ರಿ 12.06 ಕ್ಕೆ ಶ್ರೀ ಕೃಷ್ಣ ಜನೋತ್ಸವ, ಆ. 17 ರವಿವಾರ ಬೆಳಗ್ಗೆ 9ಕ್ಕೆ ಬೋಡವಂಡ ಗ್ರಾಮದ `ಶ್ರೀ ಹನುಮಾನ ದೇವಸ್ಥನದಿಂದ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದವರೆಗೆ ಶ್ರೀಕೃಷ್ಣ ದೇವರ ಪಲ್ಲಕ್ಕಿ ಉತ್ಸವ ಜೊತೆಗೆ ಮೊಸರಿನ ಗಡಿಗಿ ಹೊಡೆಯುವುದು, ಬಣ್ಣದ ಓಕುಣ ಕಟ ಅಡುವುದು ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದ ಮಹಾದ್ವಾರದ ಹತ್ತಿರ ಮೊದಲನೆಯ ಮೊಸರಿನ ಗಡಿಗೆ ಹೊಡೆಯುವುದು.

ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನ ಸನ್ನಿಧಿಯಲ್ಲಿ ಎರಡನೇ ಮೊಸರಿನ ಗಡಿಗೆ ಹೊಡೆಯುವುದು. ಶ್ರೀಕೃಷ್ಣ ದೇವರಿಗೆ ರಥೋತ್ಸವ, ಊಂಜಲು ಸೇವೆ, ಮಹಾ ಮಂಗಳಾರತಿ ನಂತರ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿತರಣೆ ನೆರವೇರಲಿದೆ.

ಸಕಲ ಭಕ್ತಾಧಿಗಳು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ಕೃಷ್ಣದೇವರ ಕೃಪೆಗೆ ಪಾತ್ರರಾಗಬೇಕಾಗಿ ಗ್ರಾಮಸ್ಥರಾದ ಶರಣಪ್ಪ ಬೋರಬಂಡ, ಕಾಶಿನಾಥ ರಾಠೋಡ ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!