ಗುರುಮಠಕಲ್: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಕೋರಿಕೆ ಬಸ್ ನಿಲುಗಡೆ ಅನುಕೂಲವಾಗಲಿದೆ ಎಂದು ಪ್ರಾಂಶುಪಾಲ ಡಾ. ಪುರುಷೋತ್ತಮ ಜೋಶಿ ಹೇಳಿದರು. ಪಟ್ಟಣದ ಕಾಲೇಜು ಮಾರ್ಗ ದಲ್ಲಿ ನಿಲುಗಡೆ ಫಲಕ ಅಳವಡಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಇಳಿದು ಕಾಲೇಜಿಗೆ ಬರಲು ನಡೆದುಕೊಂಡು ಬಂರುವಂತಾಗಿತ್ತು, ಇದರಿಂದ ಸಮಯ ಹಾಳಾಗುತ್ತಿತ್ತು ಎಂದರು.ಸಿಡಿಸಿ ಸದಸ್ಯರಾದ ಗೋವಿಂದ ಮೇಂಗಜಿ ಮಾತನಾಡಿ, ಸಿಡಿಸಿ ಅಧ್ಯಕ್ಷರೂ ಆಗಿರುವ ಶಾಸಕ ಶರಣಗೌಡ ಕಂದಕೂರ ಅವರಿಗೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವ ಕುರಿತು ಗಮನಕ್ಕೆ ತರಲಾಗಿತ್ತು.

ಶೈಕ್ಷಣಿಕ ಅಭಿವೃದ್ಧಿ, ವಿದ್ಯಾರ್ಥಿಗಳ ಪರ ಕಾಳಜಿಯಿಂದ ಶಾಸಕರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು ಇದೀಗ  ಈ ಮಾರ್ಗದ ಬಸ್ ನಿಲ್ಲಲಿವೆ. ಇದರಿಂದ ಅನುಕೂಲವಾಗಲಿದೆ ಎಂದರು. ಈ ವೇಳೆ ಪುರಸಭೆ ಸದಸ್ಯ ಅಶೋಕ ಕಲಾಲ್, ಉಪನ್ಯಾಸಕ ಬಾಬುರಾಯ ದೊರೆ, ಸಿದ್ಧಲಿಂಗಪ್ಪ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!