ಬಿಜೆಪಿಯಿಂದ ವಿಭಜನಾ ಘೋರಾಪರಾಧ ಸ್ಮರಣೆ ದಿನ
ಯಾದಗಿರಿ: ನಗರದ ಸುಭಾಷ್ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಆಗಸ್ಟ್ 14 “ವಿಭಜನಾ ಘೋರಾಪರಾಧ ಸ್ಮರಣೆ”ಯ ದಿನವಾಗಿ ನೆನಪಿನಲ್ಲಿ ಉಳಿಯಲಿದೆ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಎಂದು ಹೇಳಿದರು.
ನಗರದ ಶುಭಾಶ್ಚಂದ್ರಬೋಸ ವೃತ್ತದಲ್ಲಿ ಸಮಾವೇಶ ಗೊಂಡ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ವಿಭಜನೆಯ ನೋವನ್ನು ದೇಶವು ಎಂದಿಗೂ ಮರೆಯುವುದಿಲ್ಲ. ದ್ವೇಷ ಮತ್ತು ಹಿಂಸೆಯಿಂದಾಗಿ, ನಮ್ಮ ಲಕ್ಷಾಂತರ ಸಹೋದರ-ಸಹೋದರಿಯರು ಸ್ಥಳಾಂತರಗೊಂಡರು ಮತ್ತು ತಮ್ಮ ಜೀವಗಳನ್ನು ಸಹ ಕಳೆದುಕೊಂಡರು. ಆ ಜನರ ಹೋರಾಟ ಮತ್ತು ತ್ಯಾಗದ ಸ್ಮರಣೆಯಾಗಿ ಆಗಸ್ಟ್ 14 ಅನ್ನು ವಿಭಿಶಿಕಾ ಮೆಮೊರಿಯಲ್ ಡೇ ಎಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಹಿರಿಯ ಮುಖಂಡೆ ನಾಗರತ್ನ ಕುಪ್ಪಿ ಮಾತನಾಡಿ, ದೇಶ ವಿಭಜನಾ ಘೋರಾಪರಾಧ ಸ್ಮರಣಾ ದಿನವು ತಾರತಮ್ಯ, ವೈರತ್ವ ಮತ್ತು ದುರಾಸೆಯ ವಿಷವನ್ನು ತೊಡೆದು ಹಾಕಲು ನಮಗೆ ಸ್ಫೂರ್ತಿ ನೀಡುವುದಲ್ಲದೆ, ಇದು ಏಕತೆ, ಸಾಮಾಜಿಕ ಸಾಮರಸ್ಯ ಮತ್ತು ಮಾನವ ಸಂವೇದನೆಗಳನ್ನು ಬಲಪಡಿಸುತ್ತದೆ “ಎಂದು ಪ್ರಧಾನಿ ಹೇಳಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ, ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ಸಿದ್ದನಗೌಡ ಕಾಡಂನೋರ, ರಾಚಣ್ಣಗೌಡ ಮುದ್ನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ ಮತ್ತು ಪರುಶುರಾಮ ಕುರಕುಂದಿ, ಜಿಲ್ಲಾ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಸಹ ಸಂಚಾಲಕಿ ಜಿಲ್ಲಾ ಶ್ರೀದೇವಿ ಶೆಟ್ಟಹಳ್ಳಿ, ಉಪಾಧ್ಯಕ್ಷ ಬಸವರಾಜ ಸೋನ್ನದ ಮತ್ತು ದೆವಿಂದ್ರಪ್ಪ ಕೊನೇರ, ಮಾರುತಿ ಕಲಾಲ್, ನಗರಸಭೆ ಉಪಾಧ್ಯಕ್ಷೆ ರುಕೀಯ್ ಬೇಗಂ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ್ ಕಾಡಂನೊರ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುನಿತಾ ಚೌವ್ಹಾಣ್, ಭೀಮಣ್ಣಗೌಡ ಖ್ಯಾತನಾಳ, ನಗರಸಭೆ ಸದಸ್ಯ ವಿಲಾಸ ಪಾಟೀಲ್ ಮತ್ತು ಸುರೇಶ್ ಅಂಬಿಗೇರ, ಸ್ವಾಮಿದೇವ ದಾಸನಕೆರಿ, ವಿಜಯಲಕ್ಷ್ಮಿ ನಾಯಕ, ಆನಂದ ಗಡ್ಡಿಮನಿ, ಮೋನೇಶ ಬೆಳಿಗೇರಿ, ರಮೇಶ್ ದೊಡಮನಿ, ಲಕ್ಷ್ಮಿಪುತ್ರ ಮಾಲಿಪಾಟೀಲ, ಕಾರ್ಯಾಲಯ ಕಾರ್ಯದರ್ಶಿ ಚನ್ನವೀರಯ್ಯ ಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
