ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ | ಮುಖಂಡರು, ಪದಾಧಿಕಾರಿಗಳು ಭಾಗಿ
ಯಾದಗಿರಿ: ಜಿಲ್ಲೆಯಾದ್ಯಂತ ಸಂಭ್ರಮದ ಸ್ವಾತಂತ್ರೋತ್ಸವ ಆಚರಿಸಲಾಯಿತು. ಸಂಘ ಸಂಸ್ಥೆಗಳು, ಸರ್ಕಾರಿ ಕಚೇರಿಗಳು ದೀಪಾಲಂಕಾರದಿಂದ ಝಗಮಗಿಸುತ್ತಿದ್ದವು.
ಬೆಳಿಗ್ಗೆ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನೆಲೆ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿ ಹಳ್ಳಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತದ ಸ್ವಾತಂತ್ರ್ಯ ದಿನವು ಪ್ರತಿಯೊಬ್ಬ ಪ್ರಜೆಗೆ ಮಹತ್ವದಾಗಿದೆ ಎಂದರು.
1947 ಆಗಸ್ಟ್ 15 ರಂದು ಬ್ರಿಟಿಷರ ಕಪಿಮುಷ್ಠಿಯಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು. ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಎಲ್ಲವನ್ನೂ ಪಣಕ್ಕಿಟ್ಟ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರಿಗೆ ನಮಸ್ಕರಿಸಬೇಕಾಗಿದೆ.
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷ ರೀತಿಯಲ್ಲಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಹಿನ್ನೆಲೆ ದೇಶದಾದ್ಯಂತ ಪ್ರತಿ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ‘ಹರ್ ಘರ್ ತಿರಂಗ’ ಅಭಿಯಾನವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಡಾ.ಶರಣಭೂಪಾಲ ರಡ್ಡಿ, ನಾಗರತ್ನ ಕುಪ್ಪಿ, ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ದೇವಿಂದ್ರನಾಥ ನಾದ, ಖಂಡಪ್ಪ ದಾಸನ, ವೆಂಕಟರಡ್ಡಿ ಅಬ್ಬೆತುಮಕೂರು, ಜಿಲ್ಲಾ ವಕ್ತಾರ ಹಣಮಂತ ಇಟಗಿ, ದೇವಿಂದ್ರಪ್ಪ ಕೊನೇರ, ಮಾರುತಿ ಕಲಾಲ್, ಬಸವರಾಜ ಚಂಡ್ರಕಿ, ರುದ್ರಗೌಡ ಪಾಟೀಲ್, ಭೀಮಣ್ಣಗೌಡ ಕ್ಯಾತನಾಳ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ನಗರಸಭೆ ಸದಸ್ಯ ಸುರೇಶ ಅಂಬಿಗರ, ಸ್ವಾಮಿದೇವ ದಾಸನಕೆರಿ, ಮಂಜುನಾಥ ದಾಸನಕೆರಿ, ಮಾರುತಿ ಕುಲಾಲ್, ಸುರೇಶ ಆಕಳ, ವೀಣಾ ಮೋದಿ, ಸುನಿತಾ ಚೌವ್ಹಾಣ್, ಚಂದ್ರಕಲಾ ಮಲೆಮಠ, ಶಕುಂತಲಾ, ಮಲ್ಲು ಕೊಲಿವಾಡ, ಮಲ್ಲು ಸ್ವಾಮಿ ಗುರುಸುಣಗಿ, ಮಹೇಶ್ ನಾಯಕ ನಕ್ಕಲ, ಶ್ರೀಕಾಂತ ಸುಂಗಲಕರ್ ಸೇರಿದಂತೆ ಬಿಜೆಪಿ ಅನೇಕರು ಕಾರ್ಯಕರ್ತರಿದ್ದರು.
