ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ | ಭವ್ಯ ರಥೋತ್ಸವ
ಗುರುಮಠಕಲ್: ಸುಕ್ಷೇತ್ರ ಬೋರಬಂಡ ಶ್ರೀಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಶ್ರಾವಣ ಶುಕ್ರವಾರ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ನೆರವೇರಿತು.
ಬೆಳಗ್ಗೆಯಿಂದಲೇ ಸುಪ್ರಭಾತ ಸೇವಾ, ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವರಿಗೆ ಪಂಚಾಮೃತ ಅಭಿಷೇಕ ಅಲಂಕಾರ ಸೇವಾ, ಶ್ರೀ ವರಮಹಾಲಕ್ಷ್ಮಿ ಪೂಜೆ ಜರುಗಿತು. ನೂರಾರು ಭಕ್ತರ ಮದ್ಯೆ ಅದ್ಧೂರಿ ರಥೋತ್ಸವದಲ್ಲಿ ಜಯಘೋಷ ಮೊಳಗಿತು.
ಪೂಜಾ ಕಾರ್ಯಕ್ರಮದಲ್ಲಿ 100ಕ್ಕು ಹೆಚ್ಚಿನ ದಂಪತಿಗಳು ಪಾಲ್ಗೊಂಡಿದ್ದರು. ಬಳಿಕ ಮಹಾ ಮಂಗಳಾರತಿ, ತದನಂತರದಲ್ಲಿ ತೀರ್ಥಪ್ರಸಾದ ವಿತರಣೆಯಾಯಿತು.
ಈ ವೇಳೆ ದೇವಸ್ಥಾನ ವ್ಯವಸ್ಥಾಪಕ ನರೇಂದ್ರ ರಾಠೋಡ ದಂಪತಿ, ಅನಂತಪ್ಪ ಯದ್ಲಾಪುರ, ಕಾಶಿನಾಥ ರಾಠೋಡ, ಮೋನಪ್ಪ ರಾಠೋಡ, ರಮೇಶ್ ಪವಾರ್, ರಾಜು, ಅಯ್ಯಪ್ಪ ದಾಸ, ಸುರೇಶ ಚಿನ್ನ ರಾಠೋಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
