ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಯಲಕಪಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಉದ್ಘಾಟನೆ ಮತ್ತು ಕಳಸಾರೋಹಣ ಕಾರ್ಯಕ್ರಮ ಸೆ.11 ರಂದು ಮಧ್ಯಾಹ್ನ 3ಕ್ಕೆ ನಡೆಯಲಿದೆ.
ಅಂದು ಬೆಳಿಗ್ಗೆ 6ಕ್ಕೆ ಶ್ರೀ ರಾಮಲಿಂಗೇಶ್ವರ ಸನ್ನಿಧಿಗೆ ಮಹಾರುದ್ರಾಭಿಷೇಕ ನಡೆಯಲಿದೆ. ಸುಕ್ಷೇತ್ರ ಹಾರಕೂಡದ ಸದ್ಗರು ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದಾರೆ. ದಿವ್ಯ ಸಾನಿಧ್ಯವನ್ನು ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ಶ್ರೀ ಹವಾ ಮಲ್ಲಿನಾಥ ಮಹಾರಾಜ, ಸುಕ್ಷೇತ್ರ ಭರತನೂರಿನ ಶ್ರೀ ಚಿಕ್ಕ ಗುರುನಂಜೇಶ್ವರ ಮಹಾ ಸ್ವಾಮೀಜಿ ವಹಿಸಲಿದ್ದಾರೆ.
ಸುಲೇಪೇಟೆಯ ತೆಂಗಿನ ಮಠದ ಶ್ರೀ ಸಿದ್ದರಾಮ ಶಿವಾಚಾರ್ಯ, ನಿಡಗುಂದಾದ ರಾಮಗಿರಿ ಮಠದ ಶ್ರೀ ಉಮೇಶ್ವರ ಮಹಾಸ್ವಾಮೀಜಿಗಳು ಉಪಸ್ಥಿತರಿರುವರು. ಯಲಕಪಳ್ಳಿ ಗ್ರಾಮದ ಅಮರೇಶ್ವರ ಮಠದ ಶ್ರೀ ಶಾಂತಲಿಂಗಯ್ಯ ಮಹಾಸ್ವಾಮೀಜಿಗಳ ಸಮ್ಮುಖದಲ್ಲಿ ಕಾರ್ಯಕ್ರಮಗಳು ಜರುಗಲಿದೆ. ಮುಖ್ಯ ಅತಿಥಿಗಳಾಗಿ ಶಾಸಕ ಡಾ. ಅವಿನಾಶ ಜಾಧವ ಆಗಮಿಸಲಿದ್ದಾರೆ.
ಗ್ರಾಮದ ರೇಣುಕಾ, ಗುಂಡಪ್ಪಹುನ್ನಳ್ಳಿ ಅವರಿಂದ ಶ್ರೀಗಳ ತುಲಾಭಾರ ನಡೆಯಲಿದೆ. ಉದ್ದಿಮೆದಾರರಾದ ರಾಜೇಶ್ವರಿ ರಮೇಶ ಹುನ್ನಳ್ಳಿ ಅವರಿಗೆ ಶ್ರೀ ರಾಮಲಿಂಗೇಶ್ವರ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವದು. ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
