ಬಿಜೆಪಿ ಯುವ ನಾಯಕ ಮಹೇಶರಡ್ಡಿ ಮುದ್ನಾಳ್ ಆಗ್ರಹ | ವಡಗೇರಾ ತಾಲೂಕಿನ ವಿವಿಧೆಡೆ ಬೆಳೆನಷ್ಟ ವೀಕ್ಷಣೆ

ಯಾದಗಿರಿ: ಮಹಾರಾಷ್ಟ್ರದಿಂದ ಭೀಮಾ‌ನದಿಗೆ ಅಧಿಕ ಪ್ರಮಾಣದ ನೀರು ಹರಿ ಬಿಟ್ಟಿರುವುದು ಮತ್ತು ಭಾರಿ ಮಳೆಯಿಂದ ಬೆಳೆನಷ್ಟವಾದ ಹಿನ್ನಲೆಯಲ್ಲಿ ಬಿಜೆಪಿ ಯುವ ನಾಯಕ ಮಹೇಶರಡ್ಡಿ ಮುದ್ನಾಳ್ ಶುಕ್ರವಾರ ವಡಗೇರಾ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಪರ್ಯಟನೆ ನಡೆಸಿ ರೈತರ ಅಳಲು ಆಲಿಸಿದರು.

ಮೊದಲು ಹಾಲಗೇರಾ, ಗೋಡಿಹಾಳ, ಕುಮನೂರು ಗ್ರಾಮಗಳಿಗೆ ಭೇಟಿ ನೀಡಿ ರೈತರು ಬೆಳೆದ ಹತ್ತಿ ಬೆಳೆ ಹಾಳಾಗಿದ್ದನ್ನು ವೀಕ್ಷಿಸಿದರು. ಈ ವೇಳೆ ರೈತರು ಲಕ್ಷಾಂತರ ರೂ.ಸಾಲ ಮಾಡಿ ಬೆಳೆದಿದ್ದು ಎಲ್ಲವೂ ನೀರು ಪಾಲಾಗಿದೆ. ನಾವು ವಿಷ ಕುಡಿಯುವುದು ಒಂದೆ ದಾರಿ ಉಳಿದಿದೆ ಎಂದು ಕಣ್ಣೀರಿಟ್ಟರು. ಪ್ರತಿ ಎಕರೆಗೆ 40 ಸಾವಿರ ರೂ.ಖರ್ಚು ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ನಂತರ ಬೂದನಾಳ ಸೇತುವೆ ಮಳೆ ಕಾರಣದಿಂದ ಜಲಾವೃತಗೊಂಡಿದ್ದು ಇದರಿಂದ ಮಾಚನೂರ, ಶಿವನೂರು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದ್ದನ್ಬು ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಮಳೆಯಿಂದ ಮತಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಬೆಳೆನಷ್ಟವಾಗಿದೆ. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಕಿಂಚಿತ್ತೂ ಯೋಚನೆ ಮಾಡುತ್ತಿಲ್ಲ.‌ ಮೊದಲು ಬೆಳೆ ಸಮೀಕ್ಷೆ ನಡೆಸಿ, ರೈತರಿಗೆ ಹೆಚ್ಚಿನ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ರೈತರ ಸಂಕಷ್ಟಕ್ಕೆ ಆಲಿಸಬೇಕು. ಈ ಭಾಗದಲ್ಲಿ ರೈತರು ಹತ್ತಿ ಹೆಚ್ಚು ಬೆಳೆಯುತ್ತಾರೆ. ಆದರೆ, ಮಳೆಯಿಂದ ಇಡೀ ಬೆಳೆ ಸರ್ವನಾಶವಾಗಿದೆ. ಕೋಟ್ಯಾಂತರ ರೂ.ಹಾನಿಯಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ ಎಂದು ಕಿಡಿ ಕಾರಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಸೊನ್ನದ,‌ ಜಿಲ್ಲಾ ಪ್ರ. ಕಾ. ಪರಶುರಾಮ ಕುರುಕುಂದ‌,‌ ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ ಕಾಡಂನೋರ ,‌ ವೀರುಪಾಕ್ಷಪ್ಪಗೌಡ ಮಾಚನೂರ,ಗೌರೀಶಂಕರ ಹೀರೆಮಠ , ಸಂಗರಡ್ಡಿಗೌಡ ಗೋಡಿಹಾಳ,ಶಿವಣ್ಣಗೌಡ ಕಂದಳ್ಳಿ ,‌ ಮಲ್ಲುಗೌಡ ಪೋ ಪಾಟೀಲ್,ಲಕ್ಮೀಪುತ್ರ ಯಾದಗಿರಿ , ಬಾಬುಗೌಡ ನಾಯ್ಕಲ್, ಜಗನಾಥರಡ್ಡಿ ಹಾಲಗೇರಾ , ಶಿವುಕುಮಾರ ಕೊಂಕಲ್ ,‌ಮಲ್ಲು ಕಲ್ಮನಿ‌,‌ ಶರಣಗೌಡ ಹಾಲಗೇರಾ , ಕುಮಲಪ್ಪ ಕುಮನೂರ ,‌‌ವಿಜಯಕುಮಾರ ಕುಮನೂರ , ಪ್ರಶಾಂತರಡ್ಡಿ ಹಾಲಗೇರಾ , ಹೊನ್ನಪ್ಪ‌ಕಡೆಚೂರ ,ಸಾಬಯ್ಯ‌ ಗುತ್ತೇದಾರ ,ಮಲ್ಲಪ್ಪ ಕುಮನೂರ ,ಮಲ್ಲು ಏರುಂಡಿ ,ವಿಶ್ವನಾಥರಡ್ಡಿಗೌಡ ಬಿಳ್ಹಾರ , ಮೋಹನರಡ್ಡಿಗೌಡ ಅರ್ಜುಣಗಿ ,ಮಲ್ಲಪ್ಪ,ರಂಗನಾಥ ಬಿಳ್ಹಾರ ,ಮರೆಪ್ಪ ಬಿಳ್ಹಾರ , ಹಾಗು ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!