ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ | ಛಲವಾದಿ ನೇತೃತ್ವದ ತಂಡದಿಂದ ಪ್ರವಾಹ ಸ್ಥಿತಿ, ಬೆಳೆ ಹಾನಿ ಪರಿಶೀಲನೆ

ಯಾದಗಿರಿ: ಭಾರತೀಯ ಜ‌ನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ರಾಜುಗೌಡ ಅವರು ಜಿಲ್ಲಾ ಬಿಜೆಪಿ ತಂಡದೊಂದಿಗೆ ಮಂಗಳವಾರ ಜಿಲ್ಲೆಯ ಬೆಳೆ ಹಾನಿ ಪ್ರದೇಶ ಮತ್ತು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿತು.

ರಸ್ತೆ ಮಾರ್ಗವಾಗಿ ಜಿಲ್ಲೆಗೆ ಎಂಟ್ರಿಕೊಟ್ಟ ನಾಯಕರು, ಹಾನಿಯಾದ ರೈತರ ಹೊಲಗಳಿಗೆ ತೆರಳಿ ಹತ್ತಿ ನಾಶವಾಗಿದ್ದನ್ನು ವೀಕ್ಷಿಸಿದರು. ಸ್ಥಳದಲ್ಲಿದ್ದ ರೈತರನ್ನು ಮಾತಾಡಿಸಿದ ವಿಜಯೇಂದ್ರ ಅವರು, ಸಾಲ ಮಾಡಿ ಬಿತ್ತಿದ ಬೆಳೆ ಹೀಗೆ ಮಳೆಗೆ ಸರ್ವನಾಶವಾಗಿದೆ. ನಮ್ಮ ಪರಸ್ಥಿತಿ ದೇವರೇ ಬಲ್ಲ ಎಂಬ ನೋವಿನ ಮಾತುಗಳಿಗೆ ಸ್ಪಂದಿಸಿದರು.

ಅನ್ನದಾತರಾದ ನೀವು ಧೈರ್ಯ ಬೀಡಬೇಡಿ. ಸರ್ಕಾರದ ಮೇಲೆ ಒತ್ತಡ ಹಾಕಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬಿಜೆಪಿ ಪಕ್ಷ, ನಾವು, ನಮ್ಮ ಹಿರಿಯ ನಾಯಕರು ಶಕ್ತಿ‌ಮೀರಿ ಪ್ರಯತ್ನ ಮಾಡುವುದಾಗಿ ಹೇಳಿದರು. ಈ ವೇಳೆ ಹಾಳಾದ ಬೆಳೆ ಬಗ್ಗೆ ರೈತರಿಂದಲೇ ಮಾಹಿತಿ ಪಡೆದರು. ಈ ವೇಳೆ ಮಾತನಾಡಿ ಛಲವಾದಿ, ನಿಮ್ಮ ಜೊತೆ ನಾವಿದ್ದೇವೆ, ಯಾವುದಕ್ಕೂ ಅಂಜಬೇಡಿ, ಆತ್ಮಸ್ಥೈರ್ಯ ಗಟ್ಟಿ ಮಾಡಿಕೊಳ್ಳಿ ಎಂದರು.

ಹಸಿ ಬರಗಾಲ ಘೋಷಣೆಗೆ ವಿಜಯೇಂದ್ರ ಆಗ್ರಹ: ನಾಯ್ಕಲ್ ಗ್ರಾಮಕ್ಕೆ ಆಗಮಿಸಿದ ಈ ತಂಡ ಊರೊಳಗೆ ತೆರಳಿ ಪ್ರವಾಹದಿಂದ ಹಾನಿಗೀಡಾದ ಮನೆಗಳನ್ನು ಪರಿಶೀಲಿಸಿತು. ಅಲ್ಲಿನ ಬಡವರು ಮನೆಗಳನ್ನು ಕಳೆದುಕೊಂಡಿದ್ದು ಗಮನಿಸಿದ ಅವರು ಜಿಲ್ಲಾಡಳಿತ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಬೇಕೆಂದರು.ಊರಿನ‌ ಮುಖ್ಯರಸ್ತೆಯ ಅಕ್ಕ,ಪಕ್ಕ ಇರುವ ಗದ್ದೆಗಳಿಗೆ ಇಳಿದ ವಿಜಯೇಂದ್ರ, ಛಲವಾದಿ, ರಾಜುಗೌಡ, ಮಹೇಶರೆಡ್ಡಿ ಮುದ್ನಾಳ್ ಇತರರು ಹಾಳಾದ ಭತ್ತದ ಪೈರುಗಳನ್ನು ಪರಿಶೀಲಿಸಿದರು. ಸುತ್ತಲು ಒಮ್ಮೆ ಕಣ್ಣಾಡಿಸಿ ನೋಡಿದರು. ಆಗ ನೈಜ ಸ್ಥಿತಿ ಕಣ್ಣು‌ಮುಂದೆ ಬಂದಾಗ ಮರುಗಿದಂತೆಯೇ ಕಂಡು ಬಂದ ಅವರೆಲ್ಲರೂ ಇಷ್ಟೇಲ್ಲ ಹಾಳಾದರೂ ರಾಜ್ಯ ಸರ್ಕಾರ ರೈತರ ನೆರವಿಗೆ ಬಾರದ ಇರುವುದಕ್ಕೆ ಕಿಡಿ ಕಾರಿದರು.

ಈ ವೇಳೆ ಮಾತನಾಡಿದ ವಿಜಯೇಂದ್ರ, ಸರ್ಕಾರ ಈ ಕೂಡಲೇ ಹಸಿ ಬರಗಾರ ಘೋಷಣೆ ಮಾಡಿ ಸೂಕ್ತ ಪರಿಹಾರ ವಿತರಿಸುವ ಮೂಲಕ ರೈತರನ್ನು ಬದುಕಿಸಬೇಕೆಂದರು.

ಅಲ್ಲಿಂದ ಬೆಂಡೆಗುಂಬಳ್ಳಿಗೆ ತೆರಳಿದ ಟೀಮ್, ಅಲ್ಲಿ ಭೀಮಾ ನದಿ ಪ್ರವಾಹದಿಂದ ಹಾಳಾದ ಬೆಳೆ, ಮನೆಗಳನ್ನು ವಿಕ್ಷೀಸಿತು. ಮುರಾರ್ಜಿ ದೇಸಾಯಿ ಶಾಲೆಯಲ್ಲಿರುವ ಶಿವಪುರದ ಗ್ರಾಮಸ್ಥರನ್ನು ಭೇಟಿ ಮಾಡಿದ ಈ ತಂಡಕ್ಕೆ ಅಲ್ಲಿನ‌ ಜನರು ಶಿವಪುರ ಗ್ರಾಮ ಸ್ಥಳಾಂತರ ಮಾಡುವ‌ ಕುರಿತು ಮನವಿ‌ ಮಾಡಿದ್ದರು.

ಈ ಹಿಂದೇ ಶಾಸಕರಾಗಿದ್ದ ದಿ. ವೆಂಕಟರೆಡ್ಡಿ ಮುದ್ನಾಳ್ ಅವರ ಕಾಲದಿಂದಲ್ಲೂ ಈ ಸಮಸ್ಯೆ ಎದುರಾಗಿದ್ದು, ಈಗಲಾದರೂ ಮಾಡಿ ಎಂದು ನೋವು ತೊಂಡಿಕೊಂಡ ಗ್ರಾಮಸ್ಥರಿಗೆ ವಿಜಯೇಂದ್ರ ಮತ್ತು ಛಲವಾದಿ‌ ಈ ಕುರಿತು ಸೂಕ್ತ ಭರವಸೆ ನೀಡಿದರು. ಜಿಲ್ಲೆಯಲ್ಲಿಯೇ ವಡಗೇರಾ ಭಾಗದ ಹಳ್ಳಿಗಳು ಪ್ರವಾಹಕ್ಕೆ ಸತತ ಮಳೆಗೆ ತುತ್ತಾಗಿ ಬೆಳೆ, ಮನೆಗಳನ್ನು ಹಾಳು ಆಗಿದ್ದರ ಕುರಿತು ರೈತರಿಂದ ಮಾಹಿತಿ ಪಡೆದರು. ಈ ವೇಳೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲುವಾದಿ ನಾರಾಯಣ ಸ್ವಾಮಿ,ಮಾಜಿ ಸಚಿವ ರಾಜುಗೌಡ ನಾಯಕ, ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ,ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ ಎಸ್ ಪಾಟೀಲ್ ನಡಹಳ್ಳಿ,ರಾಜ್ಯ ಕಾರ್ಯದರ್ಶಿ ಮತ್ತು ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪುರ, ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್,ಮಾಜಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ,ಮಾಜಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ, ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ,ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ನಾಗರತ್ನ ಕುಪ್ಪಿ,ಚಂದ್ರಶೇಖರಗೌಡ ಮಾಗನೂರ,ದೇವಿಂದ್ರನಾಥ ನಾದ,ದೇವರಾಜ ನಾಯಕ ಉಳ್ಳೆಸೂಗುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ ಮತ್ತು ಪರುಶುರಾಮ ಕುರಕುಂದಿ ಹಾಗೂ ಮೆಲಪ್ಪ ಗುಳಗಿ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಸಿದ್ದಣ್ಣಗೌಡ ಕಾಡಂನೋರ,ಜಿಲ್ಲಾ ಉಪಾಧ್ಯಕ್ಷ ಬಸವರಾಜ ಸೊನ್ನದ ಮತ್ತು ಅಡಿವೆಪ್ಪ ಜಾಕ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಆರ್ ಸಾಹುಕಾರ,ರಾಜುಗೌಡ ಉಕ್ಕನಾಳ, ವೆಂಕಟರೆಡ್ಡಿ ಅಬ್ಬೆತೂಮಕುರ,ರಾಜಶೇಖರ್ ಕಾಡಂನೊರ, ಚಂದ್ರಶೇಖರ ಯಾಳಗಿ, ತಿರುಪತಿ ಹತ್ತಿಕಟ್ಟಿಗಿ,ಪರ್ವತರಡ್ಡಿಗೌಡ ಮಲ್ಹಾರ ಬೆಂಡಗೊಂಬಳ್ಳಿ, ಯಂಕಣ್ಣ ನಾಯಕ, ಗೋವಿಂದಪ್ಪ ಖಾನಾಪುರ,ಜಿಲ್ಲಾ ಮಾಧ್ಯಮ ಸಂಚಾಲಕ ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!