ಭವಾನಿ ದೇವಿ ಭವ್ಯ ಮೆರವಣಿಗೆ | ಆರ್ಯ ಸಮಾಜದಿಂದ ವಿಜಯದಶಮಿ ಶೋಭಾಯಾತ್ರೆ

ಗುರುಮಠಕಲ್: ಜಿಲ್ಲಾದ್ಯಂತ ವೈಭವದ ನವರಾತ್ರಿ ಉತ್ಸವ ಇಂದು ತೆರೆಕಂಡಿತು. ವಿಜಯದಶಮಿ ಹಿನ್ನೆಲೆಯಲ್ಲಿ ಪಟ್ಟಣದ ಆರ್ಯ ಸಮಾಜದಿಂದ ಭವ್ಯ ಶೋಭಾಯಾತ್ರೆ ನಡೆಯಿತು. ಮುಖ್ಯ ಬೀದಿಗಳ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಬನ್ನಿ ಹರಿಯಲಾಯಿತು. ಬಳಿಕ ಪರಸ್ಪರ ವಿನಿಮಯ ಮಾಡಿಕೊಂಡು ಶುಭ ಕೋರಲಾಯಿತು.

ಈ ವೇಳೆ ಮಾತನಾಡಿದ ನರೇಶ್ ಆರ್ಯ, ಸುಮಾರು 80 ವರ್ಷಗಳಿಂದ ಶೋಭಾಯಾತ್ರೆ ನಡೆಯುತ್ತಿದೆ ಎಂದರು. ಎಲ್ಲಾ ಹಿಂದು ಸಮಾಜ ಬಾಂಧವರು ಆರ್ಯ ಸಮಾಜದೊಂದಿಗೆ ಬೆರೆಯಲು ಕೋರಿದ ಅವರು, ಸತ್ಯಾರ್ಥ ಪ್ರಕಾಶ ಗ್ರಂಥ ಪಠಿಸುವಂತೆ ಮನವಿ ಮಾಡಿದರು. ಆರ್ಯ ಸಮಾಜ ಅಧ್ಯಕ್ಷ ಲಕ್ಷ್ಮಣ ರಾವ್ ಪತಂಗೆ, ಎಸ್ ಎಸ್ ಕೆ ಸಮಾಜದ ಅಧ್ಯಕ್ಷ ಚಂದುಲಾಲ ಚೌಧರಿ, ಬುಡ್ಡಪ್ಪ ಜನಾರ್ಧನ, ಡಾ. ನರಸಿಂಗರಾವ್ ಕಾಶಿಗಾವ್, ಈಶ್ವರ ರಾವ್ ಹಬೀಬ್, ನರೇಶ್ ಗೊಂಗ್ಲೆ, ಯಶವಂತರಾವ, ತುಕಾರಾಮ ಧಡಂಗೆ, ಛಟ್ಟುಲಾಲ ಅರಸಿದ, ರಾಮಚಂದ್ರರಾವ್ ಪೋಳ್, ಅಭಯ ಕುಮಾರ ಹಬೀಬ್,ಅಂಬಾದಾಸ ಜೀತ್ರಿ, ಹಣಮಂತರಾವ ಹಬೀಬ್, ಜಗದೀಶ ಮೇಂಗಜಿ,  ನರಸಿಂಗರಾವ್ ಚೌಧರಿ, ನರೇಶ್ ಗೊಂಗಲೆ, ಸುರೇಶ ಗೊಂಗಲೆ, ಮಹೇಶ್ ಚೌಧರಿ, ಮೋಹನ್ ಬುರಬುರೆ ಇತರರು ಇದ್ದರು.

ಅಂಬಾಭವಾನಿ ದೇವಿಯ ಭವ್ಯ ಮೆರವಣಿಗೆ: ಇಲ್ಲಿನ ಅಂಬಾಭವಾನಿ ದೇವಸ್ಥಾನದಿಂದ ಮುಖ್ಯ ಬೀದಿಗಳ ಮೂಲಕ ಭವ್ಯ ಮೆರವಣಿಗೆ ನೆರವೇರಿತು. ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ದೇವಿಯ ದರ್ಶನ ಪಡೆದರು. ಇದೇ ವೇಳೆ ಯುವಕರು ಭಕ್ತಿಗೀತೆಗಳಿಗೆ ಸ್ಟೆಪ್ ಹಾಕಿ ಕುಣಿದು ಸಂಭ್ರಮಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!