ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆದಿಕವಿ ವಾಲ್ಮೀಕಿ ಮಹರ್ಷಿಗಳ ಜಯಂತಿ ಆಚರಣೆ | ಜಿಲ್ಲಾ ಕರವೇ ಕಾರ್ಯಕರ್ತರಿಂದ ಮಹರ್ಷಿಗೆ ನಮನ
ಯಾದಗಿರಿ: ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಆದಿಕವಿ ವಾಲ್ಮೀಕಿ ಮಹರ್ಷಿಗಳ ಜಯಂತಿಯಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸುವ ಮೂಲಕ ಶ್ರೀ ವಾಲ್ಮೀಕಿ ಮಹರ್ಷಿಗಳ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ವಾಲ್ಮೀಕಿಯನ್ನು ಸಂಸ್ಕೃತ ಸಾಹಿತ್ಯದ ಮೊದಲ ಕವಿ ಎಂದು ಗೌರವಿಸಲಾಗುತ್ತದೆ. ಅವರು ಮಹಾನ್ ಋಷಿ ಮತ್ತು 24,000 ಶ್ಲೋಕಗಳು ಮತ್ತು 7 ಕಾಂಡಗಳು ಒಳಗೊಂಡಿರುವ ರಾಮಾಯಣ ಮಹಾಕಾವ್ಯ ರಚಿಸಿ ನಮ್ಮ ಬದುಕಿಗೆ ನಾಂದಿ ಹಾಡಿದರು ಎಂದು ಸ್ಮರಿಸಿದರು.
ಭೂಮಿಯಲ್ಲಿ ಪರ್ವತ ಸಮುದ್ರ ನದಿಗಳಿರುತ್ತವೆ ಯೋ ಅಲ್ಲಿಯವರೆಗೂ ರಾಮಾಯಣ ಕಾವ್ಯ ಲೋಕದಲ್ಲಿ ಪ್ರಚಲಿತ ದಲ್ಲಿರುತ್ತದೆ. ಆದ್ದರಿಂದ ಸೂರ್ಯಚಂದ್ರರಿರುವರೆಗೂ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಅಮರಕಾವ್ಯವಾಗಿರುತ್ತದೆ ಮತ್ತು ಇದನ್ನು ರಚಿಸಿರುವ ಮಹರ್ಷಿ ವಾಲ್ಮೀಕಿಯೂ ಅಮರ ಕವಿಯಾಗಿರುತ್ತಾರೆ ಎಂದು ಮಹಾಕವಿ ವಾಲ್ಮೀಕಿಯನ್ನು ಅವರ ಜಯಂತಿ ಆಚರಿಸುವ ಮೂಲಕ ಜೀವನ ಪುನಿತಗೊಳಿಸಿಕೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡೆ ನಾಗರತ್ನ ಕುಪ್ಪಿ, ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ,ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಆರ್ ಸಾಹುಕಾರ, ಜಿಲ್ಲಾ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುನಿತಾ ಚೌವ್ಹಾಣ್,ಜಿಲ್ಲಾ ಉಪಾಧ್ಯಕ್ಷ ಮಾರುತಿ ಕಲಾಲ್,ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊನಿಗೆರ,ವೀಣಾ ಮೋದಿ,ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ,ಮೌನೇಶ್ ಬೆಳಗೇರಾ, ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ ಮತ್ತು ವಿಜಯಲಕ್ಷ್ಮಿ ನಾಯಕ, ಗೋಪಾಲ್ ದಾಸನಕೇರಿ, ಸ್ನೇಹ ರಸಳಕರ್,ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕಟ್ಟಿಮನಿ, ಮಹದೇವಪ್ಪ ಗಣಪುರ, ಸೋಮಣ್ಣಗೌಡ ಬಿರಾದರ್,ಸಾಬು ಬಗಲಿ,ಬಂಗಾರಪ್ಪ ನಾಯಕ, ಶಿವಣ್ಣ ಬಡಿಗೇರ, ಮಂಜುನಾಥ ಗುತ್ತೆದಾರ,ಮಲ್ಲು ಕೊಲಿವಾಡ, ಚನ್ನಬಸವರಡ್ಡಿ ಠಾಣಗುಂದಿ,ಸಾಲು ಯಡಳ್ಳಿ,ಶ್ರಿಕಾಂತ ಸುಂಗಲ್ಕರ್,ದೇವು ನಾಯಕ ಹತ್ತಿಕುಣಿ, ಚಂದ್ರಶೇಖರ ಕಡೇಸೂರ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಚನ್ನವೀರಯ್ಯ ಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕರವೇ ಜಿಲ್ಲಾ ಕಾರ್ಯಾಲಯ: ನಗರದ ಜಿಲ್ಲಾ ಕರವೇ ಕಾರ್ಯಾಲಯದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ರವರ ಜಯಂತಿಯನ್ನು ಆಚರಿಸಲಾಯಿತು.
ಜಯಂತ್ಯೋತ್ಸವದ ಅಂಗವಾಗಿ ಮಹರ್ಷಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುರ್ಷ್ಪಾಚನೆ ಮಾಡಿ ಗೌರವ ನಮನ ಸಲ್ಲಿಸಿ ಬಳಿಕ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷರಾದ ಟಿ.ಎನ್. ಭೀಮುನಾಯಕ, ಮೊಟ್ಟ ಮೊದಲ ಮಹಾಕಾವ್ಯ ರಾಮಾಯಣವನ್ನು ರಚಿಸಿದ ಆದಿಕವಿ ಮಹರ್ಷಿ ವಾಲ್ಮೀಕಿಯವರ ಜಯಂತ್ಯೋತ್ಸವನ್ನು ಕರ್ನಾಟಕ ರಾಜ್ಯಾದ್ಯಂತ ಆಚರಿಸುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ.
ಪರಮಾತ್ಮನನ್ನು ಕುರಿತು ಬಹಳ ವರ್ಷಗಳಕಾಲ ತಪಸ್ಸು ಮಾಡುತ್ತಿದ್ದಾಗ ಮಹರ್ಷಿ ವಾಲ್ಮೀಕಿಯವರ ಸುತ್ತ ಕಟ್ಟಿರುವ ಹುತ್ತ(ಸಂಸ್ಕೃತದಲ್ಲಿ-ವಲ್ಮೀಕ)ವನ್ನು ಬೇದಿಸಿಕೊಂಡು ಹೊರಗೆ ಬಂದಿದ್ದರಿಂದ ವಾಲ್ಮೀಕಿಯೆಂದು ಹೆಸರು ಬಂತು.
ಮಹರ್ಷಿ ವಾಲ್ಮೀಕಿಯವರು ಕೇವಲ ತಾಪಸ್ವಿನಿರಲಿಲ್ಲ ಕುಲಪತಿಯಾಗಿ ಒಂದು ಕೇಂದ್ರದ ಮಾರ್ಗದರ್ಶಕ ಪ್ರಭು ಎನಿಸಿದ್ದರು. ಆಧ್ಯಾತ್ಮ ವಿದ್ಯೆ ಅದರ ಅಂಗಗಳಾದ ವೇದೋಪನಿಷತ್ತುಗಳು ಶಿಲ್ಪಿ, ಗಾಧರ್ವ, ಚಿತ್ರಕಲೆ, ನಾಟ್ಯ ಮೊದಲಾದ ನಾನಾ ಇತರ ವಿದ್ಯೆಗಳ ಬೋದನೆಯು ಅವರಿಂದ ಪಡೆಯಬಹುದಿತ್ತು.
ಚರಿತ್ರೆಯಲ್ಲಿ ಆದಿಕವಿ ಮಹರ್ಷಿ ತಪಸ್ವಿ ಎಂದೆಲ್ಲಾಖ್ಯಾತಿ ಪಡೆದಿರುವ ವಾಲ್ಮೀಕಿಯವರು ಒಂದು ರೀತಿಯಲ್ಲಿ ಚಿಂತಕಚರಿತ್ರೆಕಾರ ಸಮಾಜ ಸುಧಾರಕ ಶಿಕ್ಷಣತಜ್ಞ ತತ್ವಜ್ಞಾನಿ ಶೋಷಿತರ ನೇತಾರಕೂಡ ಹೋದು ಇಂತಹ ಮಹಾನ್ ಪುರುಷರು ಜನಿಸಿದ ಪೂಣ್ಯ ಭೂಮಿ ನಮ್ಮದು. ಇಲ್ಲಿ ಜನಿಸಿದ ನಾವೇ ಧನ್ಯರು ಎಂದು ನುಡಿದರು.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಸಂತೋಷ ಕುಮಾರ ನಿರ್ಮಲಕರ್, ಅಂಬ್ರೇಶ ಹತ್ತಿಮನಿ, ರವಿ ನಾಯಕ, ಮಂಜು ರಾಂಪೂರಹಳ್ಳಿ, ಭೀಮರಾಯ ರಾಮಸಮುದ್ರ, ಬಸವರಾಜ ಕಡ್ಡಿ, ಹಣಮಂತ ನಾಯಕ, ಅಶೋಕ ನಾಯಕ, ಶರಣಗೌಡ ರಾಮಸಮುದ್ರ, ಮಲ್ಲು ಜಯಸಿಂಹ, ಅಂಜು ನಾಯಕ, ಬಸ್ಸು ಹತ್ತಿಕುಣಿ, ಮಂಜು ನಾಲವಾರ ಹಾಗೂ ಇತರೇಕಾರ್ಯಕರ್ತರು ಭಾಗಿಯಾಗಿದ್ದರು.
