25 ಲಕ್ಷ ಅನುದಾನ ಈಗಾಗಲೇ ಬಿಡುಗಡೆ | ಹೆಚ್ಚಿನ ಅನುದಾನ ಅವಶ್ಯಕತೆ ಇದ್ದರೆ ನೀಡುವ ಭರವಸೆ | ಪೂಜ್ಯ ರಿಂದ ಶಾಸಕ ಕಂದಕೂರ ಅವರಿಗೆ ಸನ್ಮಾನ
ಗುರುಮಠಕಲ್: ಸುಮಾರು 600 ವರ್ಷಗಳ ಐತಿಹಾಸಿಕ ಗುರುಮಠಕಲ್ ಖಾಸಾಮಠದ ಸಂಪೂರ್ಣ ಜೀರ್ಣೋದ್ಧಾರಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಶಾಸಕ ಶರಣಗೌಡ ಕಂದಕೂರ ಭರವಸೆ ನೀಡಿದ್ದಾರೆ ಎಂದು ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಅದಕ್ಕೂ ಮೊದಲು ಖಾಸಾಮಠಕ್ಕೆ ಭೇಟಿ ನೀಡಿ, ಕರ್ತೃ ಗದ್ದುಗೆಗೆ ನಮಿಸಿ, ಪೂಜ್ಯರ ಆಶೀರ್ವಾದ ಪಡೆದರು. ಮಠದ ಜೀರ್ಣೋದ್ಧಾರಕ್ಕೆ 25 ಲಕ್ಷ ಅನುದಾನ ಒದಗಿಸಲಾಗಿದೆ. ಹೆಚ್ಚುವರಿ ಅನುದಾನ ಅವಶ್ಯಕತೆ ಇದ್ದರೂ ನೀಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.
ಖಾಸಾಮಠದ ಸಂಪೂರ್ಣ ಜೀರ್ಣೋದ್ದಾರ, ಅಶ್ವಾರೂಢ ಬಸವೇಶ್ವರ ಮೂರ್ತಿ ಸ್ಥಾಪನೆ, ರಥೋತ್ಸವ ನೆರವೇರಿಸುವ ಕುರಿತು ಭಕ್ತರೊಂದಿಗೆ ಚರ್ಚಿಸಲಾಗಿದೆ ಎಂದು ಪೂಜ್ಯ ಶಾಂತವೀರ ಶ್ರೀಗಳು ಮಾಹಿತಿ ನೀಡಿದರು. ಈ ವೇಳೆ ಪೂಜ್ಯರು ಶಾಸಕ ಶರಣಗೌಡ ಕಂದಕೂರ ಅವರನ್ನು ಸನ್ಮಾನಿಸಲಾಯಿತು.
ಮಠದ ಏಕಶಿಲೆಯ ಕಲ್ಲು ಕಂಬ ವೀಕ್ಷಣೆ: ಮಠದ ವಾಸ್ತು ಶಿಲ್ಪಗಳನ್ನು ವೀಕ್ಷಿಸಿದರು, ಪೂಜ್ಯರು ಶಾಸಕರಿಗೆ ಮಠದ ಮಹಾದ್ವಾರದ ಮೇಲಿನ ಎರೆಡು ಬದಿಗಳಲ್ಲಿ ಏಕಶಿಲೆಯ ನಡುವೆ ತಿರುಗುವ ಕಲ್ಲಿನ ಚಂಡು ಇರುವ ಕಂಬಗಳನ್ನು ವೀಕ್ಷಿಸಿದರು. ನಿಜಾಮರ ಕಾಲದಲ್ಲಿ ಎಡಭಾಗದ ಕಂಬ ತೆಗೆದುಕೊಂಡು ಹೋಗಲಾಗಿತ್ತು ಈಗ ಅದು ಹೈದರಾಬಾದ್ ವಸ್ತು ಸಂಗ್ರಹಾಲಯದಲ್ಲಿದೆ ಎಂದು ಹೇಳಲಾಗುತ್ತಿದೆ.
ಈ ವೇಳೆ ನರಸರೆಡ್ಡಿ ಗಡ್ಡೆಸೂಗೂರ, ನಾಗಭೂಷಣ ಆವುಂಟಿ, ಅಖಂಡೇಶ್ವರಯ್ಯ ಹಿರೇಮಠ, ಮಲ್ಲಿಕಾರ್ಜುನಯ್ಯ ಸ್ವಾಮಿ, ಮುರಳಿಧರ ಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಷ್ ಚಂದ್ರ ಕಟಕಟಿ, ಶರಣು ಆವುಂಟಿ, ಪ್ರಕಾಶ ನೀರೆಟಿ, ಬಸಣ್ಣ ದೇವರಹಳ್ಳಿ, ರವಿ ಗವಿನೋಳ ಇತರರು ಇದ್ದರು.
