ಮಾಜಿ ಸಚಿವ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಪತ್ರಿಕಾಗೋಷ್ಠಿ | ಸಚಿವರ ವಿರುದ್ಧ ಅವಾಚ್ಯ ಪದ ಬಳಕೆಗೆ ಖಂಡನೆ | ಸಚಿವ ಖರ್ಗೆ ಜನಪ್ರೀಯತೆ ಯಿಂದ ವಿರೋಧಿಗಳಿಗೆ ಹೊಟ್ಟೆಕಿಚ್ಚು
ಗುರುಮಠಕಲ್: ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದು ಖಂಡನೀಯ ಎಂದು ಮಾಜಿ ಸಚಿವರು, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಬಾಬುರಾವ್ ಚಿಂಚನಸೂರ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಅವರ ಅಭಿವೃದ್ಧಿ ಕಂಡು ವಿರೋಧಿಗಳು ಹೊಟ್ಟೆಕಿಚ್ಚು ಪಡುತ್ತಿದ್ದಾರೆ. ಪ್ರಿಯಾಂಕ ಖರ್ಗೆ ಎಂದರೆ ಬಿಜೆಪಿಗೆ ಹೆದರಿಕೆ, ಅವರು ರಾಜ್ಯದ ಪ್ರಭಾವಿ ನಾಯಕ. ರಾಜ್ಯದ ಹುಲಿ ಇದ್ದಂತೆ, ಅವರ ಮೇಲೆ ಇಲ್ಲ ಸಲ್ಲದ ಅಪವಾದ ಮಾಡಲಾಗುತ್ತಿದೆ. ಅಭಿವೃದ್ಧಿಯೇ ಪ್ರಿಯಾಂಕ ಖರ್ಗೆ ಅವರ ಗುರಿ ಎಂದರು.
ಆರ್ ಎಸ್ ಎಸ್ ನಿಷೇಧ ಮಾಡಿ ಎಂದು ಪ್ರಿಯಾಂಕ ಖರ್ಗೆ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಎಲ್ಲಿಯೂ ಹೇಳಿಲ್ಲ ಎಂದವರು, ಸರ್ಕಾರಿ ಸ್ಥಳದಲ್ಲಿ ಅನುಮತಿ ಇಲ್ಲದೆ ಚಟುವಟಿಕೆಗೆ ನಿಷೇಧ ಮಾಡಲು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ಇಂತಹ ಮಂತ್ರಿ ಸಿಕ್ಕಿದ್ದು, ನಮ್ಮ ಪುಣ್ಯ, ಅವರ ಅಭಿವೃದ್ಧಿ ಕಂಡು, ಹೈ ಕಮಾಂಡ್ ಅವರಿಗೆ ಇನ್ನೆರಡು ಚುನಾವಣೆ ಬಳಿಕ ಸಿಎಂ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದು ಬಣ್ಣಿಸಿದರು. ಖರ್ಗೆ ವಿರುದ್ಧ ಮಾತನಾಡಿದರೆ ರಾಜ್ಯದ ಜನ ಸಹಿಸಲ್ಲ. ಮುಂದೆ ಹೆದರಿಕೆ ಕರೆ ಬಂದರೆ ಕಾಂಗ್ರೆಸ್ ಹೋರಾಟಕ್ಕೆ ಇಳಿಯಲಿದೆ ಎಂದರು.
ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲಾ ಮಾತನಾಡಿ, ಸಚಿವ ಪ್ರಿಯಾಂಕ ಖರ್ಗೆ, ಬಿಜೆಪಿಯ 40% ಕಮಿಷನ್ ಸೇರಿದಂತೆ ಹಲವು ಹಗರಣ ಬಯಲಿಗೆ ತಂದಿದ್ದಾರೆ. ಸೇಡಿನ ರಾಜಕಾರಣ ಸರಿಯಲ್ಲ. ಹೀಗೆ ಬೆದರಿಕೆ ಕರೆ ಬಂದ್ರೇ ದಲಿತ ಸಮುದಾಯ, ಕಾಂಗ್ರೆಸ್ ಕ್ಷೇತ್ರದಲ್ಲಿ ಹೋರಾಟ ಮಾಡಲಿದೆ.
ಈ ವೇಳೆ ಭೀಮಶಪ್ಪ ರಾಂಪೂರ, ಚನ್ನಬಸಪ್ಪ ಗಾಜರಕೋಟ, ಅಖ್ತರ್ ಪ್ಯಾರೆ, ಬಾಬು ತಲಾರಿ, ಸಂಜೀವ ಚಂದಾಪುರ, ಚಂದಯ್ಯ ಗುತ್ತೆದಾರ, ಸಾಬಣ್ಣ ಯದ್ಲಾಪೂರ, ವಸಂತ ಹಬೀಬ್, ಫಯಾಜ ಅಹ್ಮದ್, ಶರಣಪ್ಪ ಗಾಜರಕೋಟ, ಸೈಯದ್ ಬಾಬಾ, ವಿಜಯ ನೀರೆಟಿ, ಚಾಂದಪಾಷಾ, ಮಾಣಿಕ್ ಮುಕಡಿ , ಭೀಮಶಪ್ಪ, ಲಿಂಗಪ್ಪ ತಾಂಡೂರಕರ್, ಅಶೋಕ ಶನಿವಾರಂ ಇತರರು ಇದ್ದರು.
