ಗುರುಮಠಕಲ್ ನ ಜ್ಞಾನವೃಕ್ಷ ನವೋದಯ ತರಬೇತಿ ಕೇಂದ್ರದಲ್ಲಿ | ಪಾಲಕರ ಸಭೆ ಮತ್ತು ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ

ಗುರುಮಠಕಲ್: ಶ್ರೀರಾಮ್ ಎಜ್ಯುಕೇಶನಲ್ ಡೆವಲಪ್‌ಮೆಂಟ್ ಟ್ರಸ್ಟ್ ನ ಜ್ಞಾನವೃಕ್ಷ ನವೋದಯ ತರಬೇತಿ ಕೇಂದ್ರ ಗುರುಮಠಕಲ್ ನಲ್ಲಿ ಇದೇ 26 ರಂದು ಪಾಲಕರ ಸಭೆ ಮತ್ತು ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದ್ದು,  ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ  ನಿಜಗುಣಾನಂದ ಮಹಾಸ್ವಾಮಿಗಳು, ನಿಶ್ಚಲ ಮಂಟಪ ಬೈಲೂರು, ಬೆಳಗಾವಿ ಜಿಲ್ಲೆ ಇವರು ವಹಿಸಲಿದ್ದಾರೆ.

ಪಟ್ಟಣದ ಹೊರವಲಯದ ನಾರಾಯಣಪೇಟ ರಸ್ತೆಯ ನಳಂದ ಸ್ಟಡಿ ಕ್ಯಾಂಪಸ್. (ಇಂಡಿಯನ್ ಪೆಟ್ರೊಲ್ ಬಂಕ್ ಹತ್ತಿರ) ಕಾರ್ಯಕ್ರಮ ನಡೆಯಲಿದೆ. ಗುರುಮಠಕಲ್ ಖಾಸಾಮಠದ ಪೂಜ್ಯ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮಿಗಳು ನೇತೃತ್ವವಹಿಸಲಿದ್ದಾರೆ. ಉದ್ಘಾಟಕರಾಗಿ ಜಯಶ್ರೀ ಆರ್. ಪೊಲೀಸ್ ಪಾಟೀಲ್ ಅಧ್ಯಕ್ಷರು, ಪುರಸಭೆ, ಮುಖ್ಯ ಅತಿಥಿಗಳಾಗಿ ಡಾ. ಹುಲಿಕಲ್ ನಟರಾಜ್ ಸಂಸ್ಥಾಪಕ ಅಧ್ಯಕ್ಷರು, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡ ಬಳ್ಳಾಪೂರ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ರಮೇಶ ಅನಸೂರ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!