ಸೌದಾಗರ ಡ್ಯಾಂ ಕೆನಾಲ್ ಗೆ ಜಿಲ್ಲಾಧಿಕಾರಿ ಭೇಟಿ ನೀಡಲು ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ:  ತಾಲೂಕಿನ ಸೌದಾಗರ ಜಲಾಶಯದ ಕಾಲುವೆಗೆ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಭೇಟಿ ನೀಡಿದರು. ಸುಮಾರು ವರ್ಷಗಳಿಂದ ಕಾಲುವೆ ದುರಸ್ತಿ ಹಾಗೂ ಹೂಳು ಎತ್ತದೆ ಇರುವುದರಿಂದ ಕಾಲುವೆ ಹಾಳಾಗಿವೆ, ಅಪಾರ ಪ್ರಮಾಣದಿಂದ ಪೋಲಾಗುವ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ತಪ್ಪಿಸ್ಥತರ ಮೇಲೆ ಕ್ರಮ ಕೈಗೊಂಡು ಪೋಲಾಗುವ ನೀರನ್ನು ತಡೆದು ರೈತರ ಜಮೀನಿಗೆ ಸರಳವಾಗಿ ತಲುಪುವಂತೆ ಮಾಡಬೇಕೆಂದು ಒತ್ತಾಯಿಸಿದರು.

ಜಲಾಶಯ ಉದ್ದಕ್ಕೂ ಸಂಚಾರ ಮಾಡಿ ಪರಿಶೀಲಿಸಿದ ನಂತರ ಹೇಳಿಕೆ ನೀಡಿರುವ ಅವರು, ಸೌದಾಗರ ಜಲಾಶಯದ ಕಾಲುವೆ ಪೋಲ್ ಆಗಿದ್ದು, ರೈತರ ಜಮೀನಿಗೆ ನೀರು ಹೋಗುತ್ತಿಲ್ಲ. ಬದಲಾಗಿ ಪೋಲ್ ಆಗಿ ಹೋಗುತ್ತಿವೆ. ಇದರಿಂದ ರೈತರು ಬೆಳೆದ ಶೆಂಗಾ, ಜೋಳ, ಸಜ್ಜಿ, ಬೆಳೆ ತರಕಾರಿ ಬೆಳೆಗಳು ಒಣಗುತ್ತಿವೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹತ್ತಿಕುಣಿ, ಸೌದಾಗರ, ಹೋರುಂಚಾ ಅಲ್ಲಿಪುರ ಸೇರಿ ಹತ್ತಾರು ಗ್ರಾಮದ ರೈತರಿಗೆ ಈ ಕಾಲುವೆ ನೀರು ಅನುಕೂಲ ಆಗಿತ್ತು. ಈಗ ರೈತರಿಗೆ ನೀರು ಉಣುಸಲಾಗದೇ ರೈತರು ಪರದಾಟ ನಡೆಸ್ತಿದ್ದಾರೆಂದು ಸಿಟ್ಟಿಗೆದ್ದರು. ಬಳಿಕ ಮಾತನಾಡಿದ ಅವರು ಕೂಡಲೇ ಕಾಲುವೆ ದುರಸ್ತಿ ಮಾಡುವಂತೆ ಆಗ್ರಹಿದ್ದಾರೆ. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಕಾಲುವೆಯಲ್ಲಿ ಕುಳಿತು ರೈತರ ಸಮ್ಮುಖದಲ್ಲೇ ಬೃಹತ್ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!