ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದಲ್ಲಿ ಪ್ರತಿಭಟನೆ

ಯಾದಗಿರಿ: ವಿಧಾನ ಮಂಡಲದ ಜಂಟಿ ಅಧಿವೇಶನಕ್ಕೆ ಭಾಷಣ ಮಾಡಲು ಆಗಮಿಸಿದ ರಾಜ್ಯಪಾಲರಿಗೆ ಅಗೌರವ ತೋರಿದ ವಿಧಾನ ಪರಿಷತ್ ಸದಸ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಬಿಜೆಪಿಯಿಂದ ಶನಿವಾರ ಸಂಜೆ ನಗರದ ಸುಭಾಷ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ನರೇಗಾ ಯೋಜನೆಯ ಹೆಸರು ಬದಲಿಸಿದ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ವಿಶೇಷ ಅಧಿವೇಶನ ನಡೆಸುತ್ತಿದ್ದು, ರಾಜ್ಯಪಾಲ ಥಾವರಚಂದ್ ಗೆಹೆಲೋಟ್ ಅವರು ಜಂಟಿ ಅಧಿವೇಶನದ ಭಾಷಣ ಮುಗಿಸಿ ಹೊರಗಡೆ ಆಗಮಿಸುತ್ತಿರುವ ವೇಳೆ ಕಾಂಗ್ರೆಸ್ಸಿನ ಕೆಲವರು ರಾಜ್ಯಪಾಲರಿಗೆ ಅಗೌರವ ತೋರಿದ್ದಾರೆ.‌ ಸಾಂವಿಧಾನಿಕ ಹುದ್ದೆಗೆ ಕಪ್ಪುಚುಕ್ಕೆ ತರುವ ಕೆಲಸವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸಂಸ್ಕೃತಿ ಏನೆಂಬುದು ಈ ಘಟನೆಯಿಂದ ಮತ್ತೆ ಸಾಬೀತಾಗಿದೆ. ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯಲ್ಲಿದ್ದವರು. ಅವರ ಕಾರ್ಯಕ್ಷಮತೆ ಹಾಗೂ ನಡಾವಳಿಗಳ ವಿರುದ್ಧ ಹೋಗುವುದು ಅಕ್ಷಮ್ಯವಾಗಿದೆ. ಹೀಗಾಗಿ ಕೂಡಲೇ ಹರಿಪ್ರಸಾದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ,ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಆರ್ ಸಾಹುಕಾರ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ಗೋವಿಂದಪ್ಪ ಕೊಂಚಟ್ಟಿ, ನಾಗರೆಡ್ಡಿ, ಶರಣಗೌಡ ಅಲಿಪುರ್, ಮಾರುತಿ ಕಲಾಲ್, ಜಿಲ್ಲಾ ಉಪಾಧ್ಯಕ್ಷ ಬಸವರಾಜಪ್ಪ ಸೊನ್ನದ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊನಗೇರಾ, ವಿಜಯಲಕ್ಷ್ಮೀ ನಾನಕ, ಹನುಮಂತ ವಲ್ಲಾಪುರೆ, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಲ್ಲು ಕೋಲಿವಾಡ, ಮಂಜುನಾಥ ಗುತ್ತೇದಾರ, ವಿಕಾಸ ಚವ್ಹಾಣ, ಜಿಲ್ಲಾ ಕಾರ್ಯಲಯ ಕಾರ್ಯದರ್ಶಿ ಚನ್ನಯ್ಯ ಸ್ವಾಮಿ, ಅಪ್ಪಣ್ಣ ಜೈನ, ಲಕ್ಷ್ಮಿಪುತ್ರ ಮಾಲಿಪಾಟೀಲ್, ಮಹಿಳಾಮೋರ್ಚಾ ಅಧ್ಯಕ್ಷ ಸುನೀತಾ ಚವ್ಹಾಣ, ಮಹಿಳಾ ಮೋರ್ಚಾ ರಾಜಕಾರಣಿ ಸದಸ್ಯರಾದ ವೀಣಾ ಮೋದಿ, ಸ್ನೇಹಾ ರಸಾಳಕರ್, ಭೀಮಬಾಯಿ ಶೇಂಡಗಿ, ಶಕುಂತಲಾ ಗುಂಜಲೂರು, ಹಣಮಂತ ಬಂದಳ್ಳಿ, ಪವನ್ ಲಿಂಗೇರಿ, ಬಸ್ಸು ಬಳಿಚಕ್ರ, ಮಂಜುನಾಥ ಅನಂಪಲ್ಲಿ, ಭೀಮು ದೇಸಾಯಿ, ವಿಶ್ವನಾಥ ಜಾಕನಳ್ಳಿ, ಜಿಮ್ಮಿ, ಆಕಾಶ್ ಖಾನಾಪುರ, ಅರುಣ್ ಸಾಹುಕಾರ, ಅಮರೇಶ್, ದೇವು ಮುಂಡರಗಿ, ಆಕಾಶ್, ದೇವು ವರ್ಕನಹಳ್ಳಿ, ಯಂಕಪ್ಪ ರಾಥೋಡ್ ಮುದ್ನಾಳ, ಸೇರಿದಂತೆ ಪಕ್ಷದ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!