ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜ ಸರ್ಕಾರಿ ನೌಕರರ ಸಂಘದ ಕ್ಯಾಲೆಂಡರ್ ಬಿಡುಗಡೆ
ಗುರುಮಠಕಲ್: ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದ ಸರ್ಕಾರಿ ನೌಕರರ ಸಂಘದ ರಚನೆಯಾಗಿರುವುದು ಸಂತಸದ ವಿಷಯ ಎಂದು ಸಮಾಜದ ಅಧ್ಯಕ್ಷ ಚಂದುಲಾಲ ಚೌದರಿ ಹೇಳಿದರು.
ಪಟ್ಟಣದ ಅಂಕಮ್ಮ ದೇವಸ್ಥಾನದಲ್ಲಿ ಸರ್ಕಾರಿ ನೌಕರರ ಸಂಘದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಸಾಕಷ್ಟು ಸಾಮಾಜಿಕ ಸೇವೆಗೆ ಕಾರ್ಯಯೋಜನೆ ಹೊಂದಿರುವುದು ಶ್ಲಾಘನೀಯ ಎಂದರು. ಮಂದಿರಗಳಲ್ಲಿ ಹಿಂದೆ ಪೂರ್ವಜರು ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರ ನೀಡುವ ಕೆಲಸವಾಗುತ್ತಿತ್ತು. ಪುನಃ ಅದನ್ನು ಮುಂದುವರೆಸಿ ಕೊಂಡು ಹೋಗುವ ಸಂಕಲ್ಪ ಮಾಡಲಾಗಿದೆ ಎಂದರು.
ನೌಕರರ ಸಂಘದ ಅಧ್ಯಕ್ಷ ಶಶಿಕಾಂತ ಜನಾರ್ಧನ ಮಾತನಾಡಿ, ಈಗಾಗಲೇ ಸ್ವಸಹಾಯ ಸಂಘ ರಚನೆ ಮಾಡಲಾಗಿದೆ. 65 ಜನ ಸದಸ್ಯರಿದ್ದಾರೆ. ಸುಸಜ್ಜಿತ ಐಎಎಸ್ ವರೆಗೆ ಗುರಿ ಸಾಧನೆಗೆ ಸಹಕಾರಿಯಾಗಲು ಗ್ರಂಥಾಲಯ ಸ್ಥಾಪನೆಗೆ ಶೀಘ್ರವೇ ಕ್ರಮಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಎಲ್ಲರ ಸಹಕಾರದಿಂದ ಕ್ಯಾಲೆಂಡರ್ ರಚನೆಯಾಗಿದೆ. ಮೊದಲ ಬಾರಿಗೆ ಸಮಾಜದ ಕ್ಯಾಲೆಂಡರ್ ಬಿಡುಗಡೆಯಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಲಕ್ಷ್ಮಣರಾವ್ ಗೊಂಗಲೆ ಅವರು ಆಕ್ಸಿಜನ್ ಯುನೀಟ್ ದೇಣಿಗೆಯಾಗಿ ನೀಡಿದರು.
ರಾಮಕಿಶನರಾವ ಗೊಂಗಲೆ, ವೈದ್ಯ ನರಸಿಂಗರಾವ್, ಹಣಮಂತ ರಾವ್ ಗೊಂಗಲೆ, ಯಶವಂತರಾವ್ ಚೌದರಿ, ಲಕ್ಷ್ಮಣರಾವ್ ಚೌದರಿ, ಶೋಭಾ ಬಾಯಿ, ವಿನಾಯಕ ಜನಾರ್ಧನ, ಭರತ ಜೀತ್ರಿ ವೇದಿಕೆಯಲ್ಲಿದ್ದರು. ಸಮಾಜದ ಹಿರಿಯರು, ಯುವಕರು ಭಾಗವಹಿಸಿದ್ದರು.
ಪದಾಧಿಕಾರಿಗಳ ನೇಮಕ: ಗೌರವ ಅಧ್ಯಕ್ಷ ಹಣಮಂತರಾವ ಗೊಂಗಲೆ, ಅಧ್ಯಕ್ಷರಾಗಿ ಶಶಿಕಾಂತ ಬಿ. ಜನಾರ್ಧನ, ಉಪಾಧ್ಯಕ್ಷ ನರಸಿಂಗರಾವ್ ಧಡಂಗೆ, ಲಕ್ಷ್ಮಣರಾವ್ ಶ್ರೀ ಗಿರಿ, ಪ್ರ. ಕಾರ್ಯ ದರ್ಶಿ ಡಾ.ಸುನೀಲ್ ಹಬೀಬ್ , ಸಂ.ಕಾ.ವೆಂಕಟೇಶ್ ಕಮಲಾಪುರ, ಕೋಶಾಧ್ಯಕ್ಷ ರಾಘವೇಂದ್ರ ಮಿಸ್ಕಿನ್, ರಾಕೇಶ್ ಚೌದರಿ, ಮನೋಹರ ಜೀತ್ರಿ, ಶೋಭಾ ಬಾವಿ ಹಾಗೂ ಸಲಹೆಗಾರರಾಗಿ ಸಿದ್ರಾಮ ಅರಿಸಿದ, ಅಭಯ ಕುಮಾರ ಆಯ್ಕೆಯಾಗಿದ್ದಾರೆ.
