ಸಾರ್ವಜನಿಕ ಧ್ವಜಾರೋಹಣ ಆಚರಣಾ ಸಮಿತಿಯಿಂದ 77 ನೇ ಗಣರಾಜ್ಯೋತ್ಸವ | ಶಾಸಕ ಶರಣಗೌಡ ಕಂದಕೂರ ಅಧ್ಯಕ್ಷತೆ | ಪುರಸಭೆ, ಕಂದಾಯ ಇಲಾಖೆ, ಪೊಲೀಸ್ ಠಾಣೆಯಲ್ಲಿ ಧ್ವಜಾರೋಹಣ
ಗುರುಮಠಕಲ್: ಪಟ್ಟಣದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ, ಬಾಬುಜಿ ಪುತ್ಥಳಿ ಅನಾವರಣಕ್ಕೆ ಅವಕಾಶ ಸಿಕ್ಕಿದ್ದು ನಮ್ಮ ಸೌಭಾಗ್ಯ ಎಂದು ಶಾಸಕ ಶರಣಗೌಡ ಕಂದಕೂರ ಸ್ಮರಿಸಿದರು.
ಗುರುಮಠಕಲ್ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ 77 ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕೇವಲ ರಾಷ್ಟ್ರೀಯ ಹಬ್ಬಗಳಿಗೆ ಮಹಾಪುರುಷರ ನೆನೆದರೆ ಸಾಕಾಗಲ್ಲ. ಶಿಕ್ಷಣ ಎಷ್ಟು ಮುಖ್ಯವೋ ಹಾಗೆಯೇ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಅರಿಯುವುದು ಮುಖ್ಯವಾಗಿದೆ ಎಂದು ಹೇಳಿದರು.
ವ್ಯಾಪಾರಕ್ಕೆ ಎಂದು ಬಂದ ಬ್ರಿಟಿಷರು ದೇಶವನ್ನು ನೂರಾರು ವರ್ಷ ಆಳಿದರು. ಸಾಕಷ್ಟು ತ್ಯಾಗ, ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ದೇಶಕ್ಕೆ ಹಿರಿಯರು ನೀಡಿದ ಆಸ್ತಿಯೆಂದರೆ ಸಂವಿಧಾನ ಎಂದು ಬಣ್ಣಿಸಿದರು. ನಮ್ಮ ಸಂವಿಧಾನ ದೇಶದ ಬಡವರು, ಧ್ವನಿ ಇಲ್ಲದವರು, ಯುವ ಪೀಳಿಗೆಯ ಭವಿಷ್ಯ, ರೂಪಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ್ದಾಗಿದೆ.
241 ಪೇಜಿನ ಸಂವಿಧಾನವನ್ನು ದೇಶದ ಸಂಸತ್ ನಲ್ಲಿ ಸಂರಕ್ಷಿಸಲಾಗಿದೆ. ವಿಕಸಿತ ಭಾರತಕ್ಕೆ ಸಂವಿಧಾನದ ಅಗತ್ಯವಾಗಿದೆ ಎಂದರು 4-8 ಬಾರಿ ನಾವೇ ಆರಿಸಿ ಹೋಗುವುದು ಸಂವಿಧಾನದ ಆಶಯವಲ್ಲ. ಎಲ್ಲರಿಗೂ ಅವಕಾಶ ನೀಡುವುದೇ ಸಂವಿಧಾನದ ಆಶಯ ಎಂದರು. ಇದೇ ವೇಳೆ ರಾಷ್ಟ್ರೀಯ ಹಬ್ಬಗಳಿಗೆ ಆಗಮಿಸಿದ ವೇಳೆ ಸನ್ಮಾನ ಕಾಲು ಹಾಕುವುದು ಬೇಡ. ಒಂದು ಪುಸ್ತಕ ಕೊಟ್ಟರೇ ಸಾಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟೆ ಮಾತನಾಡಿ, ಗಣರಾಜ್ಯೋತ್ಸವ ಶುಭಾಶಯ ಕೋರಿ ಸಂವಿಧಾನದ ಆಶಯದಂತೆ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು. ಭೀಮಪ್ಪ ಮನೆ ಉಪನ್ಯಾಸ ನೀಡಿದರು.
ಸಾಧಕರಿಗೆ ಸನ್ಮಾನ: ಗಣರಾಜ್ಯೋತ್ಸವ ಅಂಗವಾಗಿ ಸಮಾಜ ಸೇವಕರಾದ ಅಶೋಕ ಶನಿವಾರಂ, ನರಸಿಂಹಲು ಗಂಗನೋಳ, ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ ಶರಣಪ್ಪ ಹೂಗಾರ, ಶಿಕ್ಷಣ ಸಂಯೋಜಕ ರವೀಂದ್ರ ಚವ್ಹಾಣ, ಸಿಆರ್ ಪಿಎಫ್ ಗೆ ಆಯ್ಕೆಯಾದ ಯೋಧ ಸುರೇಶ, ಉರಗ ರಕ್ಷಕ ನರಸಿಂಹಲು ಅವರಿಗೆ ಸನ್ಮಾನಿಸಲಾಯಿತು.
ಸಾನಿಧ್ಯ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಗ್ರೇಡ್ 2 ತಹಸಿಲ್ದಾರ್ ನರಸಿಂಹ ಸ್ವಾಮಿ, ತಾಪಂ ಅಧಿಕಾರಿ ಅಂಬೇಷ ಪಾಟೀಲ್, ಪಿಐ ವೀರಣ್ಣ ಎಸ್ ದೊಡ್ಡಮನಿ, ಮುಖ್ಯಾಧಿಕಾರಿ ಶರಣಪ್ಪ ಎಂ. ಗಣ್ಯರಾದ ಪಾಪಣ್ಣ ಮನ್ನೆ, ಶರಣು ಆವುಂಟಿ, ಸಂತೋಷ ನೀರಟ್ಟಿ, ಬಸಣ್ಣ ದೇವರಹಳ್ಳಿ, ಪ್ರಕಾಶ ನೀರಟಿ, ಅಂಬಾದಾಸ ಜೀತ್ರಿ , ರವಿ ಗೋವಿನೋಳ, ಬಾಲಪ್ಪ, ದಾಸರಿ ಇದ್ದರು. ನಾರಾಯಣ ರೆಡ್ಡಿ ನಿರೂಪಣೆ, ರವೀಂದ್ರ ರಾಠೋಡ ಸ್ವಾಗತಿಸಿದರು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪುರಸಭೆ ಕಾರ್ಯಾಲಯ: 77 ನೇ ಗಣರಾಜ್ಯೋತ್ಸವ ಶುಭಾಶಯಗಳು ಕೋರಿದ ಮುಖ್ಯಾಧಿಕಾರಿ ಶರಣಪ್ಪ ಎಂ, ಸಂವಿಧಾನದ ಆಶಯದಂತೆ ಕಾರ್ಯ ಮಾಡಬೇಕು. ಸರ್ವರಿಗೂ ಹಕ್ಕುಗಳ ನೀಡಿದ ಸಂವಿಧಾನ ಶ್ರೇಷ್ಠ ಎಂದರು. ಅದರಂತೆ ನಾವೆಲ್ಲಾ ಪ್ರಮಾಣಿಕ ಅಧಿಕಾರ ನಡೆಸೋಣ ಎಂದರು.
ಮಾಜಿ ಅಧ್ಯಕ್ಷ ಪಾಪಣ್ಣ ಮನ್ನೆ, ಬಸಣ್ಣ ದೇವರಹಳ್ಳಿ, ರಾಜೇಂದ್ರ ಕಲಾಲ್, ಮಲ್ಲೇಶ್ವಪ್ಪ ಬೇಲಿ, ವೀರಪ್ಪ ಪ್ಯಾಂಟಿ, ಶರಣು ಆವುಂಟಿ, ಸೈಯದ್ ಅಕ್ಬರ್, ಚಂದುಲಾಲ ಚೌದರಿ, ಸೈಯದ್ ಮೈನೋದ್ದಿನ್, ವಿಜಯ ನೀರಟಿ, ವಸಂತ ಹಬೀಬ್, ಯಶವಂತರಾವ್ ಚೌದರಿ, ಅಶೋಕ್ ಶನಿವಾರಂ ಸೇರಿದಂತೆ ಗಣ್ಯರು, ಜನಪ್ರತಿನಿಧಿಗಳು, ಸಿಬ್ಬಂದಿಗಳು ಇದ್ದರು.
