ಬೀದರ್ ಜಿಲ್ಲೆಯಲ್ಲಿ ಪ್ರಶಿಕ್ಷಣ ಶಿಬಿರ | ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರಿಂದ ಚಾಲನೆ

ಯಾದಗಿರಿ: ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಯಡಿಯೂರಪ್ಪ ಸಂಘಟನಾತ್ಮಕ ಚಟುವಟಿಕೆಗಳ ನಿಮಿತ್ಯ ಪಂಡಿತ್ ದೀನ್ ದಯಾಳ ಉಪಾಧ್ಯಯರ ಪ್ರಶಿಕ್ಷಣ ಕಾರ್ಯಗಾರಕ್ಕೆ ಬೀದರ ದಕ್ಷಿಣ ಮತಕ್ಷೇತ್ರದ ಚಾಂಗಲೆರ ಗ್ರಾಮದಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಯಾದಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ ನೇತೃತ್ವದಲ್ಲಿ ಬಿ.ವೈ.ವಿ. ಅವರಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಬೀದರ್ ದಕ್ಷಿಣ ಮತಕ್ಷೇತ್ರದ ಶಾಸಕ ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಬಸವಕಲ್ಯಾಣ ಕ್ಷೇತ್ರದ ಶಾಸಕ ಶರಣು ಸಲಗರ, ಹುಮನಾಬಾದ್ ಶಾಸಕ ಸಿದ್ದು ಪಾಟೀಲ, ಕಲ್ಬುರ್ಗಿ ವಿಭಾಗದ ಸಹಪ್ರಭಾರಿಗಳಾದ ಶರಣಪ್ಪ ತಳವಾರ, ಬಿಜೆಪಿ ಮುಖಂಡ ಭೀಮನಗೌಡ ಖ್ಯಾತನಾಳ, ಮಾಜಿ ಯುಡ ಅಧ್ಯಕ್ಷ ಬಸವರಾಜ ಚಂಡರಕಿ, ಸುರೇಶ ರಾಥೋಡ, ಮಾಜಿ ಎಪಿಎಂಸಿ ಅಧ್ಯಕ್ಷ ಶರಣಗೌಡ ಕಾಳಬೆಳಗುಂದಿ, ಸುರೇಶಗೌಡ ನಾಯ್ಕಲ್, ರಾಜ್ಯ ಒಬಿಸಿ ಕಾರ್ಯಕಾರಣಿ ಸದಸ್ಯ ಶರಣಗೌಡ ಐಕುರ,ಅನಿಲ ಕರಾಟೆ, ಹಣಮಂತ ವಲ್ಲಾಪುರ, ಬಿಜೆಪಿ ಜಿಲ್ಲಾ ಮಾಧ್ಯಮ ಸಹ ಸಂಚಾಲಕರಾದ ಚಂದ್ರಶೇಖರ್ ಕಡೆಚೂರ ಹಾಗೂ ಯಾದಗಿರಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!