ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜನ್ಮ ಜಯಂತಿ | ಪುರಸಭೆ ಕಾರ್ಯಾಲಯ ಸೇರಿ ಹಲವೆಡೆ ಸಂವಿಧಾನ ಶಿಲ್ಪಿ ಕೊಡುಗೆ ಸ್ಮರಣೀಯ

ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತೋತ್ಸವದ ಪ್ರಯುಕ್ತ ಇಂದು ಮುಂಬೈನ ದಾದರ್‌ನಲ್ಲಿರುವ ಚೈತ್ಯಭೂಮಿಗೆ ಯುವ ಮುಖಂಡ ಅಶೋಕ ಶನಿವಾರಂ ಭೇಟಿ ನೀಡಿ, ಬಾಬಾ ಸಾಹೇಬರಿಗೆ ಪುಷ್ಪ ನಮನ ಸಲ್ಲಿಸಿದರು.

ಗುರುಮಠಕಲ್: ಡಾ. ಬಿ.ಆರ್ ಅಂಬೇಡ್ಕರ್ ಅವರು ಸಮ ಸಮಾಜ ನಿರ್ಮಾಣಕ್ಕೆ ಅವಿರತ ಶ್ರಮಿಸಿದ್ದಾರೆ. ಅವರು ನೀಡಿದ ಸಂವಿಧಾನ ಬದ್ಧ ಹಕ್ಕುಗಳಿಂದಲೇ ಇಂದು ಪ್ರತಿಯೊಬ್ಬರು ತಮ್ಮ ಹಕ್ಕು ಪಡೆಯುತ್ತಿದ್ದಾರೆ ಎಂದು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹೇಳಿದರು.

ಇಲ್ಲಿನ ತಾಲೂಕು ಆಡಳಿತದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಷ ಪಾಟೀಲ್ ಮಾತನಾಡಿ, ದೇಶ ಕಂಡ ಮೇಧಾವಿ ಡಾ.ಅಂಬೇಡ್ಕರ್ ಎಂದು ಗುಣಗಾನ ಮಾಡಿದರು. ಸಾಕಷ್ಟು ಪ್ರತಿಭಾವಂತರಾಗಿದ್ದ ಅವರು ಹೊರದೇಶಗಳಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ದೇಶದ ಸ್ವಾತಂತ್ರ್ಯ ಸಂಗ್ರಾಮಲ್ಲಿ ಭಾಗವಹಿಸಿದ್ದರು. ದೇಶದಲ್ಲಿ ಸಾಕಷ್ಟು ಕಾನೂನುಗಳನ್ನು ರೂಪಿಸುವ ಮೂಲಕ ಕಲ್ಯಾಣಕ್ಕೆ ಶ್ರಮಿಸಿದ್ದಾರೆ ಎಂದರು. ಉಪನ್ಯಾಸಕ ಕೃಷ್ಣ ಚಪೆಟ್ಲಾ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಸಾಮಾಜಿಕ ಚಳುವಳಿ ನಡೆಸಿದ, ಬಾಬಾ ಸಾಹೇಬ್ ಎಂದರೆ ಒಂದು ಜಾತಿ, ಸಮಾಜಕ್ಕೆ ಸೀಮಿತವಲ್ಲ. ದಲಿತರನ್ನು ಹೊರತು ಪಡಿಸಿ ಅನ್ಯ ಜನಾಂಗಕ್ಕೆ ಉದ್ಯೋಗ, ಶಿಕ್ಷಣ, ಅಧಿಕಾರ ಪಡೆಯಲು ಡಾ. ಬಾಬಾ ಸಾಹೇಬ್ ಅವರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದರು.

ಹಲವು ಕಾಯಿದೆ, ಕಾನೂನುಗಳ ಮೂಲಕ ದಲಿತರು ಅಲ್ಲದೇ ಸಾಕಷ್ಟು ಹಿಂದುಳಿದ ಸಮುದಾಯಗಳ ಏಳ್ಗೆಗೆ ಶ್ರಮಿಸಿದ್ದನ್ನು ಯಾರು ಮರೆಯಬಾರದು ಎಂದರು. ಅಂಬೇಡ್ಕರ್ ಅವರು ತೀರಾ ಬಡವರು ಎಂದು ಸುಳ್ಳು ಹಬ್ಬಿಸಲಾಗಿದೆ. ತಂದೆ ಮಿಲಿಟರಿ ಸೇವೆಯಲ್ಲಿದ್ದವರ ಮಗ ಹರಿದ ಬಟ್ಟೆ ಹಾಕಿಕೊಳ್ಳಲು ಹೇಗೆ ಸಾಧ್ಯ. ಸಾಕಷ್ಟು ಶೂಟು ಬೂಟು ಹಾಕಿ ಮೆರೆಯುತ್ತಿದ್ದರು. ಇತಿಹಾಸ ತಿಳಿಯಬೇಕು ಎಂದು ಕರೆ ನೀಡಿದರು. ಪ್ರತಿಯೊಬ್ಬರು ಸಂವಿಧಾನವನ್ನು ಸಮರ್ಪಕವಾಗಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದರು.ಇದೇ ವೇಳೆ ಸಮಾಜ ಮುಖಂಡ ಲಾಲಪ್ಪ ತಲಾರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ ನೀರೆಟಿ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಎಂ, ಪಿಐ ವೀರಣ್ಣ ದೊಡ್ಡಮನಿ, ಗ್ರೇಡ್ 2 ತಹಶೀಲ್ದಾರ್ ನರಸಿಂಹ ಸ್ವಾಮಿ, ರಾಮಚಂದ್ರ ಬಸೂದೆ, ಮುಖಂಡರಾದ ಕೆ.ದೇವದಾಸ, ಬಾಬು ತಲಾರಿ,ಆಶನ್ನ ಬುದ್ಧ, ವೀರಪ್ಪ ಪ್ಯಾಟಿ, ಹಣಮಂತು ಶನಿವಾರಂ, ಗುರು ತಲಾರಿ,ಮಾಣಿಕ ಮುಕಡಿ, ಜಗದೀಶ ಮೇಂಗಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಪುರಸಭೆ ಕಾರ್ಯಾಲಯ: ಇಲ್ಲಿನ ಪುರಸಭೆ ಕಾರ್ಯಾಲಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಮುಖ್ಯಾಧಿಕಾ ರಿ ಶರಣಪ್ಪ ಎಂ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಪ್ರಮುಖರಾದ ಹಣಮಂತು ಶನಿವಾರಂ, ಮಾಣಿಕ್ ಮುಕಡಿ, ಸೈಯದ್ ಬಾಬಾ, ಸಿಬ್ಬಂದಿಗಳಾದ ಮರಿಲಿಂಗಪ್ಪ, ಮಲ್ಲಿಕಾರ್ಜುನ, ರಾಮುಲು ಗೌಡ, ಅಂಜಪ್ಪ ಸೇರಿದಂತೆ ಹಲವರು ಇದ್ದರು.

ಬಸ್ ಘಟಕ : ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗುರುಮಠಕಲ್ ಬಸ್ ಘಟಕದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಡಾ ಬಾಬು ಜಗಜೀವನ್ ರಾಮ್ ಅವರ  ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ಥಾಪಕ ಭೀಮಾಶಂಕರ  ವಹಿಸಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಸಾಗೋಣ ಸಮಾನತೆ ಭ್ರಾತೃತ್ವ ಭಾವನೆಯನ್ನು ಮೂಡಿಸಲು ಪ್ರಯತ್ನಿಸಬೇಕು ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ಹೆಚ್.ಸಕ್ರಿ ಮಾತನಾಡಿ, ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಅವರ ಸಾಧನೆಗಳನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಘೋಷಣೆ “ಶಿಕ್ಷಣ ಸಂಘಟನೆ ಹೋರಾಟ” ಮತ್ತು ಡಾ ಬಾಬು ಜಗಜೀವನ್ ರಾಮ್ ಅವರ ಸಾಧನೆಗಳನ್ನು ತಿಳಿಸಿದರು. ಸಿಬ್ಬಂದಿ ಮೇಲ್ವಿಚಾರಕ ರಾಮರೆಡ್ಡಿ, ರವಿ, ಭಾಸ್ಕರ್, ಸಂಚಾರಿ ನಿಯಂತ್ರಕ ಶರಣಪ್ಪ ಹೂಗಾರ, ಸಾಯಿ ರೆಡ್ಡಿ, ಪ್ರತಾಪ್ ರೆಡ್ಡಿ,ವೆಂಕಟರೆಡ್ಡಿ , ಎಂ.ಎಂ.ವಿಠ್ಠಲ್, ವಿಜಯನಾಥ,  ಮೋತಿಲಾಲ್, ಮುತ್ತಣ್ಣ, ಬಾಬುರಾವ್ ಸೇರಿದಂತೆ ಸಿಬ್ಬಂದಿ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!