ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದ ನೌಕರರ ಸಂಘದಿಂದ ಕಾರ್ಯಕ್ರಮ | ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಮುಖ್ಯ ಪೇದೆ ವಸಂತ ಕುಮಾರ ಮೇಂಗಜಿ | ಪಿಯುಸಿ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ಅರ್ಪಿತಾ, ಪ್ರಿಯಾಂಕಾ ಅವರಿಗೆ ಸನ್ಮಾನ

ಗುರುಮಠಕಲ್: ಎಸ್ ಎಸ್ ಕೆ ಸಮಾಜದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಉದ್ಯೋಗ, ಶಿಕ್ಷಣದಲ್ಲಿ ತನ್ನದೇ ಛಾಪು ಮೂಡಿಸುತ್ತಿರುವುದು ಇಡೀ ಸಮಾಜವೇ ಹೆಮ್ಮೆ ಪಡುವ ವಿಷಯ ಎಂದು ಸಮಾಜದ ಅಧ್ಯಕ್ಷ ಚಂದುಲಾಲ ಚೌದರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಅಂಕಮ್ಮ ದೇವಸ್ಥಾನ ಆವರಣದಲ್ಲಿ ಸಮಾಜದ ನೌಕರರ ಸಂಘದಿಂದ ಮುಖ್ಯಪೇದೆ ವಸಂತ ಕುಮಾರ ಮೇಂಗಜಿ ಹಾಗೂ ಪಿಯು ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ಈರ್ವರು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವುದನ್ನು ಗಮನಿಸಿ ಮುಖ್ಯಪೇದೆ ವಸಂತ ಕುಮಾರ ಅವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಲಭಿಸಿರುವುದು ನಾವೆಲ್ಲ ಹೆಮ್ಮೆ ಪಡುವ ವಿಷಯ ಎಂದದು. ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಸಮಾಜದ ಮಕ್ಕಳು ಸಾಧನೆ ಮಾಡಿದ್ದಾರೆ. ಪಿಯು ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಪಡೆದಿರುವ ಅರ್ಪಿತಾ ಮತ್ತು ಪ್ರಿಯಾಂಕಾ ಅವರು ಇತರೆ ಮಕ್ಕಳಿಗೆ ಮಾದರಿಯಾಗಿದ್ದಾರೆ ಎಂದು ಗುಣಗಾನ ಮಾಡಿದರು.

ಈ ವೇಳೆ ಮುಖ್ಯಮಂತ್ರಿ ಪದಕ ಪುರಸ್ಕೃತ ವಸಂತ ಕುಮಾರ, ಎಎಸ್ಐ ನರಸಿಂಗರಾವ್ ಚೌದರಿ, ನರಸಿಂಗರಾವ್ ಧಡಂಗೆ, ಪ್ರೇಮಚಂದ ಕಾಶಿಗಾವ್ ಮಾತನಾಡಿದರು. ನೌಕರರ ಸಂಘದ ಅಧ್ಯಕ್ಷ ಶಶಿಕಾಂತ ಜನಾರ್ಧನ, ನರೇಶ್ ಗೊಂಗಲೆ, ಗೋವಿಂದ ರಾವ್ ಮೇಂಗಜಿ, ಲಕ್ಷ್ಮಣರಾವ ಶ್ರೀಗಿರಿ, ಡಾ.ಸುನೀಲ ಹಬೀಬ್, ಸುರೇಂದ್ರ ಗೊಂಗಲೆ, ರಾಘವೇಂದ್ರ ಮಿಸ್ಕಿನ್, ಸುರೇಶ್ ಗೊಂಗಲೆ, ಕಿಶನ್ ರಾವ್ ಮೇಂಗಜಿ, ಸಂಪಾದಕ ಅನೀಲ ಬಸೂದೆ, ರಜನಿಕಾಂತ್ ಮೇಂಗಜಿ, ಶ್ರೀನಿವಾಸ ಚೌದರಿ, ರಾಕೇಶ ಚೌದರಿ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!