ಅಗ್ನಿ ಶಾಮಕ ಅಧಿಕಾರಿಗಳಿಗೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಮನವಿ | ಅಣುಕು ಪ್ರದರ್ಶನ ಸ್ಪಂದಿಸಿದ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಮನೋಹರ ರಾಠೋಡ
ಯಾದಗಿರಿ : ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ಜಿಲ್ಲಾ ಅಗ್ನಿಶಾಮಕ ಠಾಣೆಗೆ ಸಾಮಾಜಿಕ ಹೋರಾಟಗಾರ ಉಮೇಶ ಕೆ.ಮುದ್ನಾಳ ಭೇಟಿ ನೀಡಿ, ಅಗ್ನಿ ಅವಘಡ ತಡೆಯ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ಮನವಿ ಮಾಡಿದರು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮನೋಹರ ರಾಠೋಡ ಮತ್ತು ಉಕಡ ಅಗ್ನಿ ಶಾಮಕ ಠಾಣಾಧಿಕಾರಿ ವೀರೇಶ ಅವರನ್ನು ಭೇಟಿಯಾಗಿ, ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನೆ ದಿನೆ ಹೆಚ್ಚಾಗುತ್ತಿದ್ದು ಎಲ್ಲೆಂದರಲ್ಲಿ ಊರು ಮತ್ತು ಜಮೀನನಲ್ಲಿ ಗುಡಿಸಲು, ಸೊಪ್ಪೆ, ಹುಲ್ಲು, ಶೆಂಗಾದ ಹೊಟ್ಟಿನ ಬಣಮೆಗಳ ಸುಡುತ್ತಿದ್ದು ಈ ಭಾಗದ ರೈತರು ಸರಿಯಾಗಿ ಮಾಹಿತಿ ಇಲ್ಲದ ಕಾರಣ ಸಂಪೂರ್ಣ ಸುಟ್ಟ ಕರಕಾಲಾದ ನಂತರ ನಮಗೂ ತಮಗೂ ಮಾಹಿತಿ ದೊರೆಯುತ್ತದೆ.
ಇದು ಸರಿಯಾದ ಬೆಳವಣಿಗೆ ಅಲ್ಲ. ಕಾರಣ ಇಲಾಖೆಯಿಂದ ಹೋಬಳಿ ಮಟ್ಟದಲ್ಲಿ ಅಣುಕು ಪ್ರದರ್ಶನ ಮಾಡುವುದರ ಮುಖಾಂತರ ತಮ್ಮ ಇಲಾಖೆಯ ಸಂಪೂರ್ಣ ಮಾಹಿತಿ ನೀಡಿ ಮುಂದಾಗಾವ ಅವಢಡವನ್ನು ತಪ್ಪಿಸಲು ಈ ಅಣುಕು ಪ್ರದರ್ಶನದಿಂದ ನಗರ ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕೆಂದು ಉಮೇಶ ಕೆ. ಮುದ್ನಾಳ ಹೇಳಿದರು.
ಮನವಿಗೆ ಸ್ಪಂದಿಸಿ ನಂತರ ಮಾತನಾಡಿದ ಅವರು ಜಿಲ್ಲಾ ಅಗ್ನಿ ಶಾಮಕದ ಅಧಿಕಾರಿ ಮನೋಹರ ರಾಠೋಡ ಮಾತನಾಡಿ, ಈಗಾಗಲೇ ಕೆಲವು ಕಡೆ ಅಣುಕ ಪ್ರದರ್ಶನ ಮಾಡುತ್ತಿದ್ದು, ಆದರೆ ನಮ್ಮ ಎರಡೇ ವಾಹನಗಳು ಇರುವುದರಿಂದ ಯಾದಗಿರಿ ಸಮೀಪ ಇರುವ ಗ್ರಾಮಗಳು ಆಯ್ಕೆ ಮಾಡಿದರೆ, ಇನ್ನು ಹೆಚ್ಚಿನ ಅಣುಕು ಪ್ರದರ್ಶನ ಮಾಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯ ಪ್ರವೃತ್ತರಾಗಲು ಸಿದ್ದರಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗೋವಿಂದ, ರಾಜು, ಪವನ, ಭೀಮಾಶಂಕರ, ಮಲ್ಲೇಶಿ ಉಮೇಶ ಕೆ. ಮುದ್ನಾಳ ಅಭಿಮಾನಿಗಳ ಬಳಗದ ಪದಾಧಿಕಾರಿಗಳು ಇದ್ದರು
