ಸಾರ್ವಜನಿಕವಾಗಿ ಗುಂಪು ಗುಂಪಾಗಿ ಆಚರಣೆಗೆ ನಿಷೇಧ | ಜಿಲ್ಲಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಆದೇಶ
ಯಾದಗಿರಿ: ಯಾದಗಿರಿ ಜಿಲ್ಲೆಯ ಅರಕೇರಾ ಕೆ., ಗೊಡ್ರಿಹಾಳ, ನಜರಾಪುರ, ತುಮಕುರು, ಮಾಧವಾರ, ಪುಟ್ ಪಾಕ್, ತಾತಳಗೇರಾ ಹಾಗೂ ಶಿರವಾಳ ಗ್ರಾಮಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಹಿತದೃಷ್ಟಿಯಿಂದ ಮೊಹರಂ ಹಬ್ಬವನ್ನು ಸಾರ್ವಜನಿಕವಾಗಿ, ಗುಂಪು ಗುಂಪಾಗಿ ಆಚರಿಸುವುದು ಹಾಗೂ ಸಾರ್ವಜನಿಕವಾಗಿ ಮೆರವಣಿಗೆ ಮಾಡುವುದನ್ನು ಕರ್ನಾಟಕ ಪೋಲೀಸ್ ಕಾಯ್ದೆ 1963ರ ಕಲಂ 35ರನ್ವಯ ನಿಷೇಧಿಸಿ , ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾದಂಡಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಅವರು ಆದೇಶ ಹೊರಡಿಸಿದ್ದಾರೆ.
ಮೊಹರಂ ಹಬ್ಬದ ಪ್ರಯುಕ್ತ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುವಂತೆ ಜಿಲ್ಲೆಯ ಗುರುಮಠಕಲ್ ತಾಲೂಕಿನ ಅರಕೇರಾ ಕೆ., ಸುರಪುರ ತಾಲೂಕಿನ ಗೊಡ್ರಿಹಾಳ, ಗುರುಮಿಠಕಲ್ ತಾಲೂಕಿನ ನಜರಾಪುರ, ವಡಗೇರಾ ತಾಲೂಕಿನ ತುಮಕುರು, ಗುರುಮಠಕಲ್ ತಾಲೂಕಿನ ಮಾಧವಾರ, ಪುಟ ಪಾಕ್ ಹಾಗೂ ತಾತಳಗೇರಾ ಗ್ರಾಮ ಸೇರಿದಂತೆ ಒಟ್ಟು 08 ಗ್ರಾಮಗಳಲ್ಲಿ ಸಾರ್ವಜನಿಕರ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಜೂನ್ 19 ರಿಂದ 28 ರವರೆಗೆ ಆಚರಿಸಲಿರುವ ಮೋಹರಂ ಹಬ್ಬವನ್ನು ಸಾರ್ವಜನಿಕವಾಗಿ ಗುಂಪು ಗುಂಪಾಗಿ ಆಚರಿಸುವುದು ಹಾಗೂ ಈ ಗ್ರಾಮಗಳಲ್ಲಿ ಸಾರ್ವಜನಿಕವಾಗಿ ಮೆರವಣಿಗೆಯನ್ನು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
