ಗ್ರಾಮೀಣ ಮಕ್ಕಳ ಸಾಧನೆ | 6 ವಿದ್ಯಾರ್ಥಿಗಳು ಡಿಸ್ಟೆಂಕ್ಷನ್ | 38 ಪ್ರಥಮ ಸ್ಥಾನದಲ್ಲಿ ತೇರ್ಗಡೆ | ಶಿಕ್ಷಕರು, ಗಣ್ಯರ ಅಭಿನಂದನೆ
ಗುರುಮಠಕಲ್: 2025-26ನೇ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢ ಶಾಲೆ ಯಲ್ಹೇರಿಯ 69 ಮಕ್ಕಳು ಉತ್ತೀರ್ಣರಾಗಿದ್ದಾರೆ. 100% ಫಲಿತಾಂಶ ಬಂದಿದೆ. 6 ಜನ ಡಿಸ್ಟಿಂಕ್ಷನ್, 38 ವಿದ್ಯಾರ್ಥಿಗಳು ಪ್ರಥಮ, 16 ದ್ವಿತೀಯ ಹಾಗೂ 10 ಮಕ್ಕಳು ತೃತೀಯ ಸ್ಥಾನ ಪಡೆದಿದ್ದಾರೆ.
ಮಕ್ಕಳ ಸಾಧನೆಗೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರ ಬಸಪ್ಪ, ಸೋಮನಾಥ ರೆಡ್ಡಿ ಬೋರೆಡ್ಡಿ ಮತ್ತು ಊರಿನ ಶಿಕ್ಷಣ ಪ್ರೇಮಿಗಳು ಮಕ್ಕಳಿಗೆ ಹಾಗೂ ಮುಖ್ಯ ಗುರುಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
