ಹುಣ್ಣಿಮೆಯಂದು ವಿಶೇಷ ಸೇವೆ | ವೈಭವದ ಅಲಂಕಾರ | ಸಾವಿರಾರು ಭಕ್ತರು ಭಾಗಿ
ತಿರುಮಲ : ದೂರ, ದೂರನಿಂತ ಭಕ್ತರ ಕಣ್ಣಿಗೆ ಥಳ ಥಳ ಹೊಳೆಯುವ ಅಲಂಕಾರದಲ್ಲಿ ವಿರಾಜಮಾನವಾದ ದೈವದ ದರ್ಶನ ಪಡೆಯುವ ಕಾತುರ, ಎಲ್ಲೆಡೆ ಝಗಮಗಿಸುವ ಅಲಂಕಾರ, ಅಪಾರ ಭಕ್ತ ಸಮೂಹದ ಮಧ್ಯೆ ಜಯಘೋಷ ಇಂತಹ ಸನ್ನಿವೇಶ ಕಂಡು ಬಂದಿದ್ದು ತಿರುಮಲದಲ್ಲಿ.
ಹೌದು, ಶುಕ್ರವಾರ ರಾತ್ರಿ ತಿರುಮಲದಲ್ಲಿ ಹುಣ್ಣಿಮೆಯ ಗರುಡ ಸೇವೆಯನ್ನು ಬಹಳ ವೈಭವದಿಂದ ನಡೆಸಲಾಯಿತು. ಸಂಜೆ 7 ಗಂಟೆಗೆ, ಎಲ್ಲಾ ಅಲಂಕಾರಗಳಿಂದ ಅಲಂಕರಿಸಲ್ಪಟ್ಟ ಶ್ರೀ ಮಲಯಪ್ಪ ಸ್ವಾಮಿ, ಗರುಡನ ಮೇಲೆ ದೇವಾಲಯದ ಬೀದಿಗಳಲ್ಲಿ ಮೆರವಣಿಗೆ ವೈವಿದ್ಯಮಯ ಪುಣ್ಯದ ಕ್ಷಣಗಳನ್ನು ಭಕ್ತರು ಕಣ್ತುಂಬಿಕೊಂಡರು.
ಗರುಡ ವಾಹನಂ – ಎಲ್ಲಾ ಪಾಪಗಳಿಗೆ ಪ್ರಾಯಶ್ಚಿತ್ತ : ಪೌರಾಣಿಕ ಹಿನ್ನೆಲೆ ಹೊಂದಿರುವ ಗರುಡ ಸೇವೆಯು ಎಲ್ಲಾ 108 ವೈಷ್ಣವ ದಿವ್ಯ ದೇಶಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಜ್ಞಾನದಿಂದ ಬೇರ್ಪಡುವಿಕೆಯ ರೂಪಗಳಾದ ರೆಕ್ಕೆಗಳಿಂದ ಮೆರವಣಿಗೆ ಮಾಡುವ ಗರುಡನನ್ನು ನೋಡಿದರೆ, ಎಲ್ಲಾ ಪಾಪಗಳು ದೂರವಾಗುತ್ತವೆ ಎನ್ನುವ ನಂಬಿಕೆಯಿದೆ.
ಈ ವೇಳೆ ತಿರುಮಲ ಶ್ರೀ ಶ್ರೀ ಶ್ರೀ ಚಿನ್ನ ಜೀಯರ್ ಸ್ವಾಮಿ, ಟಿಟಿಡಿ ಹೆಚ್ಚುವರಿ ಇಒ ಶ್ರೀ ಸಿ.ಎಚ್. ವೆಂಕಯ್ಯ ಚೌಧರಿ, ತಿರುಪತಿ ಜಿಲ್ಲಾ ಎಸ್ಪಿ ಸುಬ್ಬರಾಯಡು, ಉಪ ಇಒ ಲೋಕನಾಥಂ ಮತ್ತು ಇತರ ದೇವಾಲಯದ ಅಧಿಕಾರಿಗಳು ಈ ವಾಹನ ಸೇವೆಯಲ್ಲಿ ಭಾಗವಹಿಸಿದ್ದರು.
