ಜಮೀನು ಸಾಗುವಳಿಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ | ರಸ್ತೆ ಸರಿಪಡಿಸಲು ಸಾಮಾಜಿಕ ಹೋರಾಟಗಾರ ಉಮೇಶ. ಕೆ.ಮುದ್ನಾಳ ಭರವಸೆ
ಯಾದಗಿರಿ: ತಾಲ್ಲೂಕಿನ ರಾಮಸಮುದ್ರ ಗ್ರಾಮದ ರೈತರ ಜಮೀನಿಗೆ ಹೋಗುವ ಒಳ ರಸ್ತೆಯಿಂದ ತೆರಳಲು ರೈತರಿಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ಕಿರುಕುಳ ಕೊಡುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮದ ಬಡ ರೈತರು, ಮಹಿಳೆಯರು ಗಮನಕ್ಕೆ ತಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಅವರು, ಸುಮಾರು 3- 4 ಕಿಮೀ ಕಾಲ್ನಡಿಗೆಯಲ್ಲಿ ಸಂಚಾರ ಮಾಡಿ ಪರಿಶೀಲಿಸಿ ನಂತರ ರಸ್ತೆಯಲ್ಲಿ ನಿಂತು ದಿಢೀರ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ಸುಮಾರು ನೂರಾರು ವರ್ಷಗಳ ಹಿಂದೆ ರೈತರು ತಮ್ಮ ಜಮೀನಿಗೆ ಇದೇ ದಾರಿ ಮೂಲಕ ಸಾಗುವಳಿ, ಎತ್ತಿನ ಬಂಡಿ, ದನ ಕರುಗಳು, ದವಸ ಧಾನ್ಯಗಳು ತರುತ್ತಾ ಬಂದಿದ್ದರು. ಆದರೆ ರೈತರಿಗೆ ವಿನಾಕಾರಣ ಸಾರ್ವಜನಿಕರ ವಾಹನ ಸವಾರರಿಗೆ ಸಂಕಷ್ಠಕ್ಕೆ ತಂದೊಡಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಅಡೆ-ತಡೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ರಸ್ತೆ ಮಧ್ಯದಲ್ಲಿರುವ ಕಲ್ಲು-ತೆಗ್ಗು ಗುಂಡಿಗಳನ್ನು ಸರಿಪಡಿಸಿ, ಸಾರ್ವಜನಿಕ ವಾಹನ ಸವಾರರಿಗೆ ರೈತರ ಎತ್ತಿನ ಗಾಡಿಗೆ, ಜಮೀನಿನಲ್ಲಿ ದವಸ ಧಾನ್ಯ ತರಲು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ದಿನನಿತ್ಯ ಈ ರಸ್ತೆಯ ಮುಖಾಂತರ ಟ್ಯಾಕ್ಟರ್, ಎತ್ತಿನಬಂಡಿ, ಟಂಟಂ ಮತ್ತು ಎತ್ತು ದನ ಕರು-ಕುರಿಗಳು ಸಂಚರಿಸುತ್ತವೆ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಗೆ ಆಗುವ ಅನ್ಯಾಯವನ್ನು ಸರಿಪಡಿಸಲು ಜಿಲ್ಲಾಡಳಿತ ಮುಂದಾಗಬೇಕು. ಅತಿ ಶೀಘ್ರದಲ್ಲೇ ಈ ಸಮಸ್ಯೆ ಬಗೆಹರಿಸಿ ರೈತರಿಗೆ / ಮಹಿಳೆಯರಿಗೆ ಸ್ಥಳದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
ವಿಶ್ವನಾಥ, ಅಂಜಪ್ಪ, ನರಸಿಂಹ, ಭೀಮಪ್ಪ, ನಾಗರಾಜ, ಬನ್ನಪ್ಪ, ನಾಗಪ್ಪ, ಮಲ್ಲಪ್ಪ, ಸಹದೇವ, ಭೀಮರಾಯ, ಶ್ರವಣಕುಮಾರ, ಭೀಮಾಶಂಕರ, ಮಹೇಶ, ದೇವರಾಜ, ಬಂಗಾರೆಪ್ಪ, ಮರಿಲಿಂಗಪ್ಪ, ಶರಣಪ್ಪ, ಸರಸ್ವತಿ, ಪಾರ್ವತಿ, ಮಶೆಮ್ಮ, ಲಕ್ಷ್ಮೀ, ದೇವಿಂದ್ರಮ್ಮ, ಮಹಾದೇವಿ, ಶಿವಕಾಂತಮ್ಮ, ಮಹಾದೇವಿ, ಸೇರಿದಂತೆ ಅನೇಕ ರೈತರು ಮತ್ತು ಮುದ್ನಾಳ್ ಅಭಿಮಾನಿಗಳು ಇದ್ದರು.
