ಗುರುಮಠಕಲ್ ಠಾಣೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಅನುಭವ ಇರುವ ಅಧಿಕಾರಿ ನೇಮಕ

ಗುರುಮಠಕಲ್: ಈ ಹಿಂದೆ ಗುರುಮಠಕಲ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಪಿಐ ದೌಲತ್ ಎನ್ ಕೆ ಅವರು ಪುನಃ ನಿಯುಕ್ತಿ ಗೊಂಡಿದ್ದಾರೆ.

ಯಾದಗಿರಿ ಜಿಲ್ಲೆಯ ಗುರುಮಠಕಲ್ ನಲ್ಲಿ ಕರ್ತವ್ಯ ನಿರ್ವಹಿಸಿ ಇಲ್ಲಿಂದ ಪಕ್ಕದ ಸೇಡಂ ತಾಲೂಕಿನ ಮುಧೋಳ ಠಾಣೆಗೆ ವರ್ಗಾವಣೆಯಾಗಿದ್ದರು, ಅಲ್ಲಿಂದ ಕಲಬುರಗಿ ನಗರ ವಿಶೇಷ ಶಾಖೆಯಲ್ಲಿದ್ದ ಅವರನ್ನು ಗುರುಮಠಕಲ್ ಠಾಣೆಗೆ ನಿಯೋಜಿಸಿ ಇಲಾಖೆ ಆದೇಶ ಹೊರಡಿಸಿದೆ.

ಪಿಐ ದೌಲತ್ ಎನ್ ಕೆ ಅವರು ಎರಡನೇ ಬಾರಿಗೆ ಗುರುಮಠಕಲ್ ಠಾಣೆಯ ಕಾರ್ಯಭಾರ ವಹಿಸಲಿದ್ದಾರೆ. ಮೇ.16 ರಂದೇ ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಅವರ ಕಾರ್ಯಾಲಯ ಆದೇಶ ಹೊರಡಿಸಿದೆ.

Spread the love

Leave a Reply

Your email address will not be published. Required fields are marked *

error: Content is protected !!