ವಿಯೆಟ್ನಾಂನಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರದಾನ | ಭಕ್ತರಿಂದ ಅಭಿನಂದನೆಗಳು ಮಹಾಪುರ

ವಿಯೆಟ್ನಾಂ ದೇಶದಲ್ಲಿ ನಡೆದ ಇಂಡೋ-ವಿಯೆಟ್ನಾಂ ಅಂತರರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನದಲ್ಲಿ ತಮ್ಮ ಸೇವೆಯನ್ನು ಗುರುತಿಸಿ ನೀಡಿರುವ 2026ನೇ ಸಾಲಿನ ಇಂಡೋ ನಾಮ್ ಸೈಂಟಿಫಿಕ್ ಸಮಿಟ್ ಫೆಲೋಶಿಪ್ ಪ್ರಶಸ್ತಿಯನ್ನು ಭಕ್ತರಿಗೆ ಸಮರ್ಪಿಸುತ್ತೇನೆ. ಈ ಪುರಸ್ಕಾರದಿಂದ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ –  ಪೂಜ್ಶ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀ.

ಯಾದಗಿರಿ/ಗುರುಮಠಕಲ್: ಗಡಿಭಾಗದ ಪೂಜ್ಯ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾ ಸ್ವಾಮೀಜಿ ಅವರಿಗೆ 2026ನೇ ಸಾಲಿನ ಇಂಡೋ-ವಿಯೆಟ್ನಾಂ ಸೈಂಟಿಫಿಕ್ ಸಮಿಟ್ ಫೆಲೋಶಿಪ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ವಿಯೆಟ್ನಾಂನಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವತಿಯಿಂದ ಶುಕ್ರವಾರ ನಡೆದ ಇಂಡೋ-ವಿಯೆಟ್ನಾಂ ಅಂತರರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನದಲ್ಲಿ ಈ ಫೆಲೋಶಿಪ್ ಪ್ರದಾನ ಮಾಡಲಾಗಿದೆ.

​ಗಡಿಭಾಗದಲ್ಲಿ ಪರಮ ಪೂಜ್ಯರು ಕಳೆದ ಎರಡು ದಶಕಗಳಿಂದ ಬಸವತತ್ವ ಪ್ರಚಾರ ಪ್ರಸಾರ ಕೈಗೊಂಡು ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. ಜತೆಗೆ ಧಾರ್ಮಿಕ, ಸಮಾಜ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ವಿಶಿಷ್ಟ ಸೇವೆಯನ್ನು ಗುರುತಿಸಿ ಪರಮ ಪೂಜ್ಯರಿಗೆ ವಿದೇಶದಲ್ಲಿ ಅಂತರರಾಷ್ಟ್ರೀಯ ಮಟ್ಟದ ಸೈಂಟಿಫಿಕ್ ಸಮಿಟ್ ಫೆಲೋಶಿಪ್ ನೀಡಿ, ಗೌರವಿಸಲಾಗಿದೆ.

ಭಕ್ತರಿಂದ ಭಕ್ತಿಪೂರ್ವಕ ಅಭಿನಂದನೆ: ಗಡಿ ಭಾಗದಲ್ಲಿರುವ ಶ್ರೀಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಬಂದಿರುವುದು ನಮಗೆಲ್ಲ ಹಿಮ್ಮೆಯ ವಿಷಯ ಎಂದು ಶ್ರೀಮಠದ ಭಕ್ತರು ಶ್ರೀಗಳಿಗೆ ಭಕ್ತಿಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!