ಶಾಸಕರ ಮೇಲಿರುವ ಜನರ ಆರೋಗ್ಯ ಕಾಳಜಿಗೆ ಶ್ಲಾಘನೆ | ಶಾಸಕರಿಂದ ವೈಯಕ್ತಿಕ 50 ಪ್ರೋಟಿನ್ ಕಿಟ್ ವಿತರಣೆ | ಪ್ರಧಾನ ಮಂತ್ರಿ ಕ್ಷಯ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ
ಗುರುಮಠಕಲ್: ಭಯ ಮುಕ್ತವಾಗಿ ಸೂಕ್ತ ಚಿಕಿತ್ಸೆ ಪಡೆದು ರೋಗಗಳಿಂದ ಮುಕ್ತಿ ಪಡೆಯಬಹುದು, ಈ ನಿಟ್ಟಿನಲ್ಲಿ ಕ್ಷಯ ರೋಗಿಯು ಕೂಡ ಸಕಾಲಕ್ಕೆ ಉಪಚಾರ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಗುರುಮಠಕಲ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಮಧ್ಯಾಹ್ನ ಪ್ರಧಾನ ಮಂತ್ರಿ ಕ್ಷಯ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಿ, ಮಾತನಾಡಿದರು.
ರೋಗ ಉಲ್ಬಣಗೊಂಡು ಕುಟುಂಬದವರಿಗೆ ಹರಡುತ್ತದೆ. ಹಾಗಾಗಿ ಜಾಗೃತಿ ವಹಿಸಬೇಕು. ಜಿಲ್ಲೆಯಲ್ಲಿ 1178 ರೋಗಿಗಳು ಪತ್ತೆಯಾಗಿದ್ದಾರೆ. ವಾಸಿಯಾಗಲಾರದ ರೋಗವಂತು ಅಲ್ಲ. ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ಆಸ್ಪತ್ರೆಗೆ ಭೇಟಿ ನೀಡಬೇಕು, ಬೇಗ ತೋರಿಸಿಕೊಂಡರೆ ಬೇಗ ಚೇತರಿಕೆ ಸಾಧ್ಯ ಎಂದರು. ಕೇಂದ್ರ ಸರ್ಕಾರ ಜನರ ಆರೋಗ್ಯ ದೃಷ್ಟಿಯಿಂದ ಇಂತಹ ಕಾರ್ಯಕ್ರಮ ರೂಪಿಸಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮನೆಬಾಗಿಲಿಗೆ ತಲುಪಿಸಲು ಹೇಳಿದರು.
ಕಾರ್ಯಕ್ರಮಾಧಿಕಾರಿ ಡಾ. ಸಂಜೀವ ಕುಮಾರ್ ರಾಯಚೂರಕರ್ ಮಾತನಾಡಿ, ಸಮಾಜದ ಪಾಲ್ಗೊಳ್ಳುವಿಗೆಯಿಂದ ರೋಗ ಮುಕ್ತ ಮಾಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದರು. ಕ್ಷಯ ಮುಕ್ತ ಮಾಡಲು, ರೋಗಿಗಳಿಗೆ ಪೌಷ್ಟಿಕ 50 ಕಿಟ್ ಶಾಸಕರು ವೈಯಕ್ತಿಕ ವಿತರಣೆ ಮಾಡಿರುವುದು ಜನಪರ ಕಾಳಜಿ ತೋರುತ್ತದೆ.
ಮಾಜಿ ಶಾಸಕ ದಿ. ನಾಗನಗೌಡ ಕಂದಕೂರ ಹಾಗೂ ಶಾಸಕ ಶರಣಗೌಡ ಕಂದಕೂರ ಅವರು ಸಹ ಕಾಳಜಿ ಹೊಂದಿದ್ದಾರೆ. ರೋಗಿಗಳು ಔಷಧಿ ಜೊತೆಗೆ ಪೌಷ್ಠಿಕಾಂಶ ಆಹಾರ ಸೇವನೆ ಮಾಡಬೇಕು. ಬೇಳೆಕಾಳು ಸೇವನೆ ಅಗತ್ಯ. ಹಣ್ಣು ಹಂಪಲು, ಹಾಲು ಸೇವಿಸಬೇಕು ಎಂದು ಸಲಹೆ ನೀಡಿದರು.
ಡಿಹೆಚ್ ಓ, ಮಹೇಶ ಬಿರಾದಾರ ಮಾತನಾಡಿ, ಟಿಬಿ ಮುಕ್ತ ಭಾರತಕ್ಕೆ ಗ್ರಾಮದಿಂದ ಆರಂಭವಾಗಬೇಕು. ಎಲ್ಲರ ಸಹಕಾರ ಅಗತ್ಯವಿದೆ. ಇದು ಬ್ಯಾಕ್ಟೀರಿಯಾ ದಿಂದ ಹರಡುವ ರೋಗ. ಆರೋಗ್ಯ ಕಾರ್ಯಕರ್ತರು ಜನರಿಗೆ ಜಾಗೃತಿ ಮೂಡಿಸಿ. ಉಚಿತ ಪರೀಕ್ಷೆ, ಉಚಿತ ಚಿಕಿತ್ಸೆ ದೊರೆಯಲಿದೆ ಎಂದರು. 100 ದಿನಗಳ ಅಭಿಯಾನ ನಡೆಯಲಿದೆ. ಗುಣಪಡಿಸುವ ರೋಗವಾಗಿದೆ ಸೂಕ್ತ ಚಿಕಿತ್ಸೆ ಪಡೆಯಲು ತಿಳಿಸಿದರು.
ಟಿಹೆಚ್ಓ ಹಣಮಂತ ರೆಡ್ಡಿ, ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ವೈದ್ಯಾಧಿಕಾರಿ ಮಹೇಶ್ ಸಜ್ಜನ್, ಡಾ. ನೀಲಾಂಬಿಕಾ, ಮುಖ್ಯಾಧಿಕಾರಿ ಶರಣಪ್ಪ ಎಂ. ಕಿಶನ್ ರಾಠೋಡ ಸೇರಿದಂತೆ ಇತರರು ಇದ್ದರು.
