ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಎನ್ ಡಿ ಎ ಮೈತ್ರಿ ಅಭ್ಯರ್ಥಿ ಶಶಿಲ್ ಜಿ.ನಮೋಶಿ ಪರ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಮತಯಾಚನೆ

ಗುರುಮಠಕಲ್ : ನಮೋಶಿ 4 ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. 5ನೇ ಬಾರಿಗೆ ಎನ್ ಡಿ ಎ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ, ಶಿಕ್ಷಕರ ಸಮಸ್ಯೆಗೆ ಪರಿಹಾರ ನೀಡಿದ್ದಾರೆ. ಓಪಿಎಸ್ ಕುರಿತು ಹಲವು ಸಾರಿ ಧ್ವನಿ ಎತ್ತಿದ್ದಾರೆ. ಅವರು ಶಿಕ್ಷಣ, ಶೈಕ್ಷಣಿಕ ಕ್ಷೇತ್ರದ ಕಾಳಜಿ ಇರುವ ವ್ಯಕ್ತಿ ಅಂತವರಿಗೆ ಮನ್ನಣೆ  ನೀಡಲು ಶಾಸಕ ಶರಣಗೌಡ ಕಂದಕೂರ ಅವರು ಮನವಿ ಮಾಡಿದರು.

ಗುರುಮಠಕಲ್ ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಶಿಕ್ಷಕ ಮತದಾರರ ಸಭೆಯಲ್ಲಿ ಮಾತನಾಡಿ, ನಮೋಶಿ ಶೈಕ್ಷಣಿಕ ಕಾಳಜಿ ಮೆಚ್ಚುವಂತದ್ದು, ಒತ್ತಡಗಳಿಗೆ ಮಣಿಯದೆ ಅರ್ಹ ವ್ಯಕ್ತಿಯನ್ನು ಆರಿಸಬೇಕಿದೆ.

ನಮೋಶಿ ಅವರಿಗೆ ದೇವರು ಎಲ್ಲವೂ ಕೊಟ್ಟಾಗಿದೆ. ಅವರ ಅನುಭವ, ಕಾಳಜಿ, ಮಾರ್ಗದರ್ಶನದ ಮೂಲಕ ನಮ್ಮ ಭಾಗದ ಅಭಿವೃದ್ಧಿಗೆ ಆದ್ಯತೆ ದೊರೆಯಲು ಸಹಕಾರ ನೀಡಬೇಕಿದೆ ಎಂದರು. ನಮ್ಮ ಕಷ್ಟ ಕೇಳಿ ಪರಿಹರಿಸುವ ವ್ಯಕ್ತಿಯನ್ನು ಆರಿಸಬೇಕಿದೆ. 5 ನೇ ಬಾರಿ ‌ಹೆಚ್ಚಿನ ಮತ ನೀಡಿ, ಅಭಿವೃದ್ಧಿಗೆ ವೇಗ ನೀಡಬೇಕು ಎಂದು ಮನವಿ ಮಾಡಿದರು.

ಪ್ರಾಸ್ತಾವಿಕವಾಗಿ ನಿವೃತ್ತ ಮುಖ್ಯಗುರು ಬಸವರಾಜ ನೆಲ್ಲೋಗಿ ಮಾತನಾಡಿ, ಅ.23 ರಂದು ಚುನಾವಣೆ ಹಿನ್ನೆಲೆಯಲ್ಲಿ ಎಲ್ಲರೂ ಮತದಾನ ಮಾಡಲು ಮನವಿ ಮಾಡಿದರು. ಸುಭಾಶ್ಚಂದ್ರ ಹೊನಗೇರಿ ಮಾತನಾಡಿ, ನಮೋಶಿ ಅವರು ಶಿಕ್ಷಣ ಕ್ಷೇತ್ರಕ್ಕೆ ಅಮುಲ್ಯ ಕೊಡುಗೆ. ಶಿಕ್ಷಕರ ಸಮಸ್ಯೆಗೆ ಧ್ವನಿ ಎತ್ತುವ ವ್ಯಕ್ತಿ ಎಂದರು. ಒಂದು ಕೈಗೆ ಇನ್ನೊಂದು ಶಾಸಕರ ಕೈ ಬಲಪಡಿಸಲು ‌ಸಾಧ್ಯವಾಗುತ್ತದೆ. ಮೊದಲನೇ ಪ್ರಾಶಸ್ತ್ಯ ಮತ ನಮೋಶಿ ಅವರಿಗೆ ನೀಡಲು ಮನವಿ ಮಾಡಿದರು.

ರಾಮಣ್ಣ ಕೋಟಗೇರಾ, ಪ್ರಕಾಶ ನೀರೆಟಿ, ಶರಣು ಆವುಂಟಿ, ರವಿ ಪಾಟೀಲ್, ಭೀಮಶಪ್ಪ ಗೂಡ್ಸೆ, ತಾಯಪ್ಪ ಬದ್ದೇಪಲ್ಲಿ, ಜಯಚಂದ್ರ , ಈಶ್ವರ ನಾಯ್ಕ ಇತರರು ವೇದಿಕೆಯಲ್ಲಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!