ಡಿಎಸ್ ಎಸ್ ನಿಂದ ಕೆಯುಡಬ್ಲ್ಯಜೆ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅವರಿಗೆ ಸನ್ಮಾನ

ಯಾದಗಿರಿ: ಕನಾ೯ಟಕ ರಾಜ್ಯ ದಲಿತ ಸಂಘಷ೯ ಸಮಿತಿ ಜಿಲ್ಲಾ ಶಾಖೆ (ಡಿ.ಜಿ. ಸಾಗರ ಬಣ) ವತಿಯಿಂದ ಜಿಲ್ಲಾ ಕಾಯ೯ನಿರತ ಪತ್ರಕತ೯ರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅವರಿಗೆ ಸನ್ಮಾನ ಮಾಡಿದರು. ಜಿಲ್ಲಾ ಪತ್ರಿಕಾ ಭವನದಲ್ಲಿ ಕನಾ೯ಟಕ ರಾಜ್ಯ ದಲಿತ ಸಂಘಷ೯ ಸಮಿತಿಯ ಜಿಲ್ಲಾ ಶಾಖೆಯ ಪದಾಧಿಕಾರಿಗಳು ಬುಧವಾರ ಸನ್ಮಾನ ಮಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್, ಮಾಧ್ಯಮಗಳು ಯಾವಾಗಲೂ ಧ್ವನಿಯಿಲ್ಲದವರು ಮತ್ತು ಶೋಷಿತರ ಪರವಾಗಿ ನಿಂತಾಗ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಾಮಾಜಿಕ ವ್ಯವಸ್ಥೆಯಲ್ಲಿ ಜನರು ಮಾಧ್ಯಮಗಳ ಮೇಲೆ ಸಾಕಷ್ಟು ವಿಶ್ವಾಸ ಇಟ್ಟುಕೊಂಡಿದ್ದಾರೆ. ಇದು ಅರಿತುಕೊಂಡು ಕೆಲಸ ಮಾಡುವುದು ತುಂಬ ಅಗತ್ಯವಿದೆ ಎಂಬುದು ಮಾಧ್ಯಮಗಳು ಮರೆಯಬಾರದು ಎಂದು ತಿಳಿಸಿದರು.

ಜನರು ಎದರುಸುತ್ತಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವಂತಹ ಕೆಲಸ ಪ್ರಾಮಾಣಿಕವಾಗಿ ಮಾಡುವುದು ಪತ್ರಕತ೯ರ ಪ್ರಮುಖವಾದ ಜವಾಬ್ದಾರಿಯಾಗಿದೆ. ಇದರಿಂದ ನುಣಚಿಕೊಳ್ಳಬಾರದು. ಮಾಧ್ಯಮಗಳು ನಿಭ೯ಯದಿಂದ ಕೆಲಸ ಮಾಡಿದಾಗ ಮಾತ್ರ ಬಲಿಷ್ಠವಾದ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಡಿಎಸ್ ಎಸ್ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ, ಸಘಟನಾ ಸಂಚಾಲಕ ಚಂದಪ್ಪ ಮುನೆಪ್ಪನೋರ, ಶಿವಲಿಂಗ ಹಸನಾಪೂರ, ಮರೆಪ್ಪ ಕ್ರಾಂತಿ, ದೇವು ಹುಲ್ಕಲ್ (ಜೆ), ಶರಣಪ್ಪ ಮಾಲಹಳ್ಳಿ, ತಾಯಪ್ಪ ಭಂಡಾರಿ, ನಾಗರಾಜ ಕೋಡಮನಹಳ್ಳಿ, ಸಂತೋಷ ಗುಂಡಳ್ಳಿ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!