ಮಂಗಟ್ಟೆ ಹಕ್ಕಿ ವನ್ಯ ಜೀವಿ ರಕ್ಷಣೆ ಕುರಿತ ನೃತ್ಯ ರೂಪಕ ಪ್ರದರ್ಶನ | ಅರಣ್ಯ ಇಲಾಖೆಯಿಂದ 72ನೇ ವನ್ಯ ಜೀವಿ ಸಪ್ತಾಹ |4-5% ಕಾಡು ಮಾತ್ರ ಜಿಲ್ಲೆಯಲ್ಲಿದೆ | ಗುರುಮಠಕಲ್ ನಲ್ಲಿ ಬೃಹತ್ ಜಾಗೃತಿ ಜಾಥಾ | ಕಾಡು ಬೆಳಿಸಿ ನಾಡು ಉಳಿಸಿ

ಗುರುಮಠಕಲ್: ಜನರಿಗೆ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಪರಿಸರ ಸಂರಕ್ಷಣೆ ಮಾಡಲು ಸಮಾಜದ ಸಹಕಾರ ಅಗತ್ಯ  ಎಂದು ಉಪ ಪ್ರಾದೇಶಿಕ ವಲಯ ಸಂರಕ್ಷಣಾಧಿಕಾರಿ ಎಂ.ಬಿ.ಪಾಟೀಲ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಪ್ರಾದೇಶಿಕ ಅರಣ್ಯ ವಿಭಾಗ ಯಾದಗಿರಿ, ಗುರುಮಠಕಲ್ ವಲಯ ದಿಂದ 72ನೇ ವನ್ಯ ಜೀವಿ ಸಪ್ತಾಹವನ್ನು ಸಸಿಗೆ ನೇರೆರೆದು ಉದ್ಘಾಟಿಸಿ ಮಾತನಾಡಿ, ಹುಟ್ಟು ಹಬ್ಬದ ನಿಮಿತ್ತ ಒಂದು ಗಿಡ ನೆಟ್ಟು ಪರಿಸರ ಸಂರಕ್ಷಣೆಗೆ ಪಣತೊಡಬೇಕು ಎಂದು ಕರೆ ನೀಡಿದರು.ಸಾಮಾಜಿಕ ಅರಣ್ಯ ವಲಯ ಚೇತನ್ ಗಸ್ತಿ ಮಾತನಾಡಿ, ಪಠ್ಯದ ಜೊತೆ ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳು ತಿಳಿ ಹೇಳಬೇಕು. ಪರಿಸರ ಅಸಮತೋಲನ ಪರಿಣಾಮ ಎದುರಿಸಿದ್ದು ಅನುಭವವಾಯಿತು ಹಾಗಾಗಿ ಎಲ್ಲರೂ ಕಾಡು ಬೆಳೆಸಬೇಕು ಎಂದು ಮನವಿ ಮಾಡಿದರು.

ಎಸಿಎಫ್ ರಮೇಶ್ ಪ್ರಾಸ್ತಾವಿಕ ಮಾತನಾಡಿ, ವನ್ಯ ಜೀವಿಗಳ ದಿನ ಆರಂಭ 1952 ಆಚರಣೆ ಮಾಡಲಾಗುತ್ತಿತ್ತು, 1957ರಿಂದ ವನ್ಯ ಜೀವಿ ಸಾಪ್ತಾಹ ಅಕ್ಟೋಬರ್ ತಿಂಗಳಲ್ಲಿ ಆಚರಣೆ ಮಾಡಲಾಗುತ್ತಿದೆ. ರಾಜ್ಯದ 2 ನೇ ಅತಿ ದೊಡ್ಡ ಪಕ್ಷಿಧಾಮ ಬೋನಾಳದಲ್ಲಿರುವುದು ನಮ್ಮ ಜಿಲ್ಲೆಯ ಹೆಮ್ಮೆ ಎಂದರು.

ವನ್ಯ ಜೀವಿಗಳ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪರಿಸರದಲ್ಲಿ ಒಂದು ಹುಳು ಕೂಡ ಮುಖ್ಯವಾಗಿದೆ. ಒಂದಕ್ಕೊಂದು ಅವಲಂಬನೆಯಾಗಿದೆ. ಹಾಗಾಗಿ ಪರಿಸರ ಸಂರಕ್ಷಣೆ ಮಾಡಿ, ಜೀವಿಗಳ ರಕ್ಷಣೆ ಮಾಡಬೇಕು ಎಂದರು.

ಪರಿಸರವಾದಿ ಶೈಲೇಂದ್ರ ಕೆ. ಮಾತನಾಡಿ, ವನ್ಯ ಜೀವಿಗಳು ದೇಶದ ಸಂಪತ್ತು. ಪರಿಸರ ಸಮತೋಲನ ಕಾಪಾಡಲು ಜೀವಿಗಳ ಸಹಕಾರಬೇಕು. 1926 ಅರಣ್ಯ ಇಲಾಖೆ ಉಚಿತ ಸಹಾಯವಾಣಿ ಎಂದು ಜಾಗೃತಿ ಮೂಡಿಸಿದರು. ಗೂಬೆ ಮನೆ ಎದುರು ಕೂಗಿದರೆ ಅಪಶಕುನ ಎನ್ನುತ್ತಾರೆ ಆದರೇ ವಿದೇಶದಲ್ಲಿ ರಾಷ್ಟ್ರೀಯ ಪಕ್ಷಿ ಸ್ಥಾನ ಮಾನಯಿದೆ. ನಮ್ಮಲ್ಲಿ ಮೂಡನಂಬಿಕೆ ಸಾಕಷ್ಟಿದೆ ಎಂದರು.ಕಾಲೇಜು ಪ್ರಾಂಶುಪಾಲ ಪ್ರೊ.ಪುರುಷೋತ್ತಮ ಜೋಶಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಇದೆ. ನಮ್ಮ ಕಾಲೇಜಿಗೆ ವನ್ಯ ಜೀವಿಗಳಿಗೆ ಸಂಬಂಧವಿದೆ. ಕಾಲೇಜಿಗೆ ಹಾವು ಬರುತ್ತವೆ ಅವುಗಳನ್ನು ಪರಿಸರಕ್ಕೆ ಬಿಟ್ಟು ಬರುತ್ತೆವೆ ಎಂದರು. ಅರಣ್ಯದೊದಿಗೆ ಮಾನವ ಜೀವನಕ್ಕೆ ಸಾಕಷ್ಟು ಸಂಬಂಧವಿದೆ. ನಾವೆಲ್ಲಾ ಕನಿಷ್ಠ ಒಂದು ಗಿಡವನ್ನು ನೆಡಬೇಕು ಎಂದು ಹೇಳಿದರು.ಜಾಗೃತಿ ಜಾಥಾ: ಬಸ್ ನಿಲ್ದಾಣ ಆವರಣದಲ್ಲಿ ವನ್ಯ ಜೀವಿ ಸಪ್ತಾಹ ಜಾಥಾಕ್ಕೆ ಚಾಲನೆ ನೀಡಲಾಯಿತು. ಅರಣ್ಯಾಧಿಕಾರಿಗಳು, ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿತು.

ಚಿತ್ರ ಕಲೆ, ಪ್ರಬಂಭ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ತಾ.ಪಂ. ಅಧಿಕಾರಿ ಮಲ್ಲಿಕಾರ್ಜುನ ಪೂಜಾರಿ, ಅಹ್ಮದ್ ಹಸನ್ , ಗುರುಮಠಕಲ್ ಆರ್ ಎಫ್ ಒ ರಾಹುಲ್ ಎಸ್, ಹುಸೇನಪ್ಪ ಎಎಸ್ಐ ವೇದಿಕೆಯಲ್ಲಿದ್ದರು. ಉಪನ್ಯಾಸ ಕೃಷ್ಣ ಚಪೆಟ್ಲಾ ನಿರೂಪಿಸಿ, ವಂದಿಸಿದರು. ಉಪ ವಲಯ ಅರಣ್ಯಾಧಿಕಾರಿ ಭೀಮಾಶಂಕರ ಸ್ವಾಗತಿಸಿ, ವನ್ಯ ಜೀವಿಗಳ ಸಂರಕ್ಷಣೆ ಕುರಿತು ಜಾಗೃತಿ ಹಾಡು ಹಾಡಿದರು.

Spread the love

Leave a Reply

Your email address will not be published. Required fields are marked *

error: Content is protected !!