ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಆಯೋಜನೆ | ಬಿಜೆಪಿ ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ ಭಾಗಿ


ಗುರುಮಠಕಲ್: ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಕೈಗೊಂಡ ನಿರ್ಣಯಗಳು ಇತಿಹಾಸದಲ್ಲಿ ದಾಖಲಾಗುವಂತದ್ದಾಗಿವೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಲಲಿತಾ ಅನಪುರ ಅಭಿಪ್ರಾಯಪಟ್ಟರು.

ಗುರುಮಠಕಲ್ ಪಟ್ಟಣದ ಡಾ. ಬಿ.ಆರ್, ಅಂಬೇಡ್ಕರ್ ಮತ್ತು ಬಾಬುಜೀ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ಹರ್ ಘರ್ ತಿರಂಗಾ ಯಾತ್ರೆ ಪ್ರಯುಕ್ತ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಸ್ವಾತಂತ್ರ್ಯ ಉತ್ಸವ ಹಿನ್ನೆಲೆ ವಿಶಿಷ್ಟ ಕಾರ್ಯಕ್ರಮ ರೂಪಿಸಲಾಗಿದೆ. ಯಾವತ್ತೂ ದೇಶಾಭಿಮಾನ ಮೂಡಿಸುವ ಕಾರ್ಯ ನಮ್ಮ ಪಕ್ಷ ಮಾಡುತ್ತದೆ. ದೇಶ ಭಕ್ತರ ಸೋಗು ಹಾಕಿಕೊಂಡು, ದೇಶ ಒಡೆಯುವವರಿಂದ ಜಾಗೃತಿವಹಿಸುವ ಅಗತ್ಯವಿದೆ ಎಂದರು.ಸ್ವಾತಂತ್ರೋತ್ಸವದ ಅಂಗವಾಗಿ ಬಿಜೆಪಿ ವತಿಯಿಂದ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಆ. 13ರಿಂದ 15ರವರೆಗೆ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಹರ್ ಘರ್ ತಿರಂಗಾ ಕಾರ್ಯಕ್ರಮ ನಿಮಿತ್ಯ ಬೈಕ್ ರ್ಯಾಲಿ, ಎಲ್ಲ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವುದು, ಎಲ್ಲ ದಾರ್ಶನಿಕರ ಪುತ್ಥಳಿಗಳನ್ನು ಸ್ವಚ್ಛಗೊಳಿಸುವ ಮುಖಾಂತರ 79ನೇ ಸ್ವಾತಂತ್ರತ್ಯೋತ್ಸ ವ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ರಾಷ್ಟ್ರ ಧ್ವಜಕ್ಕೆ ಗೌರವಿಸಬೇಕು, ಜಾಗೃತಿ ವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ , ಮೇಳಪ್ಪ ಗುಳಿಗಿ , ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ್ ಸಾಹುಕಾರ, ಮಂಡಲ ಅಧ್ಯಕ್ಷರು ನರಸಿಂಹಲು ನೀರೇಟಿ, ಚಂದುಲಾಲ ಚೌಧರಿ, ಜಗದೀಶ್ಚಂದ್ರ ಮೇಂಗಜಿ, ವಿನಾಯಕ ಜನಾರ್ಧನ ಸೇರಿದಂತೆ ಜಿಲ್ಲಾ, ಮಂಡಲ, ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು, ಬಿಜೆಪಿ ಹಿರಿಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!