ಬಸ್ ಓವರ್ ಟೇಕ್ ಮಾಡುವ ವೇಳೆ ತಪ್ಪಿದ ಭಾರಿ ಅನಾಹುತ | ಧರ್ಮಪುರ ತಿರುವು ಬಳಿ ಬಸ್ ಗೆ ತರಿಚಿದ ಲಾರಿ | ಆತಂಕಗೊಂಡ ಪ್ರಯಾಣಿಕರು
ಯಾದಗಿರಿ: ಯಾದಗಿರಿಯಿಂದ ಹೈದರಾಬಾದ್ ಗೆ ತೆರಳಬೇಕಿದ್ದ ಸಾರಿಗೆ ವಾಹನ ಅದೃಷ್ಟವಶಾತ್ ಅಪಘಾತ ತಪ್ಪಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯಾದಗಿರಿಯಿಂದ ಸೀಟ್ ಲೆವೆಲ್ ಪ್ರಯಾಣಿಕರು ತುಂಬಿದ್ದ ಸಾರಿಗೆ ಬಸ್ 10:20 ರ ಸುಮಾರಿಗೆ ಧರ್ಮಪುರ ತಿರುವು ಮಾರ್ಗವಾಗಿ ಗುರುಮಠಕಲ್ ಗೆ ಬರುವ ವೇಳೆ ಬಸ್ ಚಾಲಕ ಓವರ್ ಟೇಕ್ ಮಾಡುವ ವೇಳೆ ಏಕಾಏಕಿ ಎದುರಿನಿಂದ ಲಾರಿಯೊಂದು ಬಂದಿದ್ದು, ಇಬ್ಬರು ಚಾಲಕರ ಜಾಣ್ಮೆಯಿಂದ ಭಾರಿ ಅನಾಹುತ ತಪ್ಪಿದೆ.
ಘಟನೆಯಲ್ಲಿ ಚಾಲಕನ ಪಕ್ಕದ ಕಿಟಕಿ ಗಾಜು ಪುಡಿಯಾಗಿದ್ದು, ಬಸ್ ಡ್ರೈವರ್ ಡೋರ್ ಬಳಿ ತರಿಚಿದೆ. ಇದರಿಂದ ಬಸ್ ನಲ್ಲಿದ್ದ ಪ್ರಯಾಣಿಕರು ಆತಂಕ ಗೊಂಡಿದ್ದೇವು ಎಂದು ಕೆಲ ಪ್ರಯಾಣಿಕರು ಆ ಕ್ಷಣದ ಕುರಿತು ವಿವರಿಸಿದರು.
ಬಸ್ ನಲ್ಲಿ ಹೆಚ್ಚಿನ ಪ್ರಯಾಣಿಕರು ಗುರುಮಠಕಲ್ ವರೆಗೆ ಪ್ರಯಾಣಿಸುವವರಿದ್ದರು, 20 ಜನ ಹೈದರಾಬಾದ್ ಗೆ ಪ್ರಯಾಣ ಮಾಡುವವರಿದ್ದರು ಎಂದು ತಿಳಿದು ಬಂದಿದೆ.
ಗ್ಲಾಸ್ ಪುಡಿಗೊಂಡಿದ್ದರಿಂದ ಬಸ್ ಕೆಲ ಹೊತ್ತು ಗುರುಮಠಕಲ್ ಬಸ್ ನಿಲ್ದಾಣದಲ್ಲಿ ನಿಂತಿತ್ತು. ಇದರಿಂದ ಅಸಮಾಧಾನಗೊಂಡ ಪ್ರಯಾಣಿಕರು ಹಣ ವಾಪಸ್ ನೀಡಿ ಎಂದು ಪಟ್ಟು ಹಿಡಿದರು. ಜನರನ್ನು ಸಮಾಧಾನಗೊಳಿಸಿ ಬೇರೆ ವಾಹನದಲ್ಲಿ ಗುರುಮಠಕಲ್ ಮಾರ್ಗವಾಗಿ ಹೈದರಾಬಾದ್ ಗೆ ತೆರಳಬೇಕಿದ್ದ ಪ್ರಯಾಣಿಕರನ್ನು ಕಳಿಸಲಾಯಿತು.
