ಗುರುಮಠಕಲ್: ಸರ್ಕಾರಿ ನೌಕರರ ಸಂಘ ನೌಕರರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ನೂತನ ವಿಭಾಗೀಯ ಉಪಾಧ್ಯಕ್ಷ ಸಂತೋಷ ನೀರೆಟಿ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡನೇ ಬಾರಿಗೆ ಗುರುಮಠಕಲ್ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು ತಾಲೂಕಿನ ಎಲ್ಲಾ ನೌಕರರಿಗೆ ಧನ್ಯವಾದ ಹೇಳಿದರು.

ಗುರುಮಠಕಲ್ ಸಂಘದ ಕಾರ್ಯಚಟುವಟಿಕೆಗಳು ಮನಗಂಡು ತಮಗೆ ಸರ್ಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಅವರು ಆದೇಶ ನೀಡಿದ್ದು, ರಾಜ್ಯಾಧ್ಯಕ್ಷರು ಮತ್ತು ಕೇಂದ್ರ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಯಾದಗಿರಿ ಜಿಲ್ಲೆಯ ನೌಕರರಿಗೆ ಅಭಿನಂದನೆ ತಿಳಿಸಿದ್ದಾರೆ.

ತಮಗೆ ಹುದ್ದೆ ನೀಡಿ ಇನ್ನಷ್ಟು ಕೆಲಸ ಮಾಡಲು ಪ್ರೋತ್ಸಾಹ ನೀಡಿದ್ದಾರೆ. ನೌಕರರ ಸೇವೆ ಮಾಡಿ ಸಂಘಕ್ಕೆ ಕೀರ್ತಿ ತರುತ್ತೇನೆ ಎಂದರು. ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ನಾರಾಯಣ ರೆಡ್ಡಿ ಪೊ.ಪಾಟೀಲ್ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!