ಮಾತಾ ಮಾಣಿಕೇಶ್ವರಿ ಅಮ್ಮನವರ 5 ನೇ ಅವತಾರೋತ್ಸವ |ಪೂಜ್ಯ ಶಿವಯ್ಯ ಸ್ವಾಮಿ ಆಶೀರ್ವಚನ

ಸೇಡಂ (ಸೂರ್ಯನಂದಿಬೆಟ್ಟ): ಅಶ್ರಮದ ಸುತ್ತಮುತ್ತಲಿನ ಜನರಲ್ಲಿನ ಅಜ್ಞಾನ ದೂರವಾಗಬೇಕಿದೆ‌. ಭಕ್ತಿಯ ಜೊತೆಗೆ ಪ್ರತಿ ದೇವಾಲಯವು ಜ್ಞಾನ ಕೇಂದ್ರವಾಗಬೇಕು. ಹಿಂಸೆಗಳು ನಿಲ್ಲಬೇಕು ಎಂದು ರೂಪರಹಿತ ಅಹಿಂಸಾ ಯೋಗೀಶ್ವರ ವೀರಧರ್ಮಜ ಮಾತಾ ಟ್ರಸ್ಟ್ ಕಾರ್ಯದರ್ಶಿ ಪೂಜ್ಯ ಶಿವಯ್ಯಸ್ವಾಮಿ ಹೇಳಿದರು.

ಯಾನಾಗುಂದಿಯಲ್ಲಿ ವೀರಧರ್ಮಜ ಮಾತೆ ಮಾಣಿಕೇಶ್ವರಿ ಅಮ್ಮನವರ 5ನೇ ಅವತಾರೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಭಕ್ತರು ಇಚ್ಛಿಸಿದರೆ 11 ದಿನಗಳವರೆಗೆ ಕಾರ್ಯಕ್ರಮ ನಡೆಸಿದರೂ ಅಮ್ಮನವರ ಪವಾಡ, ಮಹಿಮೆ ಅರಿಯಲು ಸಮಯ ಸಾಲಲ್ಲ ಎಂದರು.

ಸನ್ಮಾರ್ಗದಲ್ಲಿ ನಡೆದ 25% ಜಗತ್ತು ಉಳಿಯಲಿದೆ. ಇವರಲ್ಲಿ ನಾವಿರಬೇಕು ಎನ್ನುವುದು ಅರಿಯಬೇಕು ಅಮ್ಮನವರ ಆಶಯದಂತೆ ಅಹಿಂಸಾ ಮಾರ್ಗದಲ್ಲಿ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು. ಹಿಂಸೆ ಮಾಡಿದರೆ ವಂಶ ನಿರ್ವಂಶವಾಗುತ್ತವೆ ಎಚ್ಚರವಹಿಸಿ ಎಂದರು.

ಧರ್ಮ ಮಾರ್ಗದಲ್ಲಿ ನಡೆದು ಮುಕ್ತಿ ಹೊಂದಿ. ಅಮ್ಮನವರ ವರ್ಣಿಸಲು ಸಾಧ್ಯವಿಲ್ಲದಷ್ಟು ಮಹಿಮೆಯಿದೆ. ಯಾನಾಗುಂಗಿ ದರ್ಶನ ಪಡೆದು ಧನ್ಯವಾಗಿ ಹಿಂಸೆಯನ್ನು ತ್ಯಜಿಸಿ, ಜೀವನ ಪಾವನಗೊಳಿಸಿಕೊಳ್ಳಿ ಎಂದು ಕರೆ ನೀಡಿ, ಸಂಸ್ಕಾರ, ಸಂಸ್ಕೃತಿ ಬೆಳೆಸಿ ಉಳಿಸಲು ಸ್ತ್ರೀಯರ ಪಾತ್ರ ಮುಖ್ಯ ನಿಮ್ಮ ಸಂಸಾರವನ್ನು ಪಾವನಗೊಳಿಸಿಕೊಳ್ಳಿ ಎಂದರು.

ಉತ್ತರ ಭಾಗದಲ್ಲಿ ಲಿಂಗ ಸ್ಥಾಪನೆ ಗುರುಮಠಕಲ್ ಮತ್ತು ಸುತ್ತಮುತ್ತಲಿನ ಭಕ್ತರಿಗೆ ಬಿಟ್ಟಿದ್ದು ಎಂದರು.

ಭಕ್ತರಾದ ಕಿಷ್ಟಪ್ಪ ಪುರುಶೋತ್ತಮ ಮಾತನಾಡಿ, ಅಮ್ಮನವರ ಅಹಿಂಸೋ ಪರಮೋ ಧರ್ಮ ಮಾರ್ಗದಲ್ಲಿ ಎಲ್ಲರೂ ಜೀವನಸಾಗಿಸಿದ್ದೇ ಆದರೇ ಜನ್ಮ ಪಾವನೆಗೊಳ್ಳುತ್ತದೆ ಎಂದರು. ಮನುಷ್ಯ ಜನ್ಮ ಪಡೆದಿದ್ದು ನಮ್ಮೆಲ್ಲರ ಪುಣ್ಯ ಇದನ್ನು ಸಾರ್ಥಕವಾಗಿಸಲು ಒಳ್ಳೆಯ ಕೆಲಸಗಳನ್ನು ಮಾಡಿ ಅಮ್ಮನವರ ಆಶಯದಂತೆ ಸಾಗಬೇಕು ಎಂದು ತಿಳಿಸಿದರು.

ಭಕ್ತರಾದ ವೀರಪ್ಪ ಪ್ಯಾಟಿ, ಜ್ಞಾನೇಶ್ವರ, ಸಂಗೀತೇಶ್ವರಿ ಮಾತಾ, ಪ್ರಸಾದ ಕರೀಂ ನಗರ. ತಿಪ್ಪಣ್ಣ ಇಮಲಾಪೂರ, ಸಾಯಬಣ್ಣ ಯದ್ಲಾಪೂರ, ಸಮ್ಮಯ್ಯ ಗೌಡ ಇಟಕಾಲ್ ಮಾತನಾಡಿದರು.

ನಿವೃತ್ತ ಡಿವೈಎಸ್ಪಿ ಸಿದ್ರಾಮಪ್ಪ ಸಣ್ಣೂರ, ನರಸರೆಡ್ಡಿ ಪೊಲೀಸ್ ಪಾಟೀಲ, ಹಣಮಂತ ಮಡ್ಡಿ, ಭೀಮರಾಯ ಚಂಡರಕಿ, ಮುರಲಿ ಸ್ವಾಮಿ, ಪನ್ನಾಲಾಲ ಪಟೇಲ್, ರಾಮುಲು, ಬಸಣ್ಣ ಅರಬಿಂಜರ್, ಸೂರ್ಯನಾರಾಯಣ ನೀರೆಟಿ, ಆನಂದ ಬೋಯಿನ್ ಮೊಗುಲಪ್ಪ ನಾಯಿನ್ಸ್, ಅನೀಲ ಮೇಂಗಜಿ, ಶಂಕರ ತಳವಾರ, ನರಸಿಂಹಲು ಗಂಗನೋಳ್ ಇತರ ಭಕ್ತರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!