ಸುಕ್ಷೇತ್ರ ಯಾನಾಗುಂದಿ ಮಾತಾ ಮಾಣಿಕೇಶ್ವರಿ ಆಶ್ರಮ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕಮಕನೂರ ಧ್ವನಿ | ಸರ್ಕಾರದ ಸಕಾರಾತ್ಮಕ ಸ್ಪಂದನೆ ಟ್ರಸ್ಟ್, ಭಕ್ತರಲ್ಲಿ ಸಂತಸ | ಮುಖ್ಯಮಂತ್ರಿ, ಸಚಿವ ಹೆಚ್. ಕೆ. ಪಾಟೀಲ್ ಸೇರಿ ಕಲ್ಯಾಣ ಕರ್ನಾಟಕದ ಶಾಸಕರು, ಸಚಿವರಿಗೆ ಅಭಿನಂದನೆ
ಗುರುಮಠಕಲ್/ ಸೇಡಂ: ಸುಕ್ಷೇತ್ರ ಯಾನಾಗುಂದಿ ಸೂರ್ಯನಂದಿ ಬೆಟ್ಟದಲ್ಲಿರುವ ಮಾತಾ ಮಾಣಿಕೇಶ್ವರಿ ಆಶ್ರಮವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಸರಕಾರ ನಿರ್ಧರಿಸಿ ಘೋಷಣೆ ಮಾಡಿದ್ದಕ್ಕಾಗಿ ಆಶ್ರಮದ ಭಕ್ತರಿಗೆ ಮತ್ತು ಟ್ರಸ್ಟ್ ನ ಸದಸ್ಯರುಗಳಿಗೆ ಅತೀವ ಸಂತೋಷವಾಗಿದೆ. ಇದೇ ಸಂದರ್ಭದಲ್ಲಿ ಸರಕಾರಕ್ಕೆ ಮತ್ತು ಸಚಿವರಿಗಳಿಗೆ ನಮ್ಮ ಆಶ್ರಮವತಿಯಿಂದ ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದು ಟ್ರಸ್ಟ್ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಸಂತಸ ವ್ಯಕ್ತಪಡಿಸಿದರು.
ಸಮೀಪದ ಯಾನಾಗುಂದಿ ಮಾತಾ ಮಾಣಿಕೇಶ್ವರಿ ಆಶ್ರಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮಾತಾ ಮಾಣಿಕೇಶ್ವ ರಿ ಆಶ್ರಮವನ್ನು ಪ್ರವಾಸ ತಾಣವನ್ನಾಗಿ ಮಾಡುವಂತೆ ವಿಧಾನ ಪರಿಷತ್ನ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ವಿಷಯ ಪ್ರಸ್ತಾಪಿಸಿ ದಾಗ ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್.ಕೆ.ಪಾಟೀಲ್ ಸಕಾರಾತ್ಮಕವಾಗಿ ಸ್ಪಂಧಿಸಿದಕ್ಕೆ ಧನ್ಯವಾದಗಳು ತಿಳಿಸುತ್ತೇನೆ. ಹಿಂದೆ ಮಾಜಿ ಸಚಿವ ಡಾ.ಮಲಕರೆಡ್ಡಿ ಅವರ ಜೊತೆಯಲ್ಲಿ ಹೆಚ್.ಕೆ ಪಾಟೀಲ್ ನಮ್ಮ ಆಶ್ರಮಕ್ಕೆ ಬಂದು ಮಾತಾಜಿಯ ದರ್ಶನ ಪಡೆದ್ದಾರೆ ಎಂದು ಅವರು ಸ್ಮರಿಸಿದರು.
ಜೀವಮಾನದುದ್ದಕ್ಕೂ ಅಹಿಂಸಾ ತತ್ವ ಸಾರಿದ ಮಹಾನ್ ಚೇತನ ಮಾತಾ ಮಾಣಿಕೇಶ್ವರಿ ಅಮ್ಮನವರು
ಇಲ್ಲಿನ ಕ್ಷೇತ್ರದ ದರ್ಶನಕ್ಕೆ ದೇಶ ವಿದೇಶಗಳಿಂದ ಪ್ರತಿನಿತ್ಯ ಸಾವಿರಾರು ಭಕ್ತರು ಸಂದರ್ಶಿಸುತ್ತಾರೆ. ಇಲ್ಲಿನ ಭಕ್ತರಿಗೆ ಕ್ಷೇತ್ರದ ಅಭಿವೃದ್ದಿಯಷ್ಟೇ ಅಲ್ಲದೆ ಹೆಚ್ಚಿನ ಮೂಲಭೂತ ಸೌಕರ್ಯಗಳ ಕಲ್ಪಿಸುವ ಹಿನ್ನಲೆ ಸರಕಾರ ಮತ್ತು ಸಚಿವರು ಮುಂದಾಗಿರುವುದು. ಅವರನ್ನು ಅಭಿನಂದಿಸಲು ವಾರದೊಳಗೆ ಟ್ರಸ್ಟ್ ಸದಸ್ಯರು ತೆರಳಲಿದ್ದಾರೆ ಎಂದು ತಿಳಿಸಿದರು.
ಮಾತಾ ಮಾಣಿಕೇಶ್ವರಿ ಅವರು 15 ನೇ ವಯಸ್ಸಿನಲ್ಲಿ ಯಾನಾಗುಂದಿ ಬೆಟ್ಟಕ್ಕೆ ಆಗಮಿಸಿ ಆಶ್ವತ್ಥ ಮರದ ಮೇಲೆ ಕುಳಿತು ಏಕಾಂಗಿಯಾಗಿ ಧ್ಯಾನಾಸಕ್ತರಾಗುತ್ತಿದ್ದರು. ಇದಕ್ಕೆ ಸಿದ್ದೇಶ್ವರ ಬೆಟ್ಟ ಎಂತಲೂ ಕರೆಯುತ್ತಾರೆ. ಶ್ರೀ ಮಹಾಯೋಗಿನಿ ಅಮ್ಮನವರೇ ತಮ್ಮ ಮೂಲ ಹೆಸರನ್ನು 2006-07ರಲ್ಲಿ ಶ್ರೀ ಶ್ರೀ ಶ್ರೀ ಸದ್ಗುರು ರೂಪರಹಿತ ಅಹಿಂಸಾ ಯೋಗಿಶ್ವರ ವೀರ ಧರ್ಮಜ ಮಾತಾಜಿ ಎಂದು ಸಾವಿರಾರು ಸದ್ಭಕ್ತರು ಸಮ್ಮುಖದಲ್ಲಿ ಸ್ವಯಂ ಘೋಷಣೆ ಮಾಡಿಕೊಂಡಿದ್ದರು. ಘೋಷಣೆ ಮಾಡಿಕೊಂಡ ಕೆಲವೇ ದಿನಗಳಲ್ಲಿ ಆಶ್ರಮ ಟ್ರಸ್ಟ ರಚಿಸಿಕೊಂಡಿದೆ. ಟ್ರಸ್ಟ್ ಅಡಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸುಮಾರು 70 ಆಶ್ರಮಗಳು ಅಮ್ಮನವರ ಹೆಸರಿನಲ್ಲಿ ನಡೆಯುತ್ತಿ ಎಂದರು.
ಅಜ್ಞಾನದಿಂದ ಹೊರಬಂದು ಅಮ್ಮನವರ ಆಶಯ ದಂತೆ ಅಹಿಂಸಾ ಮಾರ್ಗದಲ್ಲಿ ಸಾಗಿದರೆ ಮಾನವ ಜನ್ಮ ಪಾವನ – ಶಿವಯ್ಯ ಸ್ವಾಮಿ
ಇಂತಹ ಆಶ್ರಮಕ್ಕೆ ಪ್ರವಾಸಿ ತಾಣವಾಗಿ ಘೋಷಿಸಿರುವ ಸಚಿವರಿಗೆ, ಸರಕಾರಕ್ಕೆ ಮತ್ತು ಎಂಎಲ್ಸಿಗಳಾದ ತಿಪ್ಪಣ್ಣಪ್ಪ ಕಮಕನೂರ ಮತ್ತು ಸಾಯಬಣ್ಣ ತಲಾವರ್, ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಮತ್ತು ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಸೇರಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಟ್ರಸ್ಟ್ ಸದಸ್ಯರಿಂದ ಅಭಿನಂದನೆಗಳು ತಿಳಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಟ್ರಸ್ಟ್ ಸದಸ್ಯರಾದ ನಿವೃತ್ತ ಡಿವೈಎಸ್ಪಿ ಸಿದ್ರಾಮಪ್ಪ ಸಣ್ಣೂರ, ಪಿ.ಕಿಷ್ಟಪ್ಪ, ಜ್ಞಾನೇಶ್ವರ, ಹಣಮಂತ ಮಡ್ಡಿ, ಮಲ್ಲೇಶ, ಜಗಜೀವನ ರೆಡ್ಡಿ, ಸತ್ಯಯ್ಯಗೌಡ ಇಟಕಾಲ್, ಭೀಮರಾವ್ ಚಂಡರಕಿ, ಶಂಕರ ತಳವಾರ, ಪ್ರಕಾಶ, ಬಸರೆಡ್ಡಿ ಪ್ರಸಾದ್, ಪರಶುರಾಮರೆಡ್ಡಿ ಸೇರಿದಂತೆ ಇತರರು ಇದ್ದರು.
