ಗ್ರಾಮೀಣ ಪ್ರತಿಭೆಗೆ ಸಿಕ್ಕ ಗೌರವ | ಇನ್ಸ್ ಪೆಕ್ಟರ್ ರಾಜುಗೆ ಅವರ ಗುರುಗಳಿಂದ ಅಭಿನಂದನೆ
ಗುರುಮಠಕಲ್: ಗಡಿ ತಾಲೂಕು ಗುರುಮಠಕಲ್ ನ ಪುಟಪಾಕ ತಾಂಡಾದ ಪ್ರತಿಭಾವಂತ ತಮ್ಮ ಕೈಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗೆ 2024 ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಮಾಡಲಾಗಿದ್ದು, ಅವರ ಗುರುಗಳು ಹಾಗೂ ತಾಂಡಾ ನಿವಾಸಿಗಳಲ್ಲಿ ಸಂತಸ ಮೂಡಿಸಿದೆ.
ರಾಜು ರಾಠೋಡ ಎಂಬುವವರೇ ಮುಖ್ಯಮಂತ್ರಿಗಳ ಚಿನ್ನದ ಪದಕ ಗಿಟ್ಟಿಸಿಕೊಂಡವರು. ಇವರು ದಿವಂಗತ ಪೂರಿಯಾ ನಾಯಕ್ ಮತ್ತು ರಾಮಿಬಾಯಿ ದಂಪತಿರವರ ನಾಲ್ಕನೇ ಸುಪುತ್ರ.
ತಮ್ಮ ಶಾಲಾ ಶಿಕ್ಷಣವನ್ನು ಗುರುಮಠಕಲ್ ನ ವಿದ್ಯಾಜ್ಯೋತಿ ಪ್ರಾಥಮಿಕ ಶಾಲೆ , ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆ ಪುಟಪಾಕ್ ಇಲ್ಲಿ ಪಡೆದು, ಪಿಯುಸಿ ಶಿಕ್ಷಣವನ್ನು ಧಾರವಾಡ ಮತ್ತು ಇಂಜಿನಿಯರಿಂಗ್ ಪದವಿಯನ್ನು ದಾವಣಗೆರೆಯಲ್ಲಿ 2015ರಲ್ಲಿ ಪಡಿದಿರುತ್ತಾರೆ. ಸದರಿಯವರು 2016 ನೇ ಸಾಲಿನಲ್ಲಿ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಆಯ್ಕೆಗೊಂಡಿದ್ದಾರೆ.
ಪ್ರಸ್ತುತ ಸಿಸಿಟಿ (ಗರುಡ ಪಡೆ) ಬೆಂಗಳೂರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಕರ್ನಾಟಕ ರಾಜ್ಯ ಪೋಲಿಸ್ ತಂಡವನ್ನು ಪ್ರತಿನಿಧಿಸಿ, ಪ್ರಥಮ ಸ್ಥಾನಗಳಿಸಿ ರಾಜ್ಯ ಪೋಲಿಸ್ ಇಲಾಖೆಯ ಪ್ರಖ್ಯಾತಿಯನ್ನು ಹೆಚ್ಚಿಸಿರುತ್ತಾರೆ. ತಮ್ಮ ಕರ್ತವ್ಯ ನಿಷ್ಠೆಯನ್ನು ಪರಿಗಣಿಸಿದ ರಾಜ್ಯ ಪೋಲಿಸ್ ಇಲಾಖೆ ಮುಖ್ಯಮಂತ್ರಿಯವರ ಪದಕಕ್ಕೆ ಶಿಫಾರಸ್ಸು ಮಾಡಿತ್ತು. 2024 ನೇ ಸಾಲಿನ ಮುಖ್ಯಮಂತ್ರಿರವರ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಇವರು ಸಾಧನೆಗೆ ನಿವೃತ್ತ ಗುರು ಮಲ್ಲಿಕಾರ್ಜುನ ಮಲಖೇಡ ಹಾಗೂ ಸ್ಥಳೀಯರು ಅಭಿನಂದಿಸಿದ್ದಾರೆ.
