ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಯಲಕಪಳ್ಳಿ ಗ್ರಾಮದಲ್ಲಿ ಶುಕ್ರವಾರ ಸಡಗರ ಸಂಭ್ರಮದೊಂದಿಗೆ ಶ್ರೀ ದ್ಯಾವಮ್ಮ ದೇವಿಯ ಮೂರ್ತಿ ಭವ್ಯ ಮೆರವಣಿಗೆ ನಡೆಸಿ ದೇವಾಲಯದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.

ಯಲಕಪಳ್ಳಿ ಗ್ರಾಮದ ಹೃದಯ ಭಾಗದಲ್ಲಿರುವ ದ್ಯಾವಮ್ಮ ದೇಗುಲವು ಗ್ರಾಮದ ಆರಾಧ್ಯ ದೈವವಾಗಿದ್ದು ಪ್ರತಿ ವರ್ಷ ಮೂರು ವರ್ಷಗೊಮ್ಮೆ ದೇವಿಯ ಜಾತ್ರೆ ನಡೆಸಲಾಗುತ್ತದೆ. ಗ್ರಾಮದ ಭಕ್ತರ ಆಪೇಕ್ಷೆಯಂತೆ ದೇಗುಲದಲ್ಲಿ ಕಂಚಿನ‌ ಮೂರ್ತಿ ಪ್ರತಿಷ್ಠಾಪನೆ ಮಾಡಲು ಭಕ್ತರಿಂದ ಸಂಗ್ರಹವಾದ ಕಾಣಿಕೆ ಹಣದಲ್ಲಿ 65 ಕೆಜಿಯ ಕಂಚಿನ ದ್ಯಾವಮ್ಮ ಮೂರ್ತಿ ಮಾಡಿಸಲಾಗಿತ್ತು.ಕೋಟಗಾ ಗ್ರಾಮದಿಂದ ತೈಯಾರಿಸಲಾದ ಕಂಚಿನ ಮೂರ್ತಿಯನ್ನು ತರಲಾಗಿತ್ತು.ವಿವಿಧ ವಾದ್ಯಗಳ ಮೆಳದೊಂದಿಗೆ ಗ್ರಾಮದ ಪ್ರಮುಖ ರಸ್ತೆ ಮಾರ್ಗದಲ್ಲಿ ಶ್ರದ್ಧಾ ಭಕ್ತಿಯಿಂದ ದೇವಿಯ ಮೂರ್ತಿ ಮೆರವಣಿಗೆ ಮಾಡಲಾಯಿತು.

ಸುಲೇಪೇಟ್ ನ ಟೆಂಗಿನಮಠದ ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ದ್ಯಾವಮ್ಮ ದೇಗುಲದಲ್ಲಿ ವಿವಿಧ ಪೂಜೆ ಕಾರ್ಯಕೈಗೊಂಡು ದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.

ಮೆರವಣಿಗೆಯಲ್ಲಿ ಮಹಿಳೆಯರು, ಮಕ್ಕಳು ಗ್ರಾಮದ ಭಕ್ತರು ಭಾಗವಹಿಸಿ ದೇವಿಗೆ ಜೈಕಾರ ಹಾಕುತ್ತಾ ಮೆರವಣಿಗೆ ನಡೆಸಲಾಯಿತು.ಮೂರ್ತಿ ಪ್ರತಿಷ್ಠಾಪನೆ ನಂತರ ಭಕ್ತರು ಪೂಜೆ ಮಾಡಿ ದೇವಿಯ ಕೃಪೆಗೆ ಪಾತ್ರರಾದರು.

ಈ ವೇಳೆ ಶಿವಲಿಂಗಯ್ಯ ಸ್ಥಾವರಮಠ, ಸಿದ್ದಾರೆಡ್ಡಿ ಬಟಗೇರಿ, ನವಾಜ್ ರೆಡ್ಡಿ ಕುಪನೂರು, ವೈಜನಾಥರೆಡ್ಡಿ ಕುಪನೂರು, ಮಲ್ಲಿಕಾರ್ಜುನ ಕೇರಳ್ಳಿ, ಸಿದ್ದಪ್ಪಗೌಡ ಪೊಲೀಸ್ ಪಾಟೀಲ, ಮಹಾಂತಗೌಡ ಪೊಲೀಸ್ ಪಾಟೀಲ, ವಿಜಯ ಕುಮಾರ್ ಮಾಲಿಪಾಟೀಲ್, ಶಿವರಾವ್ ಮಾಲಿ ಪಾಟೀಲ, ಸಿದ್ದಯ್ಯ ಸ್ಥಾವರಮಠ, ಮಹೇಶ ದುಪುದ್, ಮಲ್ಲಪ್ಪ ಪೂಜಾರಿ, ನರಸಪ್ಪ ಭೂತಾಳಿ, ಹಣಮಂತ ಭೂತಾಳಿ, ಹಣಮಂತ ಆವಂಟಿಗಿ, ದಸ್ತಗೀರ್ ಸಾಬ್, ಖತಲಪ್ಪ ತಿಗಡಿ, ರುದ್ರಪ್ಪ , ಸೂರಪ್ಪ ಭೂತಾಳಿ ಸೇರಿದಂತೆ ಅನೇಕರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!