ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ | ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಪ್ರತಿಭಟನೆ
ಯಾದಗಿರಿ: “ಪರಿಶಿಷ್ಟರ ಹಣ ಪರಿಶಿಷ್ಟರಿಗೆ ಮಾತ್ರ” ಎಸ್.ಸಿ, ಎಸ್.ಪಿ-ಟಿ.ಎಸ್.ಪಿ- 2013 ರ ಕಾಯ್ದೆಯ ಸಮರ್ಪಕ ಜಾರಿಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರಮುಖರು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಅವಕಾಶಗಳನ್ನು ಶಾಸನಬದ್ದವಾಗಿ ಹೊಂದಲು ರಾಜ್ಯ ಸರ್ಕಾರಗಳು ಕಾಯ್ದೆ ರೂಪಿಸಿದೆ.
ಕಾಯ್ದೆಯ ಕಲಂ 7ಡಿ ಮತ್ತು 7ಸಿ ರಲ್ಲಿ ಕಾಯ್ದೆಯಡಿ ನಿಗಧಿಪಡಿಸಿದ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಂಡು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಸರ್ಕಾರಗಳು ವಂಚಿಸುತ್ತಿವೆ. ಆದ್ದರಿಂದ 7ಡಿ ಮತ್ತು 7ಸಿ ಕಲಂಗಳನ್ನು ರದ್ದು ಪಡಿಸುವಂತೆ ಹಲವಾರು ದಲಿತರ ಹೋರಾಟಗಳ ಫಲದಿಂದ 7ಡಿ ರದ್ದು ಮಾಡಿ 7ಸಿ ಯನ್ನು ಯಥಾಪ್ರಕಾರ ಉಳಿಸಿಕೊಂಡು ಅನ್ಯ ಕಾರ್ಯಗಳಿಗೆ ಬಳಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅನ್ಯ ಕಾರ್ಯಗಳಿಗೆ ಬಳಸಿರುವ ಹಣವನ್ನು ವಾಪಸ್ ಪಡೆದು ಪರಿಶಿಷ್ಟ ಅಭಿವೃದ್ಧಿಗಾಗಿ ಉಪಯೋಗಿಸಬೇ ಕೆಂದು ಒತ್ತಾಯಿಸಿದರು. ಅಲ್ಲದೆ 38 ಇಲಾಖೆಗಳ ಲ್ಲಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಕಾಲ ಕಾಲಕ್ಕೆ ತುಂಬುವ ಮೂಲಕ ದಲಿತರ ಏಳಿಗೆಗಾಗಿ ಕ.ದ.ಸಂ.ಸ ಒತ್ತಾಯಿಸಿದೆ.
ಈ ವೇಳೆ ಸಂಘಟನೆಯ ಮೋಹನ್ ರಾಜ್ ಗೌಡ, ಅರುಣಕುಮಾರ ನಾಟೇಕಾರ, ಯೇಸು ಹೊಸಳ್ಳಿ, ಪ್ರವೀಣ ಹೊಸಳ್ಳಿ, ಮಲ್ಲಿಕಾರ್ಜುನ ಕಟ್ಟಿಮನಿ,ಶರಣು ಗಾಡಿ, ಅಶೋಕ, ಹನುಮಂತ ಗಬ್ಬೂರ, ಭೀಮರಾಯ ಕರಣಿಗಿ, ಆಂಜನೇಯ ಟೊಣ್ಣೂರ, ಭೀಮಾಶಂಕರ ಮಲ್ಹಾರ, ಶರಣಪ್ಪ ಸಾವೂರ, ಕಾಮಣ್ಣ ದೇವಿ ನಗರ, ಹೊನ್ನಪ್ಪ ಪಣಿ, ಹೊನ್ನಪ್ಪ ನಾಟೇಕಾರ, ಸುಂದರ ರಸ್ತಾಪೂರ, ಹಣಮಂತ ಹುಲಕಲ್ ಇತರರು ಇದ್ದರು.
