ನಾರಾಯಣಪೂರದಲ್ಲಿ ವೈಭವದ ಶ್ರೀ ವೀರಭದ್ರೇಶ್ವರ ಉತ್ಸವ |ಭಕ್ತಿ ಪರಾಕಾಷ್ಟೆಯ ಅಗ್ನಿ ಸೇವೆ | ದಾಸೋಹ ಸ್ವೀಕರಿಸಿ ಅಸಂಖ್ಯಾತ ಜನ
ಗುರುಮಠಕಲ್: ಪಟ್ಟಣದ ನಾರಾಯಣಪೂರ ಬಡಾವಣೆಯ ಪ್ರಸಿದ್ಧ ಶ್ರೀ ವೀರಭದ್ರೇಶ್ವರರ 25ನೇ ವರ್ಷದ ಉತ್ಸವವು ಶ್ರಧ್ಧಾ ಭಕ್ತಿಯಿಂದ ನೆರವೇರಿತು.
ಪಟ್ಟಣದಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ವೀರಭದ್ರಸ್ವಾಮಿ ಮೂರ್ತಿಗೆ ಮಹಾರುದ್ರಾಭಿಷೇಕ ಮತ್ತು ಅಲಂಕಾರ ಮತ್ತು ಮಹಾಮಂಗಳಾರತಿ ನಡೆಯಿತು. ವೀರಭದ್ರ ದೇವರ ಉತ್ಸವ ಮೂರ್ತಿಯನ್ನು ಮುಖ್ಯ ರಸ್ತೆಯ ಮೂಲಕ ಪಲ್ಲಕ್ಕಿಯಲ್ಲಿ ಜಯಘೋಷಗಳಿಂದ ಮೆರವಣಿಗೆ ನಡೆಸಲಾಯಿತು.
ರಸ್ತೆಯುದ್ದಕ್ಕೂ ಉಗ್ರರೂಪ ತಾಳಿದ ಶಿವನ ಅಂಶವಾದ ಶ್ರೀ ವೀರಭದ್ರನು ದಕ್ಷಪ್ರಜಾಪತಿಯ ಯಜ್ಞವನ್ನು ಧ್ವಂಸಗೊಳಿಸಿದ ಪೌರಾಣಿಕ ಹಿನ್ನಲೆಗಳ ವಡಬುಗಳ ಉದ್ಘಾರದಿಂದ ಖಡ್ಗ ಝಳಪಿಸುತ್ತಾ ಪುರವಂತರ ಕುಣಿತವು ನೋಡುಗರ ಮನ ಸೆಳೆಯಿತು.
ಭಕ್ತರ ಹಲವಾರು ನಂಬಿಕೆಗಳ ಪಲ್ಲಕ್ಕಿ ಜೊತೆಗೆ ಅಗ್ಗಿ ಸೇವೆಯನ್ನು ಸಲ್ಲಿಸುವ ಮೂಲಕ ಉತ್ಸವವು ಸಂಪನ್ನಗೊಂಡಿತು. ಬಂದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಈ ವೇಳೆ ಸಮಾಜದ ಮುಖಂಡರು ಸೇರಿದಂತೆ ಅಪಾರ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
